For Quick Alerts
  ALLOW NOTIFICATIONS  
  For Daily Alerts

  ಡ್ರಾಮಾ ಜೂನಿಯರ್ ಗ್ರ್ಯಾಂಡ್ ಫಿನಾಲೆ : ಐದು ತಿಂಗಳ ಜರ್ನಿ ನೆನೆದು ತೀರ್ಪುಗಾರರ ಕಣ್ಣೀರು..!

  By ಎಸ್ ಸುಮಂತ್
  |

  'ಡ್ರಾಮಾ ಜೂನಿಯರ್' ಆರಂಭವಾಗಿ ಐದು ತಿಂಗಳಾಗುತ್ತಾ ಬಂದಿದೆ. ಪುಟಾಣಿ ಮಕ್ಕಳು ಕರ್ನಾಟಕವನ್ನು ನಕ್ಕು ನಲಿಸಿದ್ದಾರೆ. ಇದೀಗ ಶೋ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ನೋಡುಗರಲ್ಲದೆ, ತೀರ್ಪುಗಾರರ ಕಣ್ಣಲ್ಲೂ ನೀರು ತರಿಸಿದ. ಯಾಕೆಂದರೆ ಆ ವೇದಿಕೆ ಅಷ್ಟೊಂದು ಭಾವನೆಗಳನ್ನು ಬೆರೆಸಿದ್ದಂತಹ ವೇದಿಕೆ. ಮಕ್ಕಳ ಜೊತೆ ಕೆಲವು ಗಂಟೆಗಳು ಸಮಯ‌ಕಳೆದರೇನೇ ಬಿಟ್ಟಿರುವುದಕ್ಕೆ ಆಗದಷ್ಟು ನಂಟು ಬೆಳೆದು ಬಿಡುತ್ತೆ. ಅಂಥದರಲ್ಲಿ ಪುಟಾಣಿ ಮಕ್ಕಳ ಜೊತೆ ಐದು ತಿಂಗಳ ಕಾಲ, ಹೆಚ್ಚು ಸಮಯ ಕಳೆದರೆ ಇನ್ನೆಷ್ಟು ಖುಷಿ ಕೊಡಬೇಡ.

  ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ: ಭಾರತದಲ್ಲಿದು ಎರಡನೇ ಕೇಸ್!ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ: ಭಾರತದಲ್ಲಿದು ಎರಡನೇ ಕೇಸ್!

  ಡ್ರಾಮಾ ಜೂನಿಯರ್‌ನಲ್ಲಿ ಪುಟಾಣಿ‌ ಮಕ್ಕಳು ತಮ್ಮದೇ ಆದ ಪ್ರತಿಭೆಯಿಂದ ಗುರುತಿಸಿಕೊಂಡಿದ್ದರು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕಲೆ. ಡ್ರಾಮಾ ಎಂದು ಬಂದಾಗ ಇದ್ದವರಿಗೆಲ್ಲಾ ಸ್ಪರ್ಧೆ ಒಡ್ಡುವುದೇ ಆಗಿತ್ತು. ನಾ ಮುಂದು ತಾ ಮುಂದು ಅಂತ ಎಫರ್ಟ್ ಹಾಕಿ ಸ್ಪರ್ಧೆಗೆ ಇಳಿಯುತ್ತಿದ್ದರು. ಏನೇ ಒತ್ತಡವಿದ್ದರು, ಮಕ್ಕಳ ಈ ಡ್ರಾಮಾ ನೋಡಿದರೆ ಆ ನೋವೆಲ್ಲಾ ಅರೆಕ್ಷಣ ಮರೆತೇ ಹೋಗುತ್ತಿತ್ತು. ಇದೀಗ ಮುಕ್ತಾಯದ ಹಂತ ತಲುಪಿದೆ.

