»   » ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ 'ದೊಡ್ಮನೆ ಹುಡ್ಗ'ನಿಗೆ 'TRP' ಅವಾರ್ಡ್.!

ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ 'ದೊಡ್ಮನೆ ಹುಡ್ಗ'ನಿಗೆ 'TRP' ಅವಾರ್ಡ್.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಸಿನಿಮಾ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದೆ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ನಂತರ ಕಿರುತೆರೆಯಲ್ಲೂ ಪ್ರಸಾರವಾಗಿ 'TRP' ರೇಟಿಂಗ್ ನಲ್ಲಿ ನಂಬರ್ 1 ಸ್ಥಾನವನ್ನ ಪಡೆದುಕೊಂಡಿದೆ. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಅಂಬರೀಷ್, ರಾಧಿಕಾ ಪಂಡಿತ್ ಸೇರಿದಂತೆ ಹಲವರು ಅಭಿನಯಿಸಿದ್ದರು.

ಹಾಗಿದ್ರೆ, ದೊಡ್ಮನೆ ಹುಡ್ಗನಿಗೆ 'TRP' ಅವಾರ್ಡ್ ಸಿಕ್ಕಿದ್ದು ಎಲ್ಲಿ? ಎಷ್ಟು 'TRP' ಪಡೆದುಕೊಂಡಿದೆ ಎಂದು ತಿಳಿಯಲು ಮುಂದೆ ಓದಿ.,....

ಜೀ-ಕುಟುಂಬದಲ್ಲಿ ಪುನೀತ್ ಭಾಗಿ

ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋ, ಕಾರ್ಯಕ್ರಮಗಳಿಗೆ ನೀಡುವ 'ಜೀ ಕುಟುಂಬ ಪ್ರಶಸ್ತಿ' ಸಮಾರಂಭದಲ್ಲಿ ನಟ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದರು.

'ಒಂದು ಮೊಟ್ಟೆಯ' ಕಥಾನಾಯಕನಿಗೆ ಪುನೀತ್ ಕಡೆಯಿಂದ ಭರ್ಜರಿ ಆಫರ್.!

ಪುನೀತ್ ಚಿತ್ರಕ್ಕೆ ಪ್ರಶಸ್ತಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಅತಿ ಹೆಚ್ಚು ಟಿ.ಆರ್.ಪಿ ಪಡೆದ ಸಿನಿಮಾ ಎಂಬ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ನೀಡಿದ ಜಗ್ಗೇಶ್

ಪುನೀತ್ ರಾಜ್ ಕುಮಾರ್ ಗೆ ನವರಸ ನಾಯಕ ಜಗ್ಗೇಶ್ ಅವರು, 'ಜೀ ಕುಟುಂಬ ಅವಾರ್ಡ್' ನೀಡಿದರು.

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

ಮುಂದಿನ ವಾರ ಪ್ರಸಾರ

ಇತ್ತೀಚೆಗಷ್ಟೇ 'ಜೀ ಕುಟುಂಬ' ಅವಾರ್ಡ್ ಕಾರ್ಯಕ್ರಮ ರೆಕಾರ್ಡಿಂಗ್ ಆಗಿದ್ದು, ಮುಂದಿನ ವಾರ ಅಂದ್ರೆ ಅಕ್ಟೋಬರ್ 15 ಮತ್ತು 16 ರಂದು ಟಿವಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ.

English summary
Powerstar Puneth Rajkumar starrer 'Dodmane Hudga' Movie Get Highest TRP Rating Award in zee kutumba awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada