Rachita Ram: ತಲೆಕೂದಲೆಲ್ಲಾ ಕೆದರಿಕೊಂಡು, ರಚಿತಾರಾಮ್ ಕಣ್ಣಿರು ಹಾಕಿದ್ಯಾಕೆ?
ರಚಿತಾ ರಾಮ್ ಸಿನಿಮಾಗಳಲ್ಲೂ ಬ್ಯುಸಿ ಇದ್ದಾರೆ. ಆದರೆ ಈ ಮಧ್ಯೆ ರಿಯಾಲಿಟಿ ಶೊ ಒಂದರ ಜಡ್ಜ್ ಕೂಡ ಆಗಿದ್ದಾರೆ. ಅದು ಡ್ರಾಮಾ ಜೂನಿಯರ್ ಶೋನಲ್ಲಿ. ಜೀ ಕನ್ನಡದಲ್ಲಿ ಈ ಶೋ ಶುರುವಾಗಿ ಕಡಿಮೆ ಅವಧಿಯಾಗಿದ್ದರೂ, ಎಲ್ಲರ ಮನಮುಟ್ಟಿದೆ. ಮುದ್ದು ಮುದ್ದು ಮಕ್ಕಳ ಮಾತು, ಅವರ ಆಕ್ಟಿಂಗ್ ನೋಡಿ ಖುಷಿಯಾಗಿದ್ದಾರೆ.
ಅದರಲ್ಲೂ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿರುವ ಹಿರಿಯ ನಟಿ ಲಕ್ಷ್ಮೀ, ನಟ ರವಿಚಂದ್ರನ್ ಮಕ್ಕಳ ಆಕ್ಟಿಂಗ್ ನೋಡಿ ಎಂಜಾಯ್ ಮಾಡುವುದರ ಜೊತೆಗೆ ಅವರ ತಪ್ಪುಗಳನ್ನು ತಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ರಚಿತಾರಾಮ್ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದಾರೆ.
ಜಡ್ಜ್‌ಗಳಿಗೆ ಕಣ್ಣೀರು ಹಾಕಿಸುತ್ತಿದ್ದಾರೆ ಮಕ್ಕಳು..!
ಡ್ರಾಮಾ ಜೂನಿಯರ್ ಈಗ ನಡೆಯುತ್ತಿರೋದು 4ನೇ ಆವೃತ್ತಿ. ಇಷ್ಡು ಎಪಿಸೋಡ್‌ನಲ್ಲಿ ಬಂದಂತಹ ಅದೆಷ್ಟೋ ಮಕ್ಕಳು ತಮ್ಮ ಪ್ರತಿಭೆಯನ್ನೇ ಅನಾವರಣ ಮಾಡಿವೆ. ಅದರಲ್ಲೂ ತಮ್ಮ ನಟನೆಯಿಂದ ತೀರ್ಪುಗಾರರ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಬಿಡುವ ಈ ಮಕ್ಕಳು ಅಳುತ್ತಾರೆ, ಅಳಿಸುತ್ತಾರೆ. ನಗ್ತಾರೆ, ನಗಿಸ್ತಾರೆ. ಯಾವ ಕಾನ್ಸೆಪ್ಟ್ ತೆಗೆದುಕೊಳ್ತೀವಿ, ಯಾರ ಪಾತ್ರವನ್ನು ನಿಭಾಯಿಸುತ್ತೀವಿ ಎಂಬುದರ ಮೇಲೆ ಅಳೋದು ನಗೋದನ್ನು ತೀರ್ಮಾನ ಮಾಡುತ್ತಾರೆ.
ಈ ಬಾರಿಯ ಸೀಸನ್ ಶುರುವಾದಾಗಲೇ ನಿರೂಪಕ ಆನಂದ್ Recap ತೋರಿಸಿದ್ದರು. ಮಕ್ಕಳ ನಟನೆ, ಅದರಿಂದ ಹಿರಿಯ ನಟಿ ಲಕ್ಷ್ಮೀ ಭಾವುಕರಾಗಿದ್ದ ರೀತಿ ಇದೆಲ್ಲವನ್ನೂ ಒಮ್ಮೆ ದೃಶ್ಯ ರೂಪದಲ್ಲಿ ತೋರಿಸಿದ್ದರು. ಕಳೆದ ಅಷ್ಟು ಎಪಿಸೋಡ್‌ನಲ್ಲಿ ಬಂದು ಹೋದ ಮಕ್ಕಳು ಇದೀಗ ಒಳ್ಳೊಳ್ಳೆ ಪಾತ್ರಗಳನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿ, ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ.

