ದಿಗ್ಗಜ ನಿರ್ದೇಶಕರ ಬಗ್ಗೆ ಜೀ-ಕನ್ನಡ ನಿರ್ಲಕ್ಷ್ಯ: ಪ್ರೇಕ್ಷಕರು ತೀವ್ರ ಬೇಸರ

Recommended Video

Weekend With Ramesh Season 4: ಓಂ ಚಿತ್ರಕ್ಕೆ ಪ್ರೇಮಾ ಆಯ್ಕೆಯಾಗಿದ್ದು ಹೇಗೆ? | FILMIBEAT KANNADA

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಅವರ ಬಗ್ಗೆ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಿರ್ಲಕ್ಷ್ಯ ತೋರುತ್ತಿದೆ ಎಂದು ಇತ್ತೀಚಿಗಷ್ಟೆ ವರದಿ ಮಾಡಿದ್ವಿ. ಇದು ಕೇವಲ ಯಾರೋ ಒಬ್ಬರ ಅಭಿಪ್ರಾಯವಾಗಿರಲಿಲ್ಲ. ಈ ಶೋ ನೋಡುತ್ತಿರುವ ಬಹುತೇಕರ ಮನದಲ್ಲಿದ್ದ ಜನಾಭಿಪ್ರಾಯವೂ ಆಗಿತ್ತು.

ಇದು ಈಗ ಬಹಿರಂಗವಾಗಿದೆ. ನಾವು ವರದಿ ಮಾಡಿದ್ದ ಸ್ಟೋರಿಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಬಂದಿರುವ ನೂರಕ್ಕೆ ನೂರು ಕಾಮೆಂಟ್ ಗಳಲ್ಲಿಯೂ ಒಂದೇ ಅಭಿಪ್ರಾಯ. ಒಬ್ಬ ದಿಗ್ಗಜನ ನಿರ್ದೇಶಕನಿಗೆ ವೀಕೆಂಡ್ ವಿತ್ ರಮೇರ್ಶ ಶೋ ಅಗೌರವ ತೋರುತ್ತಿದೆ ಎಂಬ ಕೂಗು ಕೇಳಿ ಬಂದಿದೆ.

ಯಾವುದೇ ವಿಷ್ಯ ಇಲ್ಲದಂತವರನ್ನ ಕರೆದುಕೊಂಡು ಬಂದು ಗಂಟೆಗಳ ಕಾಲ ಘಂಟೆ ಹಿಡಿದಿಟ್ಟು ನೀರಸ ಅನುಭವಗಳನ್ನು ಕೇಳುವ ಬದಲು, ಭಗವಾನ್ ಅವರಂತಹ ವ್ಯಕ್ತಿಗಳ, ಸಿನಿಮಾ ಸಂಬಂಧಗಳ ಒಡನಾಟ, ಪ್ರತಿಯೊಬ್ಬ, ನಟ, ನಟಿಯರ, ಪ್ರತಿಭೆ ಏನು ಎಂಬುದು ಅವರ ಮಾತಿನಲ್ಲಿ ಕೇಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರಲ್ಲಿ ಆಯ್ದ ಕೆಲವು ಕಾಮೆಂಟ್ ಗಳನ್ನ ಇಲ್ಲಿ ಉಲ್ಲೇಖಿಸಲಾಗಿದೆ. ಓದಿ.....

ಭಗವಾನ್ ಆಯ್ಕೆಯಿಂದ ಘನತೆ ಹೆಚ್ಚುತ್ತೆ

ಭಗವಾನ್ ಆಯ್ಕೆಯಿಂದ ಘನತೆ ಹೆಚ್ಚುತ್ತೆ

''ಭಗವಾನ್ ಒಬ್ಬ ನಿಜವಾದ ಸಾಧಕರು, ವೃತ್ತಿಯಿಂದಲೂ, ಪ್ರವೃತ್ತಿಯಿಂದಲೂ ಅವರ ವ್ಯಕ್ತಿತ್ವದಿಂದಲೂ ಅವರು ಸಾಧಕರ ಸೀಟಿನಲ್ಲಿ ಕೂರಲು ಅರ್ಹವಿರುವ ಮೊದಲ ದರ್ಜೆಯ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು...ಹಾಗಾಗಿ ಅವರನ್ನು ಎಂದೋ ಗುರುತಿಸಬೇಕಿತ್ತು.. ಕೇವಲ ಟಿಆರ್ ಪಿ, ವ್ಯವಹಾರಿಕ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ವ್ಯಕ್ತಿಗಳನ್ನು ಆಯ್ಕೆ ಮಾಡಿದಷ್ಟು ಅದರ ಕಾರ್ಯಕ್ರಮದ ಘನತೆ ಹೆಚ್ಚುವುದಿಲ್ಲ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಧಕರ ಪದಕ್ಕೆ ಸೂಕ್ತ ವ್ಯಕ್ತಿ

