twitter
    For Quick Alerts
    ALLOW NOTIFICATIONS  
    For Daily Alerts

    ದೂರದರ್ಶನದ 'ಸುವರ್ಣಯುಗ' ವಾಪಸ್: ಮತ್ತೆ ಪ್ರಸಾರವಾಗಲಿದೆ ಮಕ್ಕಳ ನೆಚ್ಚಿನ 'ಶಕ್ತಿಮಾನ್'

    |

    'ಕ್ವಾರೆಂಟೀನ್'ನಲ್ಲಿ ಬಂಧಿಯಾಗಿರುವ ಜನರು ಕಾಲ ಕಳೆಯುವುದಕ್ಕೆ ಪರದಾಡುತ್ತಿದ್ದಾರೆ. ಅದಕ್ಕಾಗಿ ದೂರದರ್ಶನ 80ರ ದಶಕದ ಜನಪ್ರಿಯ ಧಾರಾವಾಹಿ 'ರಾಮಾಯಣ'ವನ್ನು ಮರುಪ್ರಸಾರ ಮಾಡುವ ಮೂಲಕ ಜನರನ್ನು ಮುದಗೊಳಿಸುತ್ತಿದೆ. ಈಗ 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶೋ 'ಶಕ್ತಿಮಾನ್' ಮರು ಪ್ರಸಾರಕ್ಕೂ ಮುಂದಾಗಿದೆ.

    Recommended Video

    ಕಷ್ಟದ ಸಮಯದಲ್ಲಿ ಬರ್ತಿದ್ದಾನೆ ಶಕ್ತಿಮಾನ್ | Shakthiman is back | DD1

    21 ದಿನಗಳ ಲಾಕ್‌ಡೌನ್‌ನಲ್ಲಿರುವ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ದೂರದರ್ಶನ ತನ್ನ 'ಸುವರ್ಣಯುಗ'ವನ್ನು ಮರಳಿ ತರುವ ಪ್ರಯತ್ನ ಮಾಡುತ್ತಿದೆ. ದೂರದರ್ಶನ ಮಾತ್ರವೇ ಇದ್ದ ಕಾಲದಲ್ಲಿ ಅದರ ಅನೇಕ ಕಾರ್ಯಕ್ರಮಗಳು ಬಹಳ ಜನಪ್ರಿಯವಾಗಿದ್ದವು. ಮಕ್ಕಳು, ಯುವಜನರು, ಮಧ್ಯವಯಸ್ಕರು ಹಾಗೂ ವೃದ್ಧರು ಎಲ್ಲರೂ ಇಷ್ಟಪಡುವ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಈಗಿನ ಸನ್ನಿವೇಶದಲ್ಲಿ ಮನೆ ಮಂದಿಯೆಲ್ಲರೂ ಮನೆಯಲ್ಲಿಯೇ ಕುಳಿತುಕೊಳ್ಳುವುದರಿಂದ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಮರಳಿ ತರುವ ಮೂಲಕ ಜನರನ್ನು ಸೆಳೆದುಕೊಳ್ಳಲು ದೂರದರ್ಶನ ಪ್ರಯತ್ನ ನಡೆಸುತ್ತಿದೆ.

    'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ 'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ

    ಮತ್ತೆ ಬರಲಿದ್ದಾನೆ ಶಕ್ತಿಮಾನ್

    ಮತ್ತೆ ಬರಲಿದ್ದಾನೆ ಶಕ್ತಿಮಾನ್

    ದೂರದರ್ಶನದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ 'ಶಕ್ತಿಮಾನ್' ಮತ್ತೆ ಪ್ರಸಾರವಾಗಲಿದೆ. ಮುಕೇಶ್ ಖನ್ನಾ 'ಶಕ್ತಿಮಾನ್' ಆಗಿ ಮಕ್ಕಳನ್ನು ರಂಜಿಸಿದ್ದರು. ಈ ಬಹು ಜನಪ್ರಿಯ ಕಾರ್ಯಕ್ರಮ ಏಪ್ರಿಲ್ 1ರಿಂದ ಮಧ್ಯಾಹ್ನ 1 ಗಂಟೆಗೆ ಪ್ರತಿ ದಿನ ಒಂದು ಗಂಟೆ ಪ್ರಸಾರವಾಗಲಿದೆ. 90ರ ದಶಕದ ಮಕ್ಕಳು, ಈಗ ತಮ್ಮ ಮಕ್ಕಳಿಗೆ ಈ ಧಾರಾವಾಹಿಯನ್ನು ತಾವು ಏಕೆ ಅಷ್ಟು ಇಟ್ಟಪಟ್ಟಿದ್ದೆವು ಎಂಬ ಕಥೆಯನ್ನು ಹೇಳಬಹುದು!

    ಉಪ ನಿಷದ್ ಗಂಗಾ ಪ್ರಸಾರ

    ಉಪ ನಿಷದ್ ಗಂಗಾ ಪ್ರಸಾರ

    ಚಿನ್ಮಯ ಮಿಷನ್ ಟ್ರಸ್ಟ್ ನಿರ್ಮಿಸಿದ್ದ, ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಉಪನಿಷದ್ ಗಂಗಾ ಮರುಪ್ರಸಾರವಾಗಲಿದೆ. 52 ಕಂತುಗಳ ಈ ಕಾರ್ಯಕ್ರಮ ಏಪ್ರಿಲ್ 1ರಿಂದ ಡಿಡಿ ಭಾರತಿ ವಾಹಿನಿಯಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಪ್ರಸಾರವಾಗಲಿದೆ.

