ಪರಭಾಷೆಯ ಕಿರುತೆರೆಯಲ್ಲಿ ಕನ್ನಡ ಕಿರುತೆರೆಯ ಹ್ಯಾಂಡ್‌ಸಮ್ ಹುಡುಗ ಪೃಥ್ವಿರಾಜ್ ಮೋಡಿ

By ಅನಿತಾ ಬನಾರಿ

ಕನ್ನಡದ ಕಿರುತೆರೆಯಲ್ಲಿ ಪ್ರತಿಭಾವಂತ ನಟರಿಗೇನೂ ಕೊರತೆಯಿಲ್ಲ. ಸಾವಿರಾರು ಕಲಾವಿದರನ್ನು ಹೊಂದಿರುವ ಕನ್ನಡ ಮನರಂಜನಾ ಕ್ಷೇತ್ರ ಇಂದು ಪರಭಾಷೆಯಲ್ಲೂ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ಕನ್ನಡದ ಕಲಾವಿದರು ಪರ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ.

ಹಲವಾರು ಕನ್ನಡದ ನಟ ನಟಿಯರು ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳ ಕಿರುತೆರೆಯಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವುದು ಹೆಮ್ಮೆಯ ವಿಷಯ. ಅಂತಹ ಹಲವು ಕಲಾವಿದರ ಸಾಲಲ್ಲಿ ಒಬ್ಬರಾಗಿ ಕನ್ನಡ ಕಿರುತೆರೆ ನಟ ಪೃಥ್ವಿರಾಜ್ ಕಾಣಸಿಗುತ್ತಾರೆ.

Doresani serial fame Prithviraj is charming on the other language small screen

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಮುಕ್ತವಾಗಿ ಪರಿಚಿತನಾದ ಈ ನಟ, ಇಂದು ಪರಭಾಷಾ ರಂಗದಲ್ಲೂ ತನ್ನ ಹೆಸರನ್ನು ಮೂಡಿಸುತ್ತಿದ್ದಾರೆ.

ಕನ್ನಡ ಕಿರುತೆರೆಯ ಮೆಗಾ ಸೀರಿಯಲ್‌ಗಳಲ್ಲಿ ಒಂದಾಗಿದ್ದ ದೊರೆಸಾನಿಯನ್ನು ಯಾರಿಗೂ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇದರ ಮೂಲಕವೇ ಎಲ್ಲರ ಗಮನ ಸೆಳೆದಿದ್ದು ನಟ ಪೃಥಿರಾಜ್. ವಿಶ್ವನಾಥನ್ ಆನಂದ್ ಪಾತ್ರದ ಮೂಲಕ ಈ ಹೀರೋ ಪ್ರತಿ ಎಪಿಸೋಡ್‌ನಲ್ಲೂ ಧಾರಾವಾಹಿ ಪ್ರಿಯರ ಮನೆಗೆದ್ದಿದ್ದಾರೆ. ಧಾರಾವಾಹಿ ಪ್ರಸಾರವಾಗಿದ್ದು, ಅಲ್ಪಾವಧಿಗಾದರೂ ಕನ್ನಡ ಕಿರುತೆರೆಯ ಮುಖಾಂತರ ತನ್ನ ನಟನಾ ಸಾಮರ್ಥ್ಯವನ್ನು ಪೃಥ್ವಿರಾಜ್ ಸಾಬೀತುಪಡಿಸಿದ್ದಾರೆ.

Doresani serial fame Prithviraj is charming on the other language small screen

ಹೀಗೇ ಕನ್ನಡಾಭಿಮಾನಿಗಳ ಮನದಲ್ಲಿ ನೆಲೆಯೂರಿದ್ದ ನಟ,ಧಾರಾವಾಹಿ ಮುಕ್ತಾಯವಾದ ಕೂಡಲೇ ಕಾಣೆಯಾದಂತಾಗಿದ್ದರು. ಆದರೆ ಇದೀಗ ತಮಿಳು ಕಿರುತೆರೆಯ ಮೂಲಕ ಮತ್ತೆ ಎಲ್ಲರಿಗೂ ಹತ್ತಿರವಾಗಿದ್ದಾರೆ. ಹೌದು, ದೊರೆಸಾನಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಪೃಥ್ವಿರಾಜ್‌ಗೆ ತಮಿಳು ಕಿರುತೆರೆಯಿಂದ ಅವಕಾಶ ದೊರಕಿತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಯಶಸ್ವಿ ಪ್ರಸಾರವನ್ನು ಕಂಡಿದ್ದ 'ಮಿಥುನ ರಾಶಿ' ಧಾರಾವಾಹಿ ತಮಿಳಿನಲ್ಲಿ 'ಉಲ್ಲತೈ ಅಲ್ಲಿತಾ' ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ. ಈ ಧಾರಾವಾಹಿ ಪ್ರಸಾರ ಕಾಣಲು ಎಲ್ಲ ತಯಾರಿಯೂ ನಡೆದಿದೆ. ಕನ್ನಡದಲ್ಲಿ ಸ್ವಾಮಿನಾಥನ್ ನಿರ್ವಹಿಸಿದ್ದ ಮಿಥುನ್ ಪಾತ್ರವನ್ನು ತಮಿಳು ರಿಮೇಕ್‌ನಲ್ಲಿ ಪೃಥ್ವಿರಾಜ್ ನಿಭಾಯಿಸಲಿದ್ದಾರೆ. ಇದರ ಮೂಲಕ ತಮಿಳು ಕಿರುತೆರೆಗೂ ನಾಯಕನಾಗಿ ಪೃಥ್ವಿರಾಜ್ ಎಂಟ್ರಿ ಕೊಟ್ಟ ಹಾಗಾಗಿದೆ.

ಸದ್ಯ ಪೃಥ್ವಿ ಅವರನ್ನು ತಮಿಳು ಮಾತ್ರವಲ್ಲದೆ ತೆಲುಗು ಕಿರುತೆರೆಯೂ ಕೈಬೀಸಿ ಕರೆಯುತ್ತಿದೆ. ತೆಲುಗಿನ ಹೊಸದೊಂದು ಧಾರಾವಾಹಿಗೆ ನಟ ಪೃಥ್ವಿ ಅವರನ್ನು ಎನ್ ವಿ ಎನ್ ಸ್ಟುಡಿಯೋ ಕಾಸ್ಟ್ ಮಾಡಿದೆ. ಧಾರಾವಾಹಿ ಮತ್ತು ಮಾಡಬೇಕಾಗಿರುವ ಪಾತ್ರದ ಬಗ್ಗೆ ಇನ್ನೂ ಕೂಡ ಖಚಿತ ಮಾಹಿತಿ ದೊರೆತಿಲ್ಲ.

ಒಟ್ಟಿನಲ್ಲಿ ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದರೆ ತೆಲುಗು ಭಾಷೆಯಲ್ಲೂ ಪೃಥ್ವಿರಾಜ್ ಬಣ್ಣ ಹಚ್ಚಲಿದ್ದಾರೆ. ಕನ್ನಡದ ಕಲಾವಿದರು ಈ ರೀತಿಯಾಗಿ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಸೈ ಎನಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Doresani serial fame Prithviraj is charming on the other language small screen, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X