  ಗ್ರ್ಯಾಂಡ್ ಫಿನಾಲೆಯ ಹಾದಿಯಲ್ಲಿ ಡ್ರಾಮಾ ಜೂನಿಯರ್

  ಗ್ರ್ಯಾಂಡ್ ಫಿನಾಲೆಯ ಹಾದಿಯಲ್ಲಿ ಡ್ರಾಮಾ ಜೂನಿಯರ್

  ಮಕ್ಕಳ ನಗು, ಮಕ್ಕಳ ತುಂಟಾಟ ಇದ್ದರೆ ಸಾಕು ಎಂಥವರಿಗೂ ಮತ್ತೆ ಮತ್ತೆ ಆ ಮಕ್ಕಳನ್ನು ಮಾತಾಡಿಸಬೇಕು ಎನಿಸದೇ ಇರುವುದಿಲ್ಲ. ಅದು ನಮ್ಮ ಮಗುನೇ ಆಗಬೇಕಿಲ್ಲ. ಎಲ್ಲೊಇ ಜರ್ನಿಯಲ್ಲಿ ಮಗು ಸಿಕ್ಕಿದರು, ಅದು ನಮ್ಮನ್ನು ನೋಡಿ ರಿಯಾಕ್ಟ್ ಮಾಡಿದರೆ, ಆ‌ ಮಗುವಿನ ಜೊತೆ ಬೆರೆತು ಬಿಡುತ್ತೇವೆ. ಡ್ರಾಮಾ ಜೂನಿಯರ್‌ನಲ್ಲಂತು ಮಕ್ಕಳ ದಂಡೇ ಇತ್ತು. ಅಬ್ಬಬ್ಬಾ ತಮ್ಮ ಕಲೆಯನ್ನು ವೆರೈಟಿ ವೆರೈಟಿಯಾಗಿ ಪ್ರದರ್ಶಿಸಿದ್ದಾರೆ. ನಗಿಸಿದ್ದಾರೆ, ಅಳಿಸಿದ್ದಾರೆ, ಸೀರಿಯಸ್ ಆಗಿ‌ ನೋಡುವಂತೆ ಮಾಡಿದ್ದಾರೆ. ಇದೀಗ ಗ್ರ್ಯಾಂಡ್ ಫಿನಾಲೆಯಲ್ಲೂ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಯಾರು ಡ್ರಾಮಾ ಜೂನಿಯರ್‌ನಲ್ಲಿ ಗೆಲ್ಲಲ್ಲಿದ್ದಾರೆ ಎಂಬುದು ತಿಳಿಯಲಿದೆ.

  ಕೊನೆಯ ನಿರ್ಧಾರ 'ಜೊತೆ ಜೊತೆಯಲಿ'ಯಲ್ಲಿ ಇನ್ನು ಮುಂದೆ ಅನಿರುದ್ಧ್ ಇರೋದಿಲ್ಲ!ಕೊನೆಯ ನಿರ್ಧಾರ 'ಜೊತೆ ಜೊತೆಯಲಿ'ಯಲ್ಲಿ ಇನ್ನು ಮುಂದೆ ಅನಿರುದ್ಧ್ ಇರೋದಿಲ್ಲ!

  ಪುಟಾಣಿ ಮಕ್ಕಳ ಕಲೆಗೆ ತಲೆಬಾಗಿದ ತೀರ್ಪುಗಾರರು

  ಪುಟಾಣಿ ಮಕ್ಕಳ ಕಲೆಗೆ ತಲೆಬಾಗಿದ ತೀರ್ಪುಗಾರರು

  ಡ್ರಾಮಾ ಜೂನಿಯರ್ ಇದು ಹೇಳಿಕೇಳಿ ಮಕ್ಕಳಿಗಾಗಿಯೇ ಮಾಡಿದ್ದ ಶೋ. ಅದು ಪುಟಾಣಿ‌ ಮಕ್ಕಳ ಶೋ. ಮಕ್ಕಳ ಆಟ ತುಂಟಾಟ ಗೊತ್ತೆ ಇರುತ್ತಲ್ಲ. ಹೀಗಾಗಿ ಇಡೀ ಟೀಂ ಮಕ್ಕಳ ಜೊತೆಗೆ ಭಾವನಾತ್ಮಕವಾಗಿ ಬೆರೆತಿದ್ದಾರೆ. ಕೆಲವೊಂದು ಪರ್ಫಾಮೆನ್ಸ್ ನಲ್ಲಿ ಮಕ್ಕಳು ಅಭಿನಯಿಸುವ ರೀತಿ, ಅದಕ್ಕಾಗುವ ಎಫರ್ಟ್ ನೋಡಿ ಜಡ್ಜಗಳೇ ಶಾಕ್ ಆಗಿದ್ದಾರೆ. ರಚಿತಾ ರಾಮ್ ಅದೆಷ್ಟೋ ಬಾರಿ ತಲೆಬಾಗಿ, ಹ್ಯಾಟ್ಸಾಪ್ ಹೇಳಿದ್ದಾರೆ. ಇನ್ನು ಹಿರಿಯ ನಟಿ ಲಕ್ಷ್ಮೀ ಅವರು ಕರೆದು ಮುದ್ದಾಡಿದ್ದಾರೆ.

