Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ತಾಯಿ ಆಗಿಲ್ಲ ಏಕೆ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಟಿ
ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್, ತಮ್ಮ ಅಭಿನಯದ ಮೂಲಕವೇ ಜನ ಮನ ಗೆದ್ದವರು, ಕಿರುತೆರೆಯಲ್ಲಿ ಹಲವು ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾದವರು ಶ್ವೇತಾ ಪ್ರಸಾದ್. ಇನ್ನು ಸದಾ ಸಮಾಜಿಕ ಜಾಲತಾಣದಲ್ಲಿ ಗ್ಲಾಮರಸ್ ಫೊಟೊಗಳನ್ನು ಹಂಚಿಕೊಳ್ಳುವುದರ ಮೂಲಕ ಶ್ವೇತ ಗಮನ ಸೆಳೆಯುತ್ತಾರೆ.
ಶ್ವೇತಾ ಅವ್ರು ಹೇಳಿ ಕೇಳಿ ಚೆಂದುಳ್ಳಿ ಚೆಲುವೆ. ಹಾಗಾಗಿ ಅವರು ಗ್ಲಾಮರ್ ಲುಕ್ ಮಾತ್ರ ಅಂತಲ್ಲ ಯಾವುದೇ ಲುಕ್ ಆದರೂ ಮುದ್ದಾಗಿ ಕಾಣುತ್ತಾರೆ, ಇನ್ನು ಶ್ವೇತಾ ಹೀಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಶ್ವೇತಾ ಪೋಸ್ಟ್ಗೆ ಬಂದಿರುವ ಕಮೆಂಟ್ ಕಂಡು ಗರಂ ಆಗಿದ್ದಾರೆ.
ಶ್ವೇತಾ ಇತ್ತೀಚಿಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಪೋಸ್ಟ್ಗೆ ಮಗು ಬಗ್ಗೆ ಕಾಮೆಂಟ್ಗಳು ಬಂದಿವೆ. ಎಲ್ಲಾ ಅಷ್ಟಾಗಿ ಪ್ರತಿಕ್ರಿಯೆ ನೀಡದ ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ.
ಮಗು ಪಡೆಯುವುದು ಮಹಿಳೆ ಆಯ್ಕೆ!
ಮಗು ಬಗ್ಗೆ ಬಂದಿರುವ ಕಮೆಂಟ್ಗಳಿಗೆ ಉತ್ತರ ಕೊಟ್ಟ ಶ್ವೇತಾ "ನನಗಿನ್ನು ಮಗುವಾಗದೇ ಇರಲು ಕಾರಣವೇನು? ನನ್ನ ವೈಯಕ್ತಿಕ ವಿಚಾರ ನಿಮಗೆ ಸಂಬಂಧಿಸಿದಲ್ಲ. ಮಗುವನ್ನು ಪಡೆಯುವುದು ಮಹಿಳೆಯ ಆಯ್ಕೆಯಾಗಿದೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ. ಓದು, ಮದುವೆಯಾಗು, ಮಗು ಮಾಡಿಕೊ ನಂತರ ಸಾಯಿ ಅಂತ ಸೂತ್ರವೇನೂ ಇಲ್ಲ" ಎಂದು ಬರೆದುಕೊಂಡಿದ್ದಾರೆ.
ಮಕ್ಕಳಾದ ಮಹಿಳೆಯರು ಏನಂತಾರೆ?
ಇನ್ನು ತಮ್ಮ ಮಾತು ಮುಂದುವರೆಸಿದ ಶ್ವೇತಾ ತಮ್ಮ ಪೋಸ್ಟ್ನಲ್ಲಿ "ಮಕ್ಕಳನ್ನು ಹೊಂದಿದ ಮಹಿಳಯರ ಬಗ್ಗೆ ಹೇಳುವುದಾದರೇ, ಕುಟುಂಬದವರ ಒತ್ತಡದಿಂದ, ಸಮಾಜ ಕೇಳುತ್ತಿದೆ ಎಂದು, ಅಮ್ಮ ಹೇಳಿದರು ಎನ್ನುವ ಕಾರಣಕ್ಕೆ. ಇವರೆಲ್ಲರಿಂದ ಒತ್ತಡವಿದೆ ಎನ್ನುವ ಕಾರಣಕ್ಕೆ ಮಗು ಮಾಡಿಕೊಂಡೆವು ಎಂದು ಹೇಳುತ್ತಾರೆ". ಎಂದು ಶ್ವೇತಾ ಪೋಸ್ಟ್ ಮೂಲಕ ಹೇಳಿದ್ದಾರೆ.
ನಿರ್ಧಾರ ಹೆಣ್ಣಿಗೆ ಬಿಟ್ಟಿದ್ದು- ಶ್ವೇತಾ ಪ್ರಸಾದ್!
"ಇದು ತುಂಬಾ ವೈಯಕ್ತಿಕ ಮತ್ತು ಸುಂದರ ಪಯಣ. ಮಗುವನ್ನು ಮಾಡಿಕೊಳ್ಳಲು ನಿರ್ಧರಿಸುವ ಪಯಣ ಹೆಣ್ಣಿಗೆ ತುಂಬಾ ಸುಂದರವಾದುದ್ದು. ಮಗುವನ್ನು ಪಡೆಯಲು ಮಹಿಳೆ ನಿರ್ಧರಿಸಿ ಪಡೆಯಬೇಕು. ಅವಳನ್ನು ನೀವು ನಿರ್ಧರಿಸಬೇಡಿ, ಅವಳ ನಿರ್ಧಾರವನ್ನು ಪ್ರಶ್ನೆ ಮಾಡದಿರಿ. ಇದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ" ಎಂದು ಹೇಳಿದ್ದಾರೆ.
ಆರ್ ಪ್ರದೀಪ್ ಕೈ ಹಿಡಿದ ಶ್ವೇತಾ!
ಶ್ವೇತಾ ಪ್ರಸಾದ್ ಮತ್ತು ಆರ್.ಜೆ ಪ್ರದೀಪ್ ಅವರನ್ನು ಮದುವೆ ಆಗಿ ಸಂತಸದ ಕೌಟುಂಬಿಕ ಜೀವನವನ್ನು ನಡೆಸುತ್ತಿದ್ದಾರೆ. ಈ ಜೋಡಿ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತದೆ. ಇನ್ನು ಮಾಡಲಿಂಗ್ನಲ್ಲೂ ಶ್ವೇತಾ ಸಕ್ರಿಯವಾಗಿದ್ದು, ಆಗಾಗ ಫೊಟೋ ಶೂಟ್ ಮಾಡಿಸಿಕೊಂಡು ಹಮಚಿಕೊಳ್ಳುತ್ತಾರೆ. ಇನ್ನು ಇತ್ತೀಚೆಗೆ ಬಿಕಿನಿ ತೊಟ್ಟ ಫೊಟೋಗಳನ್ನು ಹಂಚಿಕೊಂಡಿದ್ದು, ಫೊಟೋಗಳು ವೈರಲ್ ಲಿಸ್ಟ ಸೇರಿದ್ದವು.