ಗಿಲ್ಲಿಗೆ ಚಿನ್ನದ ಸರ ಹಾಕಿ ವಾಪಸ್ ಕಿತ್ಕೋತಾರೆ, ನನಗೆ ಚಿನ್ನ ಕೊಟ್ಟು ಮನೆಗೆ ಕಳಿಸ್ತಾರೆ ; ವ್ಯತ್ಯಾಸ ಇಷ್ಟೇ- ಡಾಗ್ ಸತೀಶ್

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಆದರೆ ಕೆಲವರು ಸೋತ ನಂತರ ಹಗೆತನ ಬೆಳೆಸಿಕೊಂಡು ಮತ್ತು ಅದನ್ನು ಪೋಷಿಸಿಕೊಂಡು ಬರುತ್ತಾರೆ. ದ್ವೇಷ ಸಾಧಿಸಲು ಮುಂದಾಗುತ್ತಾರೆ. ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಾರೆ.

ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಮನೋಭಾವ ಇವರಲ್ಲಿ ಇರುವುದೇ ಇಲ್ಲ. ಆ ಗುಣ ಒಲಿಯುವುದು ಇಲ್ಲ. ಗೆದ್ದವರ ಶ್ರಮ ಕೊಂಡಾಡುವ ಬದಲು ಅವರ ಸಾಧನೆಯನ್ನು ಪ್ರಶ್ನೆ ಮಾಡುತ್ತಾ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಗೆದ್ದವರ ನೈಜ ಬದುಕಿನ ಏರಿಳಿತದ ಪ್ರಯಾಣವನ್ನೇ ಡ್ರಾಮಾ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಅಡಿಗಡಿಗೂ ಗೇಲಿ ಮಾಡುತ್ತಾರೆ. ಉದಾಹರಣೆಗೆ ಡಾಗ್ ಸತೀಶ್ ಅವರನ್ನೇ ತೆಗೆದುಕೊಳ್ಳಿ.

Dog Satish Fires Back at BBK Winner Gilli in Explosive Gold Chain Row

ಹೌದು, ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬಾಮ್ಸ್. ಸಾಮಾಜಿಕ ಜಾಲತಾಣದ ದೃಷ್ಟಿಯಲ್ಲಿ ಬಿಲ್ಡಪ್ ರಾಜಾ. ಕಳೆದ ಬಾರಿ ಮೂರನೇ ಸ್ಪರ್ಧಿಯಾಗಿ ''ಬಿಗ್ ಬಾಸ್'' 12ನೇ ಸೀಸನ್ ಮನೆ ಪ್ರವೇಶ ಮಾಡಿದ್ದ ಖ್ಯಾತ ಡಾಗ್ ಬ್ರೀಡರ್.

ಎಳವೆಯಿಂದಲೇ ನಾಯಿಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಡಾಗ್ ಸತೀಶ್ ಹತ್ತನೇ ತರಗತಿಯಲ್ಲಿದ್ದಾಗಲೇ ನಾಯಿಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಕೋಟ್ಯಂತರ ಮೌಲ್ಯದ ನಾಯಿಗಳನ್ನು ಖರೀದಿಸುವ, ಮಾರಾಟ ಮಾಡುವುದೇ ಇವರ ಉದ್ಯೋಗ. ಖುದ್ದು ಡಾಗ್ ಸತೀಶ್ ''ಬಿಗ್ ಬಾಸ್'' ವೇದಿಕೆಯಲ್ಲಿಈ ಮಾತನ್ನು ಹೇಳಿದ್ದರು.

ಇಂಥಾ ಡಾಗ್ ಸತೀಶ್ ಈಗ ಗಿಲ್ಲಿ ಹೆಸರು ಕೇಳಿ ಮತ್ತೊಮ್ಮೆ ಕೊತ ಕೊತ ಕುದ್ದಿದ್ದಾರೆ. ದ್ವೇಷದ ಕಿಡಿ ಕಾರಿದ್ದಾರೆ. ಗಿಲ್ಲಿಗಿಂತ ಹತ್ತು ಪಟ್ಟು ಹವಾ ಜಾಸ್ತಿ ನನ್ನದಿದೆ ಎಂದಿದ್ದಾರೆ. ಇಷ್ಟೇ ಅಲ್ಲ ''ಬಿಗ್ ಬಾಸ್''ಗೆ ಹೋದ ತಪ್ಪಿಗೆ ನನ್ನ ಮಾನ ಮರ್ಯಾದೆ ಎಲ್ಲ ಹೋಯ್ತು ಎಂದು ಹೇಳಿದ್ದಾರೆ.

