Annayya: 'ಅಣ್ಣಯ್ಯ' ಕಥೆ ವರದಕ್ಷಿಣೆ ಪಿಡುಗನ್ನು ಬೆಂಬಲಿಸ್ತಾ? ವೀಕ್ಷಕರ ಏನಂತಾರೆ?

By ಎಸ್ ಸುಮಂತ್

ವೀರಭದ್ರನ ಕುತಂತ್ರ ತಿಳಿಯದೆ ತನ್ನ ಹೆತ್ತವ್ವನೇ ಅಪರಾಧಿ ಎಂದು ಭಾವಿಸಿ ಈಗಲೂ ದ್ವೇಷ ಮಾಡುತ್ತಾನೆ. ತನ್ನೊಡಲಿಗೆ ಬಿಟ್ಟು ಹೋದ ಮೂವರು ತಂಗಿಯರು ಹಾಗೇ ಎಲ್ಲೋ ಸಿಕ್ಕಿದ ಚಿಕ್ಕತಂಗಿಯನ್ನು ಸಹ ಎಲ್ಲರಂತೆಯೇ ಸಾಕಿದ್ದಾನೆ. ಈಗ ಶಿವು ದೊಡ್ಡ ಕನಸು ನನಸಾಗುತ್ತಿದೆ. ರಶ್ಮಿ ಮದುವೆ ಸಂಭ್ರಮದಲ್ಲಿ ಶಿವು ಫ್ಯಾಮಿಲಿ ತೇಲಾಡುತ್ತಿದೆ.

ಒಳ್ಳೆಯತನ ಯಾವತ್ತಿಗೂ ಗೆದ್ದೇ ಗೆಲ್ಲಬೇಕು. ಯಾರಿಗೂ ಕೆಟ್ಟದ್ದು ಮಾಡದೆ ಹೋದಲ್ಲಿ ಒಳ್ಳೆಯದ್ದೇ ಆಗುತ್ತದೆ ಎಂಬ ಮಾತಿದೆ‌. ಈಗ ಶಿವು ಬದುಕಲ್ಲೂ ನಡೆದದ್ದು ಅದೇ. ಶಿವು ಒಳ್ಳೆಯತನಕ್ಕೆ ವೀರಭದ್ರ ಅದೆಷ್ಟೇ ಕೆಟ್ಟದ್ದು ಮಾಡಿದ್ರೂ ಕೂಡ ದೇವರೊಬ್ಬ ಒಳ್ಳೆಯ ಮನೆಗೆ ಸೇರಿಸಿದ್ದಾನೆ.

Does serial Annaiah serial support the dowry What are the viewers opinion

ವೀರಭದ್ರ ಮಾಡಿದ ಮೋಸಕ್ಕೆ ಶಾರದಾ ತಕ್ಕ ಪಾಠ ಕಲಿಸದೇ ಬಿಡೋಳಲ್ಲ‌. ಹಾಗಾದ್ರೆ ಇವತ್ತಿನ ಅಣ್ಣಯ್ಯ ಧಾರಾವಾಹಿಯಲ್ಲಿ ಏನಾಗ್ತಿದೆ..? ಟ್ರೋಲ್ ಯಾವ ರೀತಿ ಆಗ್ತಿದೆ ಎಂಬ ಸುದ್ದಿ ಇದೆ ಓದಿ.

ಹಣ ಕಳೆದಾಕಿದ ಸೀನಾ

ರಶ್ಮಿ ಮದುವೆಯಾಗುತ್ತಿರುವ ಹುಡುಗನಿಗೆ ಮದುವೆ ಮನೆಯಲ್ಲಿಯೇ ಐದು ಲಕ್ಷ ಕ್ಯಾಶ್ ಕೊಡಬೇಕೆಂಬ ಮಾತಾಗಿತ್ತು. ಅದಕ್ಕೆಂದೆ ಶಿವು ಬ್ಯಾಗ್‌ನಲ್ಲಿ ಹಣ ಇಟ್ಟುಕೊಂಡು ಓಡಾಡುತ್ತಿದ್ದ. ಶಾಸ್ತ್ರ ಅಂತ ಬಂದಾಗ ಆ ಹಣವನ್ನ ಸೀನನ ಕೈಗಿಟ್ಟಿದ್ದ. ಶಿವು ಹೆಚ್ಚು ನಂಬೋದು ಸೀನನ ಕುಟುಂಬಸ್ಥರನ್ನ. ಈಗ ಸೀನನಿಗೊ ಬೇಜವಾಬ್ದಾರಿ ಜಾಸ್ತಿ. ಹೀಗಾಗಿ ಹಣದ ಬ್ಯಾಗ್ ಅನ್ನೇ ಎಲ್ಲಿಯೋ ಇಟ್ಟು ಬಂದಿದ್ದ.

