For Quick Alerts
  ALLOW NOTIFICATIONS  
  For Daily Alerts

  ನಮ್ಮ ಕುಟುಂಬದ ನೆಮ್ಮದಿ ಹಾಳುಮಾಡಿದ್ದೇ ಅವನು

  By Rajendra
  |
  <ul id="pagination-digg"><li class="previous"><a href="/tv/hemashree-sister-roopashree-press-meet-details-068856.html">« Previous</a>
  ಹೇಮಶ್ರೀ ಭಾವನಾತ್ಮಕ ಹುಡುಗಿ. ಅವಳಿಗೆ ತುಂಬಾ ಅನ್ಯಾಯವಾಗಿದೆ. ಹೇಮಶ್ರೀ ಆತ್ಮಕ್ಕೆ ಶಾಂತಿದೊರಕಿಸಿಕೊಡುತ್ತೇನೆ. ಆಕೆಯ ಸಾವಿನ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಅಪರಾಧಿ ಅವರು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ.

  ಇನ್ನು ಮಾಧ್ಯಮಗಳಲ್ಲಿ ಹೇಮಶ್ರೀ ಅವರ ಗೆಳತಿಯೆಂದು ಹೇಳಿಕೊಂಡು ಹಲವಾರು ಮಂದಿ ಮಾತನಾಡುತ್ತಿರುವುದು ಅಚ್ಚರಿ ತಂದಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ಹೇಮಶ್ರೀ ಧ್ವನಿಮುದ್ರಣದ ಬಗ್ಗೆ ನನಗೇನು ಗೊತ್ತಿಲ್ಲ. ಆ ಸಿಡಿಯಲ್ಲಿರುವ ಧ್ವನಿ ಹೇಮಶ್ರೀ ಅವರದು ಎಂಬ ಬಗ್ಗೆ ನನಗೆ ಅನುಮಾನವಿದೆ.

  ಆ ಸಿಡಿಯನ್ನು ಮಾಧ್ಯಮಗಳಿಗೆ ತಂದುಕೊಟ್ಟವರು ಪೊಲೀಸರಿಗೂ ಕೊಡಬಹುದಾಗಿತ್ತು ಅಲ್ಲವೇ? ಹಾಗೇಕೆ ಮಾಡಲಿಲ್ಲ ಎಂದು ರೂಪಶ್ರೀ ಪ್ರಶ್ನಿಸಿದರು. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇದರಲ್ಲಿ ಅವರ ಕೈವಾಡ ಇರುವ ಸಾಧ್ಯತೆಗಳಿವೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

  ಇನ್ನು ಮಂಜುನಾಥ್ ಎಂಬುವವರ ಜೊತೆಗೆ ಹೇಮಶ್ರೀಗೆ ಗೆಳೆತನವಿತ್ತು ಎಂಬ ಬಗ್ಗೆ ಮಾತನಾಡಿದ ಅವರು, ಹೇಮಶ್ರೀಯನ್ನು ಪ್ರೀತಿಸುತ್ತಿದ್ದೇನೆ ಎಂದು ಆತ ಎಂದೂ ಹೇಳಿರಲಿಲ್ಲ. ಅವರಿಬ್ಬರ ನಡುವೆ ಸ್ನೇಹದ ಜೊತೆಗೆ ಸಲುಗೆಯೂ ಇತ್ತು. ನಮ್ಮ ಕುಟುಂಬದ ನೆಮ್ಮದಿ ಹಾಳುಮಾಡಿದ್ದು ಆತನೇ ಎಂದರು.

  ರೂಪಶ್ರೀ ಮಾಡಿರುವ ಈ ಎಲ್ಲಾ ಆರೋಪಗಳನ್ನು ಅವರ ದೊಡ್ಡಮ್ಮನ ಮಗ ಕೇಶವಬಾಬು ಎಂಬುವವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಆಕೆ ಹೇಳುತ್ತಿರುವ ಮಾತುಗಳಲ್ಲಿ ಹುರುಳಿಲ್ಲ. ಅವರು ವೈದ್ಯರಾದರೂ ಎಲ್ಲೂ ಪ್ರಾಕ್ಟೀಸ್ ಮಾಡುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಹೇಮಶ್ರೀ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. (ಒನ್ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/tv/hemashree-sister-roopashree-press-meet-details-068856.html">« Previous</a>
  English summary
  We all are shocked for Hemashree death. Wrong reports are paining more than Hemashree's death. Extremely pained about the incident. Hemashree and Surendra Babu marriage is arranged said the actress sister Roopashree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X