Weekend with Ramesh: ಬರೀ ಕೈಯಲ್ಲಿ ವಿವಾಹ: ಅಮ್ಮನ ಸಾವಿನ ನೋವು; ಥಟ್ ಅಂತ ಹೇಳಿ ಕಾರ್ಯಕ್ರಮದ ಮರುಸೃಷ್ಟಿ

By ಶೃತಿ ಹರೀಶ್ ಗೌಡ

ನಾ ಸೋಮೇಶ್ವರ ಅವರು ಕ್ವಿಜ್ ಕಾರ್ಯಕ್ರಮಕ್ಕೆ ಹೋಗಿದ್ದಾಗ ರುಕ್ಮಾವತಿ ಅವರ ಪರಿಚಯವಾಗುತ್ತದೆ. ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಸಿ ಮದುವೆ ಆಗುತ್ತಾರೆ. ಸತ್ಯನಾರಾಯಣ ಸಿಂಗ್ ಅವರು ಹೊಸಬಟ್ಟೆ ಕೊಡಿಸಿದರೆ ಇಂದಿರಾ ದೊಡ್ಡಬಳ್ಳಾಪುರ ಅವರು ರೇಷ್ಮೆ ಸೀರೆಯನ್ನು ಕೊಡಿಸುತ್ತಾರೆ. ನಂತರ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬಳಿ ಮದುವೆಯಾಗುತ್ತಿದ್ದೇನೆ ಎಂದು ಪ್ರಸ್ತಾಪ ಮಾಡಿದಾಗ ಹಣವನ್ನು ಕೊಟ್ಟಿದ್ದಾರೆ.

ಹಣ ಬೇಡ ಎಂದರೂ ಮುಂದೆ ಸಹಾಯಕ್ಕೆ ಬರುತ್ತದೆ ಎಂದು ಹಣ ಕೊಟ್ಟಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಇಬ್ಬರೂ ಸಹ ಪ್ರೇಮ ವಿವಾಹ ಆಗಿ ಆದರ್ಶ ಸತಿಪತಿಗಳಾಗಿ ಬಾಳುತ್ತಿದ್ದಾರೆ. ರುಕ್ಮಾವತಿ ಅವರು ಇಂದಿನ ಪೀಳಿಗೆ ಲವ್ ಮ್ಯಾರೇಜ್ ಮಾಡಿಕೊಂಡರೆ ಚೆನ್ನಾಗಿ ಬದುಕನ್ನು ಕಟ್ಟಿಕೊಂಡು ಸಾಧಿಸಿ ತೋರಿಸಿ ಎಂದು ಸಲಹೆ ನೀಡಿದ್ದಾರೆ.

Dr Na Somesahwar recalls his journey in weekend with ramesh season- 5 show

ಅಮ್ಮನಿಗೆ ಅನಾರೋಗ್ಯ

ಅಮ್ಮನಿಗೆ ಆರೋಗ್ಯದಲ್ಲಿ ಏರುಪೇರಾಗಿ ಹಣಕ್ಕೆ ಪರದಾಡಿದ ಸಂದರ್ಭವನ್ನು ಸೋಮೇಶ್ವರ ಅವರು ನೆನೆದಿದ್ದಾರೆ. ಕಿಮೋಥೆರಪಿಗೆ ಒಂದೂವರೆ ಸಾವಿರ ಹಣವಿರಲಿಲ್ಲ. ಇದೇ ವೇಳೆ ಡಾ. ಗೋವಿಂದರಾಜು ಹಣ ಸಹಾಯ ಮಾಡಿದ್ದಾರೆ. ಗೋವಿಂದರಾಜು ಪ್ರತಿ ತಿಂಗಳು ಸಹ ಹಣದ ಸಹಾಯವನ್ನು ಮಾಡುತ್ತಿದ್ದರು. ಆದರೂ ಸಹ ಅಮ್ಮನನ್ನು ನನ್ನ ಕೈಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಾ. ಸೋಮೇಶ್ವರ ತಿಳಿಸಿದ್ದಾರೆ.

