ಕೌಂಟ್‌ಡೌನ್‌ ಶುರು ; ಆಗಸ್ಟ್ 3 ಸಂಜೆ 7ರಿಂದ ಬಿಗ್ ಬಾಸ್ ಆಟ ಶುರು, ಈ ಬಾರಿಯೂ ಮನೆಯಲ್ಲಿ ಸ್ವರ್ಗ-ನರಕದ ನಡುವೆ ಸಮರ

ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ''ಬಿಗ್ ಬಾಸ್‌'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ. ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ.

ಈ ಬಾರಿಯ ''ಬಿಗ್ ಬಾಸ್'' ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈಗಾಗಲೇ ಕನ್ನಡ .. ತೆಲುಗು.. ಮಲಯಾಳಂ ಮತ್ತು ಹಿಂದಿಯಲ್ಲಿ ''ಬಿಗ್ ಬಾಸ್‌''ನ ಸಂತೆ ಶುರುವಾಗಿದೆ. ಹಲವು ರೀತಿಯ ರೂಪರೇಶೆ ಸಿದ್ಧಪಡಿಸಲಾಗುತ್ತಿದೆ. ತೆಲುಗು ಮತ್ತು ಮಲಯಾಳಂನಲ್ಲಿ ಜನಸಾಮಾನ್ಯರಿಗೆ ದೊಡ್ಮನೆಯ ಬಾಗಿಲನ್ನು ಆಯೋಜಕರು ತೆರೆದಿದ್ದು, ಆಸಕ್ತರಿಗೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದೆ. ಇದರ ನಡುವೆ ಇದೀಗ ಕನ್ನಡದಲ್ಲಿ ಕಳೆದ ವರ್ಷ ಮಾಡಲಾದ ಪ್ರಯತ್ನವನ್ನು ಈ ಬಾರಿ ಮಲಯಾಳಂನಲ್ಲಿ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

dont-miss-it-bigg-boss-malayalam-7s-heaven-hell-journey-begins-august-3

ಹೌದು. ನಿಮಗೆ ನೆನಪಿದ್ದರೆ ಕಳೆದ ವರ್ಷ ಕನ್ನಡದ ''ಬಿಗ್ ಬಾಸ್‌''ನಲ್ಲಿ ''ಸ್ವರ್ಗ'' ಮತ್ತು ''ನರಕ'' ಎಂಬ ಕಾನ್ಸೆಪ್ಟ್‌ನಡಿ ಮನರಂಜನೆಯ ರಸದೌತಣ ಬಡಿಸುವ ಪ್ರಯತ್ನ ಮಾಡಲಾಗಿತ್ತು. ಮನೆಯ ವಿನ್ಯಾಸವನ್ನು ಕೂಡ ''ಸ್ವರ್ಗ'' ಮತ್ತು ''ನರಕ''ದಂತೆಯೇ ಮಾಡಲಾಗಿತ್ತು. ಯಾವ ಸ್ಫರ್ಧಿ ಎಲ್ಲಿ ಹೋಗಬೇಕು ಎನ್ನುವುದನ್ನು ನಿರ್ಧಾರ ಮಾಡುವ ಜವಾಬ್ಧಾರಿಯನ್ನು ಪ್ರೇಕ್ಷಕರಿಗೆ ವಹಿಸಲಾಗಿತ್ತು.

ಕಾರ್ಯಕ್ರಮ ಶುರುವಾದ ನಂತರ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ಗಳನ್ನು ನೀಡಿ ''ಸ್ವರ್ಗ''ದಲ್ಲಿರುವವರನ್ನು ''ನರಕ''ಕ್ಕೆ.. ''ನರಕ''ದಲ್ಲಿರುವವರನ್ನು ''ಸ್ವರ್ಗ''ಕ್ಕೆ ಕಳುಹಿಸಲಾಗುತ್ತಿತ್ತು. ''ನರಕ'' ದರ್ಶನವನ್ನು ಎಲ್ಲರಿಗೆ ಮಾಡಿಸಲಾಗಿತ್ತು. ಆಹಾರ, ಉಡುಗೆ, ನೀರು.. ಎಲ್ಲದಕ್ಕೂ ಸ್ಫರ್ಧಿಗಳು ಒದ್ದಾಡುವಂತೆ ಮಾಡಲಾಗಿತ್ತು.