ಸಾಧಕರ ಪದಕ್ಕೆ ಸೂಕ್ತ ವ್ಯಕ್ತಿ

''ಸಾಧಕರನ್ನ ಆಹ್ವಾನಿಸಿ, ಅವರ ಸಾಧನೆ ಬಗ್ಗೆ ಹೇಳುವ ಕಾರ್ಯಕ್ರಮ ಇದು. ಹಾಗಾಗಿ, ಆ ಪದಕ್ಕೆ ಸೂಕ್ತ ವ್ಯಕ್ತಿ ಅಂದ್ರೆ ಭಗವಾನ್. ಅವರಲ್ಲಿರುವ ಅನೇಕ ನೆನಪುಗಳನ್ನ, ಇಂದಿನ ಜನಾಂಗ ತಿಳಿಯಬೇಕಿದೆ. ಹಾಗಾಗಿ ಅವರು ಈ ಶೋಗೆ ಬರಬೇಕು'' ಎಂದು ಹೇಳುವವರು ಇದ್ದಾರೆ.

ನಿಜವಾದ ಸಾಧಕರು ಇವರು

ನಿಜವಾದ ಸಾಧಕರು ಇವರು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಿಜವಾದ ಸಾಧಕರನ್ನ ಕೂರಿಸಬೇಕು ಎಂದುಕೊಂಡಿದ್ದರೇ ಮೊದಲು ಇವರನ್ನ ಕೂರಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ. ಇದು ಸಾಮಾನ್ಯ ಪ್ರೇಕ್ಷಕರ ಒತ್ತಾಯವೂ ಹೌದು.

ಈ ಶೋಗೆ ಅರ್ಹ ವ್ಯಕ್ತಿ

ಈ ಶೋಗೆ ಅರ್ಹ ವ್ಯಕ್ತಿ

ಈ ಶೋಗೆ ದೊರೈ ಭಗವಾನ್ ಅವರು ಅರ್ಹ ವ್ಯಕ್ತಿ. ಇಂದಿನ ಜನರಿಗೆ ಅದೇಷ್ಟೋ ವಿಷಯಗಳು ಗೊತ್ತಿಲ್ಲ. ರಾಜ್ ಕುಮಾರ್, ಅನಂತ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಅಂತವರ ಜೊತೆ ಸಿನಿಮಾ ಮಾಡಿರುವ ಅನುಭವ ಹೊಂದಿರುವವರು ಇಂದಿನ ಜನರೇಷನ್ ಗೆ ಮಾರ್ಗದರ್ಶಕರು. ಅವರ ಅನುಭವಗಳು ಬೇಕು ಎಂದು ಕೇಳುತ್ತಿದ್ದಾರೆ.

ಆಯೋಜಕರಿಗೆ ಬಿಟ್ಟಿದ್ದು

ಆಯೋಜಕರಿಗೆ ಬಿಟ್ಟಿದ್ದು

ಯಾರೇ ಏನೇ ಹೇಳಿದ್ರು, ಒಂದು ಶೋ ಯಶಸ್ವಿಯಾಗಬೇಕು ಅಂದ್ರೆ ಟಿ.ಆರ್.ಪಿ ಬಹಳ ಮುಖ್ಯ. ಭಗವಾನ್ ಎಪಿಸೋಡ್ ಗೆ ಟಿ.ಆರ್.ಪಿ ಬರಲ್ಲ ಎಂಬ ಮಾತಿದೆ. ಹಾಗಾಗಿಯೇ ಆಯೋಜಕರು ಈ ಬಗ್ಗೆ ಯೋಚನೆ ಮಾಡುತ್ತಿಲ್ಲ ಎನ್ನಲಾಗಿದೆ. ಅಂತಿಮವಾಗಿ ಸಾಧಕರ ಆಯ್ಕೆ ಆಯೋಜಕರಿಗೆ ಬಿಟ್ಟಿದ್ದು.

More from Filmibeat

English summary
Audience demanding to Weekend with ramesh show director to ''please consider the legendary dorai bhagavan for as a guest in your show''.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X