ಈ ಕುರಿತು ''ವಿಶ್ವವಾಣಿ ಟಿವಿ'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಡಾಗ್ ಸತೀಶ್, ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ಹೋಗುವ ಮೊದಲು ನನ್ನ ಬದುಕು ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

dog-satish-fires-back-at-bbk-winner-gilli-in-explosive-gold-chain-row

ಆಗೆಲ್ಲಾ ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷಕ್ಕೆ ಹೋಗ್ತಾ ಇದ್ದೆ, ಆದರೆ ಈಗ ''ಬಿಗ್ ಬಾಸ್'' ಶೋಗೆ ಹೋಗಿ ಬಂದ ಮೇಲೆ ಮಾನ ಮರ್ಯಾದೆ ಎಲ್ಲಾ ಹೋಗಿ ಕಡಿಮೆಗೆ ಕರೀತಾರೆ ಎಂದು ಹೇಳಿದ್ದಾರೆ. ಹೀಗಾಗಿ ಮುಂಚೆನೇ ಲೈಫ್ ಚೆನ್ನಾಗಿತ್ತು ಎಂದು ಹೇಳಿರುವ ಡಾಗ್ ಸತೀಶ್ ಇನ್ಮುಂದೆ ''ಬಿಗ್ ಬಾಸ್'' ಹೆಸರು ಎತ್ತಲ್ಲ ಎಂದು ಹೇಳಿದ್ಧಾರೆ. ಬರೀ ಡಾಗ್‌ನಿಂದಾನೇ ಎರಡೂವರೆ ಲಕ್ಷಕ್ಕೆ ಒಂದೊಂದು ಫಂಕ್ಷನ್‌ಗೆ ಈಗ ಹೋಗ್ತಾ ಇದ್ದೇನೆ ಎಂದು ಹೇಳಿದ್ಧಾರೆ. ಈ ಮೂಲಕ ಅವಕಾಶ ನೀಡಿದವರಿಗೆ ಕೃತಜ್ಞರಾಗಿರುವ ಬದಲು ಅವಕಾಶ ನೀಡಿದವರನ್ನೇ ಅವಮಾನ ಮಾಡಿದ್ದಾರೆ ಡಾಗ್ ಸತೀಶ್.

ಮುಂದುವರೆದು ಗಿಲ್ಲಿಗಿಂತ ನನ್ನ ಹವಾ ಜಾಸ್ತಿ ಎಂದು ಹೇಳಿರುವ ಡಾಗ್ ಸತೀಶ್, ನನಗೆ ದಿನಕ್ಕೆ ಮೂರು ಫಂಕ್ಷನ್‌ಗೆ ಕರೀತಾರೆ ಎಂದು ಹೇಳಿದ್ದಾರೆ. ಅವನಿಗೆ ಚಿನ್ನದ ಸರ ಹಾಕಿದ್ರೆ ವಾಪಸ್ ಕಿತ್ಕೊತ್ತಾರೆ, ಆದರೆ ಅದೇ ನನಗೆ ಚಿನ್ನದ ಸರ ಹಾಕಿದ್ರೆ, ನಮಗೇ ಕೊಡ್ತಾರೆ ಎಂದು ಹೇಳಿರುವ ಡಾಗ್ ಸತೀಶ್ ಕೇವಲ ಚಿನ್ನದ ಸರ ಮಾತ್ರ ಅಲ್ಲ ಫೋನ್‌ಗಳು, ಗಿಫ್ಟ್‌ಗಳು, ನಮಗೆ ಎಲ್ಲಾ ಬಿಟ್ಟಿಯಾಗಿಯೇ ಬರುತ್ತೆ ಎಂದು ಹೇಳಿದ್ದಾರೆ.

ಇವಾಗ ಡೈಮಂಡ್ ಅಲ್ಲಿ ಇನ್ನೊಂದು ನೆಕ್ಲೇಸ್ ಮಾತಾಡಿದ್ದಾರೆ.ಅದು ಫ್ರೀ ಆಗಿಯೇ ಬರ್ತಾ ಇದೆ. ನಮಗೆ ಹಾಕಿದ್ರೆ ನಮಗೇ ಕೊಡ್ತಾರೆ. ವ್ಯತ್ಯಾಸ ಇಷ್ಟೇ, ಅವರಿಗೆಲ್ಲಾ ಅದೆಲ್ಲ ಕೆಪಾಸಿಟಿ ಇರಲ್ಲ ಎಂದು ಹೇಳಿರುವ ಡಾಗ್ ಸತೀಶ್ ಆ ಬೆಲೆ ಬಾಳಲ್ಲ ಅಂತ ಅವರಿಗೆ ಹಾಕಿಬಿಟ್ಟು ವಾಪಸ್ ತಗೋತಾರೆ, ನಮಗೆ ಆ ಬೆಲೆ ಇರೋದರಿಂದ ಹಾಕಿಬಿಟ್ಟು ನಮಗೆ ಕೊಡ್ತಾರೆ ಎಂದು ಹೇಳಿದ್ದಾರೆ.

English summary
Three months later, the BBK war isn't over! Dog Satish mocks Gilli Nata’s attitude and explains why he gets diamonds for free while Gilli "returns his gifts."
Read more about: gilli nata bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X