ಕ್ವಿಜ್ ಕಾರ್ಯಕ್ರಮದಲ್ಲಿ ರೋಚಕತೆ

'ಥಟ್ ಅಂತ ಹೇಳಿ' ಕಾರ್ಯಕ್ರಮಕ್ಕೆ ನಾ ಸೋಮೇಶ್ವರ ಅವರು ಸೇರಿದ್ದೇ ಒಂದು ರೋಚಕವಾದ ಕಥೆಯಾಗಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಹೆಸರನ್ನ ಈಗಾಗಲೇ ನೋಂದಾವಣೆಯಾಗಿತ್ತು. ನಾ ಸೋಮೇಶ್ವರ ಅವರು ನಾನು ಕ್ವಿಚ್ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎಂದು ದೂರದರ್ಶನದ ಕಚೇರಿಗೆ ಹೋದಾಗ ಏನು ಅನುಭವವಿದೆ ಎಂದು ಕೇಳಿದ್ದಾರೆ. ಈ ವೇಳೆ ನಾನು ಕಾಂಪಿಟೇಶನ್‌ಗಳಲ್ಲಿ ಭಾಗಿಯಾಗಿದ್ದೇ ಎಂದು ಹೇಳಿದಾಗ ಅವಕಾಶ ದೊರೆತಿದೆ.

21 ವರ್ಷಗಳಿಂದ ಥಟ್ ಅಂತಾ ಹೇಳಿ ಕಾರ್ಯಕ್ರಮವನ್ನು ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿವರೆಗೆ 4,450 ಸಂಚಿಕೆಗಳನ್ನು ಪೂರೈಸಿದ್ದು, 50,000ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಲಾಗಿದೆ. ಆರತಿ, ಉಷಾ ಎಂಬುವವರು ಈ ಕಾರ್ಯಕ್ರಮದ ರೂವಾರಿಗಳಾಗಿದ್ದು ಅವರು ಸಹ ನಾ ಸೋಮೇಶ್ವರ ಅವರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿದ್ದಾರೆ.

ವೇದಿಕೆ ಮೇಲೆ 'ಥಟ್ ಅಂತ ಹೇಳಿ'

ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ 'ಥಟ್ ಅಂತಾ ಹೇಳಿ' ಕಾರ್ಯಕ್ರಮವನ್ನು ಮರು ಸೃಷ್ಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಂದಿರಾ ಹಾಗೂ ಚಂದ್ರ ಮೌಲ್ಯ ಅವರು ಭಾಗಿಯಾಗಿ ಎರಡೆರಡು ಪುಸ್ತಕಗಳನ್ನ ಪಡೆದುಕೊಂಡರು. ಇದೇ ವೇಳೆ ರಮೇಶ್ ಅರವಿಂದ್ ಸಹ ಭಾಗಿಯಾಗಿ ಸೋಮೇಶ್ವರ್ ಬಳಿ ಪುಸ್ತಕವನ್ನು ಪಡೆದರು. ಕಾರ್ಯಕ್ರಮದ ಬಗ್ಗೆ ಸೋಮೇಶ್ವರವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.‌

Dr Na Somesahwar recalls his journey in weekend with ramesh season- 5 show

ಕೈದಿಗಳೊಂದಿಗೆ ಪ್ರಶ್ನೋತ್ತರ

'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದರೂ ಎಂಬುದನ್ನ ರಿವಿಲ್ ಮಾಡಲಾಗಿದೆ. ಪರಪ್ಪನ ಅಗ್ರಹಾರದ ಕೈದಿಗಳು ಸಹ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ.‌ ನಂತರ ಎಚ್ಐವಿ ಪೇಷಂಟ್‌ಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ದಿನ ನಡೆದ ಪ್ರಸಂಗವನ್ನು ಸೋಮೇಶ್ವರ ಹಂಚಿಕೊಂಡಿದ್ದಾರೆ.

ನಾನು ಕಾರ್ಯಕ್ರಮ ಮುಗಿದ ಮೇಲೆ ಯಥಾವತ್ತಾಗಿ ನಮಸ್ಕಾರವನ್ನ ಮಾಡಿದರೆ ಎಚ್ಐವಿ ಪೇಷಂಟ್ ನಾನು ಎಚ್ಐವಿ ಪೇಶೆಂಟ್ ಎಂದುಕೊಂಡು ನೀವು ನನಗೆ ಕೈ ಕುಲುಕುತ್ತಿಲ್ಲ ಎಂದು ಹೇಳಿದರು.‌ ನಾನು ಅವರಲ್ಲಿ ಇದ್ದಂತಹ ಮನೋಭಾವನೆಯನ್ನು ಹೋಗಲಾಡಿಸಿ ಕೈ ಕುಲುಕಿ ಅವರಿಗೆ ಶುಭವನ್ನ ಕೋರಿದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

More from Filmibeat

English summary
Dr Na Somesahwar recalls his journey in weekend with ramesh show. he Alos talks about losing his mother. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X