ಇದೀಗ ಇದೇ ಫಾರ್ಮುಲಾನ ಈ ಬಾರಿ ''ಮಲಯಾಳಂ''ನಲ್ಲಿ ಉಪಯೋಗಿಸಲಾಗುತ್ತೆ ಎನ್ನುವ ಸುದ್ದಿ ಸದ್ಯ ಪಕ್ಕದ ಕೇರಳದಲ್ಲಿ ಕೇಳಿ ಬರುತ್ತಿದೆ. '' ಟೈಮ್ಸ್ ಆಫ್ ಇಂಡಿಯಾ''.. ''ನ್ಯೂಸ್ 18.. ''OTT Play'' ಹೀಗೆ ಹಲವು ಮಾಧ್ಯಮ ಸಂಸ್ಥೆಗಳು ಈ ಬಾರಿ ಮಲಯಾಳಂನಲ್ಲಿ ''ಸ್ವರ್ಗ'' ಮತ್ತು ''ನರಕ''ದ ಥೀಮ್ ಇರಲಿದೆ ಎಂದು ವರದಿಯನ್ನು ಕೂಡ ಮಾಡಿವೆ.

dont-miss-it-bigg-boss-malayalam-7s-heaven-hell-journey-begins-august-3

ಅಂದ್ಹಾಗೇ ''ಸ್ವರ್ಗ'' ಮತ್ತು ''ನರಕ''ದ ಥೀಮ್ ಕಳೆದ ವರ್ಷ ಕನ್ನಡಿಗರಗೆ ಹೊಸತಾಗಿತ್ತು. ಕಾರ್ಯಕ್ರಮ ಆರಂಭವಾಗುವ ಮುನ್ನ ಕುತೂಹಲ ಕೂಡ ಎಲ್ಲರಲ್ಲಿ ಇತ್ತು. ಇದೇ ತರಹದ ವಾತಾವರಣ ಈಗ ಕೇರಳದಲ್ಲಿ ಕೂಡ ಇದೆ. ಆದರೆ.. ನಿಮಗೆ ಗೊತ್ತಿರಲಿ.. ಈ ಕಾನ್ಸೆಪ್ಟ್‌ನ ಮೊದಲು 2013ರಲ್ಲಿಯೇ ''ಹಿಂದಿ''ಯಲ್ಲಿ ಜಾರಿ ಮಾಡಲಾಗಿತ್ತು. ''ಜನ್ನತ್'' ಮತ್ತು ''ಜಹನ್ನಮ್'' ಕಾನ್ಸೆಪ್ಟ್‌ನಡಿ ಆಟ ಆಡಿಸಲಾಗಿತ್ತು.

ಹಿಂದಿಯಲ್ಲಿ ಅಪಾರವಾಗಿ ಜನಪ್ರಿಯವಾದ ಈ ಸೀಸನ್‌ನಲ್ಲಿ ''ಗೌಹರ್ ಖಾನ್‌'' ವಿಜೇತರಾಗಿ ಹೊರ ಹೊಮ್ಮಿದ್ದರು. ''ತನಿಷಾ ಮುಖರ್ಜಿ'' ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಇದಾದ ನಂತರ ಅರ್ಧ ಭಾಗ ''ಸ್ವರ್ಗ''ದ ಥೀಮ್‌.. ಮಿಕ್ಕರ್ಧ ಭಾಗ ''ನರಕ''ದ ಥೀಮ್‌ ಹೊಂದಿರುವ ಮನೆಗೆ ಕನ್ನಡಿಗರನ್ನು ಕರೆದೊಯ್ಯಲಾಗಿತ್ತು. ಈಗ ಮಲಯಾಳಂನವರ ಸರದಿ.

ಇನ್ನುಳಿದಂತೆ ಈ ಬಾರಿ ಎಲ್ಲ ಭಾಷೆಗಳಿಗಿಂತ ಮೊದಲು ''ಬಿಗ್ ಬಾಸ್'' ಮಲಯಾಳಂನಲ್ಲಿ ಶುರುವಾಗಲಿದೆ. ಇದೇ ''ಆಗಸ್ಟ್ 3''ರಿಂದ ಕಾರ್ಯಕ್ರಮ ''ಏಷ್ಯಾನೆಟ್‌'' ಮತ್ತು ''ಜೀಯೋ ಹಾಟ್‌ಸ್ಟಾರ್‌''ನಲ್ಲಿ ಪ್ರಸಾರವಾಗಲಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರಿಗೆ ಕೂಡ ಅವಕಾಶ ನೀಡಲಾದ ಹಿನ್ನೆಲೆ ಹಲವರಲ್ಲಿ ಕುತೂಹಲ ಮನೆ ಮಾಡಿದ್ದು ''ಮೋಹನ್ ಲಾಲ್'' ಈ ಬಾರಿ ಕೂಡ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ಸದ್ಯ ಕಾರ್ಯಕ್ರಮದ ಪ್ರೋಮೋಗಳು ಕೇರಳಿಗರ ಚಿತ್ತ ಕದಿಯುವಲ್ಲಿ ಯಶಸ್ವಿಯಾಗಿದ್ದು ಯಾರೆಲ್ಲ ಮನೆಗೆ ಬರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Bigg Boss Malayalam 7, hosted by Mohanlal, officially launches on August 3, 2025, with an explosive 'Heaven vs. Hell' concept. Discover what to expect from the new house, contestants, and the season's biggest twists
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X