    ಚಾಣಕ್ಯ ಧಾರಾವಾಹಿ

    ಚಾಣಕ್ಯ ಧಾರಾವಾಹಿ

    ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ 'ಚಾಣಕ್ಯ' ಧಾರಾವಾಹಿಯನ್ನು ಕೂಡ ಮರು ಪ್ರಸಾರ ಮಾಡಲು ಪ್ರಸಾರ ಭಾರತಿ ಮುಂದಾಗಿದೆ. 47 ಕಂತುಗಳಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿ ಏಪ್ರಿಲ್ 1ರಿಂದ ಡಿಡಿ ಭಾರತಿಯಲ್ಲಿ ಮಧ್ಯಾಹ್ನದ ವೇಳೆ ಪ್ರಸಾರವಾಗಲಿದೆ.

    ಕೊರೊನಾ ಕೃಪೆ: ಮತ್ತೆ ರಾಮಾಯಣ, ಮಹಾಭಾರತಕೊರೊನಾ ಕೃಪೆ: ಮತ್ತೆ ರಾಮಾಯಣ, ಮಹಾಭಾರತ

    ಶ್ರೀಮಾನ್ ಶ್ರೀಮತಿ ಈಸ್ ಬ್ಯಾಕ್

    ಶ್ರೀಮಾನ್ ಶ್ರೀಮತಿ ಈಸ್ ಬ್ಯಾಕ್

    ಮಾರ್ಕಂಡ್ ಅಧಿಕಾರಿ ನಿರ್ಮಾಣದ ಹಾಸ್ಯ ಧಾರಾವಾಹಿ ಶ್ರೀಮಾನ್ ಶ್ರೀಮತಿ ಕೂಡ ಒಂದು ಕಾಲದಲ್ಲಿ ಜನರನ್ನು ನಗಿಸುವ ಮೂಲಕ ಮುದಗೊಳಿಸಿತ್ತು. ಈ ಧಾರಾವಾಹಿ ಇನ್ನು ಡಿಡಿ ನ್ಯಾಷನಲ್‌ನಲ್ಲಿ ಏಪ್ರಿಲ್ 1ರಿಂದ ಮಧ್ಯಾಹ್ನ 2 ಗಂಟೆಗೆ ಮರು ಪ್ರಸಾರವಾಗಲಿದೆ.

    ಕೃಷ್ಣ ಕಾಳಿ ಕಾರ್ಯಕ್ರಮ

    ಕೃಷ್ಣ ಕಾಳಿ ಕಾರ್ಯಕ್ರಮ

    ಡಿಡಿ ನ್ಯಾಷನಲ್‌ನಲ್ಲಿ ಕೃಷ್ಣ ಕಾಳಿ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ. ಪ್ರತಿ ದಿನ ರಾತ್ರಿ 8.30ರಿಂದ ಡಿ,ಡಿ. ನ್ಯಾಷನಲ್ ವಾಹಿನಿಯಲ್ಲಿ ಇದು ಮರು ಪ್ರಸಾರವಾಗಲಿದೆ. ಈ ಜನಪ್ರಿಯ ಕಾರ್ಯಕ್ರಮ 18 ಕಂತುಗಳಲ್ಲಿ ಪ್ರಸಾರವಾಗಿತ್ತು.

    ರಾಮಾಯಣ, ಮಹಾಭಾರತ

    ರಾಮಾಯಣ, ಮಹಾಭಾರತ

    ಈ ಕಾರ್ಯಕ್ರಮಗಳಲ್ಲದೆ ಈಗಾಗಲೇ ಕೆಲವು ಧಾರಾವಾಹಿಗಳು ಮರು ಪ್ರಸಾರ ಆರಂಭಿಸಿವೆ. ರಮಾನಂದ ಸಾಗರ್ ನಿರ್ದೇಶನದ 78 ಕಂತುಗಳ 'ರಾಮಾಯಣ' ಡಿ.ಡಿ ನ್ಯಾಷನಲ್‌ನಲ್ಲಿ ಬೆಳಿಗ್ಗೆ 9 ಮತ್ತು ರಾತ್ರಿ 9ಕ್ಕೆ ಮರುಪ್ರಸಾರವಾಗುತ್ತಿದೆ. ಹಾಗೆಯೇ 97 ಕಂತುಗಳ ಮಹಾಭಾರತ ಮಧ್ಯಾಹ್ನ 12 ಗಂಟೆ ಮತ್ತು ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿದೆ.

    ಮತ್ತೆ ಕಿರುತೆರೆಯಲ್ಲಿ ಶಾರುಖ್!

    ಮತ್ತೆ ಕಿರುತೆರೆಯಲ್ಲಿ ಶಾರುಖ್!

    52 ಕಂತುಗಳ ಬ್ಯೋಮ್‌ಕೇಶ್ ಬಕ್ಷಿ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಒಂದು ಗಂಟೆ ಕಾಲ ಪ್ರಸಾರವಾಗುತ್ತಿದೆ. ಶಾರುಖ್ ಖಾನ್ ಅಭಿನಯಿಸಿದ್ದ 19 ಕಂತುಗಳ 'ಸರ್ಕಸ್' ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. 60 ಎಪಿಸೋಡ್‌ಗಳ 'ಹಮ್ ಹೈ ನಾ' ಡಿ.ಡಿ. ನ್ಯಾಷನಲ್‌ನಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ. 'ತು ತೋತಾ ಮೈ ಮೈನಾ' ಡಿಡಿ ನ್ಯಾಷನಲ್‌ನಲ್ಲಿ ಪ್ರತಿ ರಾತ್ರಿ 10.30ಕ್ಕೆ ಬಿತ್ತರವಾಗುತ್ತಿದೆ.

    English summary
    Doordarshan to bring back its shows including Shaktimaan and circus to make people happy during the 21 day lockdown period.
    Tuesday, March 31, 2020, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X