ಪುಟಾಣಿಗಳ ಮಕ್ಕಳ ಡ್ರಾಮಾ ನೋಡಿ ಪ್ರೇಕ್ಷಕರಿಗೆ ಶಾಕ್..!
ಪ್ರತಿ ಬಾರಿಯಂತೆ ಈ ಬಾರಿಯೂ ಪುಟಾಣಿ ಮಕ್ಕಳು ಈ ಶೋನಲ್ಲಿದ್ದಾರೆ. ಅದರಲ್ಲೂ 4-5 ವರ್ಷದ ಮಕ್ಕಳೇ ಹೆಚ್ಚು ರಂಜಿಸುತ್ತಿರೋದು. ಅವರದ್ದೇ ಲೋಕ, ಹೇಳಿಕೊಟ್ಟದ್ದನ್ನು ಮಾತ್ರ ಚಾಚು ತಪ್ಪದೆ, ಎಲ್ಲಿಯೂ ಮಿಸ್ಟೇಕ್ ಆಗದ ರೀತಿ ಜಡ್ಜ್‌ಗಳಿಗೆ ಒಪ್ಪಿಸಿ ಬಿಡ್ತಾರೆ. ಅದರಲ್ಲೂ ಜಡ್ಜ್‌ಗಳಿಗೆ ಯಾವುದೇ ತಪ್ಪುಗಳು ಕಾಣಿಸಬಾರದು. ಕಡಿಮೆ ಮಾರ್ಕ್ಸ್ ಕೊಡಬಾರದು ಆ ರೀತಿ ನಟಿಸಿ ಸುಮ್ಮನೆ ನಿಂತು ಬಿಡುತ್ತಾರೆ.
ತಮ್ಮ ವಯಸ್ಸನ್ನೂ ಮೀರಿ ಮಕ್ಕಳು ತಮ್ಮ ಟ್ಯಾಲೆಂಟ್ ಪ್ರೂವ್ ಮಾಡುತ್ತಿದ್ದಾರೆ. ಅದರಲ್ಲೂ ಈ ವಾರ ರಿಧಿ ಫರ್ಫಾಮೆನ್ಸ್ ನೋಡಿ ಮೂವರು ಜಡ್ಜ್ ಫಿದಾ ಆಗಿದ್ದಷ್ಟೇ ಅಲ್ಲ. ರಚಿತಾ ರಾಮ್ ಗೊಳೋ ಅಂತ ಕಣ್ಣೀರು ಹಾಕಿದ್ದಾರೆ.

ರಚಿತಾ ರಾಮ್ ಕಣ್ಣಲ್ಲಿ ನೀರು ತರಿಸಿದ ರಿಧಿ
ನೀವೆಲ್ಲಾ ಡ್ರಾಮಾ ಜ್ಯೂನಿಯರ್ ನೋಡೋದನ್ನು ಮಿಸ್ ಮಾಡಿರೋಲ್ಲ ಅನ್ನೋದು ಗೊತ್ತಿರೋ ವಿಚಾರ. ಈ ಬಾರಿ ವೆರೈಟಿ ವೆರೈಟಿ ಟ್ಯಾಲೆಂಟ್ ಇರೋ ಮಕ್ಕಳಿದ್ದಾರೆ. ಅದರಲ್ಲಿ ರಿಧಿ ಕೂಡ ಒಬ್ಬಳು. ಆಕೆಗೆ ಇನ್ನು 5 ವರ್ಷವಷ್ಟೆ. ಆದರೆ ನಟನೆಯಲ್ಲಿ ದೊಡ್ಡರಂತೆ ನಟಿಸುತ್ತಾಳೆ.
ಆಕೆಯ ನಟನೆ ನೋಡ್ಬೇಕು ಅಂದ್ರೆ ನೀವೆಲ್ಲಾ ಈ ವಾರದ ಎಪಿಸೋಡ್ ಮಿಸ್ ಮಾಡುವ ಹಾಗೆ ಇಲ್ಲ. ಮಿನುಗುತಾರೆ ಕಲ್ಪನಾರನ್ನು ಫಾಲೋ ಮಾಡೋದು, ಅವರು ನಟಿಸಿದಂತೆ ನಟಿಸೋದು ಸುಲಭವಲ್ಲ. ಅದರಲ್ಲೂ ಇಷ್ಟು ಪುಟಾಣಿ ಮಕ್ಕಳಿಗೆ ಅದು ಅಸಾಧ್ಯವೇ ಸರಿ. ಕಲಿಯುವ ಮನಸ್ಸಿದ್ದರೆ, ಕಲೆ ಗೊತ್ತಿದ್ದರೆ ಯಾವುದು ಅಸಾಧ್ಯವಲ್ಲ ಅನ್ನೋದನ್ನು ರಿಧಿ ಪ್ರೂವ್ ಮಾಡಿದ್ದಾಳೆ.
ಸ್ಟೇಜ್ ಮೇಲೆ ಮಿನುಗುತಾರೆ ಕಲ್ಪನಾ ಅವತಾರ ತಾಳಿದ ರಿಧಿ, ಒಂದೇ ಒಂದು ಅವಕಾಶ ಕೊಡಬಾರದಿತ್ತಾ ಎಂಬ ಮಾತಿಗೆ ಕರಗಿ ರಚಿತಾ ಕಣ್ಣಲ್ಲೂ ನೀರು ಬಂದಿದೆ. ರಚಿತಾ ಕೂಡ ಸ್ಟೇಜ್ ಮೇಲೆ ಬಂದು ಆ ಮಗು ಮಾಡಿದಂತೆಯೇ ನಟಿಸಿದ್ದಾರೆ. ಮಗುವಿನಿಂದಲೇ ಉಡುಗೊರೆ ತೆಗೆದುಕೊಂಡು, ಎಮೋಷನಲ್ ಆಗಿದ್ದಾರೆ.


Click it and Unblock the Notifications