  ಮಕ್ಕಳಲ್ಲಿ ಮಗುವಾಗುತ್ತಿದ್ದ ರವಿಚಂದ್ರನ್

  ಮಕ್ಕಳಲ್ಲಿ ಮಗುವಾಗುತ್ತಿದ್ದ ರವಿಚಂದ್ರನ್

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರ ತಂದೆ ಆನೆ ಬಲದಂತೆ ಇದ್ದರು. ಅವರು ಇಹಲೋಕ ತ್ಯಜಿಸಿದ ಮೇಲೆ ಸಾಕಷ್ಟು ಬಾರಿ ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀನಿ ಅಂತ ಹೇಳಿದ್ದಾರೆ. ಇದೀಗ ಮಕ್ಕಳು ಕೊಟ್ಟ ಪ್ರೀತಿ ಮತ್ತೆ ರವಿಚಂದ್ರನ್ ಅವರಿಗೆ ಅವರ ತಂದೆಯನ್ನು ನೆನಪಿಸಿದೆ. ಪುಟ್ಟ ಮಗುವೊಂದನ್ನು ಎತ್ತಿಕೊಂಡು ಸ್ಟೇಜ್ ಮೇಲೆ ಮಾತಾಡಿದ ರವಿಚಂದ್ರನ್, ಈ ಮಕ್ಕಳು ಕೊಟ್ಟ ಪ್ರೀತಿ ಯಾವತ್ತು ಮರೆಯುವುದಕ್ಕೆ ಆಗಲ್ಲ. ಅದರಲ್ಲೂ ಇವಳು ಕೊಟ್ಟ ಪ್ರೀತಿ ನನ್ನ ತಂದೆಯನ್ನು ನೆನಪಿಸಿದೆ ಎಂದು ವೇದಿಕೆ ಮೇಲೆ ಎಮೋಷನಲ್ ಆಗಿದ್ದರು.

  ಫಿನಾಲೆಗೆ ರೆಡಿ ಆಯ್ತು ದೊಡ್ಡ ವೇದಿಕೆ

  ಫಿನಾಲೆಗೆ ರೆಡಿ ಆಯ್ತು ದೊಡ್ಡ ವೇದಿಕೆ

  ಡ್ರಾಮಾ ಜೂನಿಯರ್ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ವೇದಿಕೆ ರೆಡಿ ಮಾಡಿದ್ದಾರೆ. ಅದರ ಹಿಂದಿನ ಕಷ್ಟವ ಮೇಕಿಂಗ್ ವಿಡಿಯೋವನ್ನು ಜೀ ಕನ್ನಡ ಹಂಚಿಕೊಂಡಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಮಕ್ಕಳು ಎಕ್ಸ್ಟ್ರಾ ಎನರ್ಜಿ ಹಾಕಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಲಕ್ಷ್ಮೀ, ರವಿಚಂದ್ರನ್, ರಚಿತಾ ರಾಮ್ ಮಿಂಚುತ್ತಿದ್ದಾರೆ‌. ಮಾಸ್ಟರ್ ಆನಂದ್ ಕೂಡ ಇಷ್ಟು‌ ತಿಂಗಳ ನೆನಪನ್ನು ಮೆಲುಕು ಹಾಕಿದ್ದಾರೆ.

  English summary
  Drama Junior Reality Show August 21st Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X