'ಸತ್ಯ' ಧಾರಾವಾಹಿಯ ಈ ನಟಿ ಕಿರುತೆರೆಯಿಂದ ದೂರ ಉಳಿಬಿಟ್ರಾ?

By ಅನಿತಾ ಬನಾರಿ

ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ನಟ ನಟಿಯರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಮಾಮೂಲಿ ಸಂಗತಿ. ಇದರ ಹೊರತಾಗಿ ಇನ್ನು ಕೆಲವರು ಪರಭಾಷೆಯ ಕಿರುತೆರೆಗೂ ಕಾಲಿಟ್ಟು, ಅಲ್ಲಿಯೂ ನಟನಾ ಛಾಪನ್ನು ಪಸರಿಸುತ್ತಾರೆ. ಆದರೆ ಈಕೆಯ ವಿಚಾರದಲ್ಲಿ ಹಾಗಲ್ಲ.

ನಟನೆಯಿಂದ ದೂರವಿರುವ ಈಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಉಪಯುಕ್ತವಾದ ಮಾಹಿತಿಗಳನ್ನು, ಫ್ಯಾಷನ್‌ಗೆ ಸಂಬಂಧಿಸಿದ ವಿಚಾರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಫಾಲೋವರ್ಸ್ ಅನ್ನು ಆ್ಯಕ್ಟೀವ್ ಆಗಿರಿಸುವ ಈಕೆಯ ಹೆಸರು ಅನು ಜನಾರ್ಧನ್.

Do you know why actress Anu Janardhan is away from acting

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಅಕ್ಕ ಕೀರ್ತನಾ ಪಾತ್ರದಲ್ಲಿ ಅನು ಜನಾರ್ಧನ್ ಅಭಿನಯಿಸಿದ್ದರು. ಹೌದು, ಖಳನಾಯಕಿ ಕೀರ್ತನಾ ಪಾತ್ರಕ್ಕೆ ಜೀವ ತುಂಬಿದ್ದ ಅನು ಜನಾರ್ಧನ್ ತಮ್ಮ ಸಹಜ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಬೆಡಗಿ. ಮುಂದೆ ಕಾರಣಾಂತರಗಳಿಂದ ಕೀರ್ತನಾ ಪಾತ್ರದಿಂದ ಈಕೆ ಹೊರಬಂದಿದ್ದರು.

ಸದ್ಯ ನಟನೆಯಿಂದ ದೂರವಿರುವ ಅನು ಜನಾರ್ಧನ್ ಅವರ ನಟನಾ ಪಯಣ ಶುರುವಾದದ್ದು ಪೌರಾಣಿಕ ಧಾರಾವಾಹಿಯ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಕಾಳಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ತದ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್' ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀವಿಷ್ಣು ದಶಾವತಾರ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಅನು ಜನಾರ್ಧನ್ ನಂತರ ಖಳನಾಯಕಿಯಾಗಿ ಬಡ್ತಿ ಪಡೆದಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿ ವಿಭಾ ಪಾತ್ರಕ್ಕೆ ಜೀವ ತುಂಬಿದ್ದರು ಅನು ಜನಾರ್ಧನ್. ಮೊದಲ ಬಾರಿಗೆ ವಿಲನ್ ಆಗಿ ತೆರೆಯ ಮೇಲೆ ಕಾಣಿಸಿಕೊಂಡಿರುವ ಅನು ಜನಾರ್ಧನ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಆರ್ ಜೆ ಆಗಿ ಅಭಿನಯಿಸಿದ್ದರು ಅನುಶ್ರೀ. ಸಣ್ಣ ಪಾತ್ರವಾದರೂ 'ಬ್ರಹ್ಮಗಂಟು' ಧಾರಾವಾಹಿಯಲ್ಲಿಯೂ ಆಕೆ ನೆಗೆಟಿವ್ ರೋಲ್‌ಗೆ ಜೀವ ತುಂಬುವ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು. 'ಸತ್ಯ' ಧಾರಾವಾಹಿಯಲ್ಲಿಯೂ ಖಳನಾಯಕಿಯಾಗಿ ಮಿಂಚಿದ್ದ ಈಕೆ ನಟನೆಯ ಹೊರತಾಗಿ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಬೆಡಗಿ.

ಬಾಲ್ಯದಿಂದಲೂ ನೃತ್ಯ ಕ್ಷೇತ್ರದತ್ತ ಆಸಕ್ತಿ ಹೊಂದಿದ್ದ ಅನುಶ್ರೀ ನೃತ್ಯಗಾರ್ತಿಯಾಗಬೇಕೆಂದೇ ಬಯಸಿದ್ದರು. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನಟನೆಯಿಂದ ದೂರವಿರುವ ಈಕೆ ಸೋಶಿಯಲ್ ಮೀಡಿಯಾದ ಮೂಲಕ ನೆಟ್ಟಿಗರ ಜೊತೆಗೆ ಸಂಪರ್ಕದಲ್ಲಿ ಇಲ್ಲಿದ್ದಾರೆ. ಪ್ರತಿಬಾರಿಯೂ ಉಪಯುಕ್ತವಾದ ವಿಡಿಯೋಗಳನ್ನು ಅನು ಜನಾರ್ಧನ್ ಹಂಚಿಕೊಳ್ಳುತ್ತಿದ್ದು ಅದು ಸಾವಿರಗಟ್ಟಲೆ ವೀವ್ಸ್ ಬರುತ್ತಿದೆ.

More from Filmibeat

English summary
Do you know why actress Anu Janardhan is away from acting;
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X