ರಶ್ಮಿ ಮದುವೆಯಾಗಬೇಕಾಗಿ ಬಂತು

ಗಂಡಿನ ಕಡೆಯವರು ಇಷ್ಟಪಟ್ಟು ಮಾಡಿಕೊಳ್ತಿರೋ ಮದುವೆ ಇದಲ್ಲ. ವೀರಭದ್ರನ ಕುತಂತ್ರಕ್ಕೆ ಒಪ್ಪಿ ಮಾಡಿಕೊಳ್ತಿದ್ದ ಮದುವೆ. ಹೀಗಾಗಿ ಹಣ ಕಳೆದೋಗಿದೆ ಎಂದು ಗೊತ್ತಾದ ಕೂಡಲೇ ಗಂಡನ್ನ ಹಸೆಮಣೆಯಿಂದಾನೇ ಏಳಿಸಿ ಕರೆದುಕೊಂಡು ಹೋಗಿಯೇ ಬಿಟ್ಟರು. ಈಗ ಶಿವು ಗಂಡಿನವರ ಕಾಲು ಹಿಡಿದರು ಪ್ರಯೋಜನವಿಲ್ಲ. ಜಿಮ್ ಸೀನನ ಅಪ್ಪನಿಗೆ ಮಗನ ಮೇಲೆ ವಿಪರೀತ ಕೋಪ ಬಂತು. ಶಿವು ಎಂದರೆ ಹೇಗೆ, ತಂಗಿಯರನ್ನ ಹೇಗೆ ಬೆಳೆಸಿದ್ದಾನೆ ಎಂಬುದೆಲ್ಲಾ ಗೊತ್ತಿತ್ತು. ಹೀಗಾಗಿ ರಶ್ಮಿ ಕುತ್ತಿಗೆಗೆ ತಾಳಿ ಕಟ್ಟುವಂತೆ ಸೀನನ ಅಪ್ಪ ಹೇಳಿಯೇ ಬಿಟ್ಟ.

Does serial Annaiah serial support the dowry What are the viewers opinion

ವರದಕ್ಷಿಣೆ ಪಿಡುಗು

ಈ ಧಾರಾವಾಹಿ ಈಗ ಟ್ರೋಲ್ ಆಗ್ತಾ ಇದೆ. 21ನೇ ಶತಮಾನದಲ್ಲಿ ಇದ್ದುಕೊಂಡು ಈಗ ವರದಕ್ಷಿಣೆ ವಿಚಾರ ತಂದಿದ್ದು ಎಷ್ಟು ಸರಿ. ಧಾರಾವಾಹಿಯಲ್ಲಿ ವರದಕ್ಷಿಣೆಯನ್ನ ಎಂಟರ್ಟೈನ್ ಮಾಡಿದ್ದಾರೆಂದು ಟ್ರೋಲ್ ಆಗ್ತಾ ಇದೆ. ವರದಕ್ಷಿಣೆಗಾಗಿ ಶಿವು ಇಷ್ಟೊಂದು ಕಷ್ಟ ಪಟ್ಟಿದ್ದಾನೆ. ಹಂಗದ್ರೆ ವರದಕ್ಷಿಣೆಯನ್ನೇ ಪ್ರಮೋಟ್ ಮಾಡಿದೆ ಎಂದೆಲ್ಲಾ ಮಾತಾಡುತ್ತಿದ್ದಾರೆ. ಅಣ್ಣಯ್ಯನಿಗೆ ತನ್ನ ತಂಗಿ ಒಳ್ಳೆ ಮನೆ ಸೇರುತ್ತಿದ್ದಾಳೆ ಎಂಬ ಖುಷಿಗೆ, ಸಾಲ ಸೋಲ ಮಾಡಿ ಮದುವೆ ಮಾಡಲು ಹೊರಟಿದ್ದ.

ಕಥೆಯ ತಿರುವಿಗಾಗಿ ವಿಚಾರ

'ಅಣ್ಣಯ್ಯ' ಧಾರಾವಾಹಿಯಲ್ಲಿ ಕಥೆಯ ತಿರುವಿಗಾಗಿ ವರದಕ್ಷಿಣೆ ಪಿಡುಗನ್ನು ತಂದರು ಸಹ ಬೇರೆ ರೀತಿಯ ಸಂದೇಶವನ್ನ ಕೊಡಬೇಕಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ. ವರದಕ್ಷಿಣೆ ಬಿಟ್ಟು ಬೇರೆ ರೀತಿಯಲ್ಲೂ ಟ್ವಿಸ್ಟ್ ಕೊಡಬಹುದಿತ್ತು ಎಂಬ ಚರ್ಚೆ. ಸದ್ಯ ಶಾರದಾ, ವೀರಭದ್ರನ ಕುತಂತ್ರಕ್ಕೆ ಸೆಡ್ಡು ಹೊಡೆದಿದ್ದಾಳೆ. ಅಡಗಿಸಿಟ್ಟುಕೊಂಡಿದ್ದ ಮುಖವನ್ನೊಮ್ಮೆ ತೋರಿಸಿದ್ದಾಳೆ. ಹೆದರದೆ ವೀರಭದ್ರನ ಮುಂದೆಯೇ ನಿಂತಿದ್ದಾಳೆ. ಇದು ವೀರಭದ್ರನಿಗೆ ನಡುಕ ಹುಟ್ಟಿಸಿದೆ. ಇನ್ಮೇಲೆ ವಿಲನ್ ವೀರಭದ್ರನಿಗೆ ಒಂದು ಕಡೆ ಪಾರು ಟಾರ್ಚರ್ ಆದ್ರೆ ಮತ್ತೊಂದು ಕಡೆ ಶಾರದಾಳ ಸವಾಲು.

More from Filmibeat

English summary
Zee kannada Annaiah serial today episode. Here is the details about Dowry scene in Annayya serial trolled;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X