Rachita Ram in Saree : ಸೀರೆಯುಟ್ಟು ನಿಂತ ರಚಿತಾ ರಾಮ್ ಕಂಡು ಫ್ಯಾನ್ಸ್ ಏನಂದ್ರು?
ಡ್ರಾಮ ಜೂನಿಯರ್ಸ್ ವೇದಿಕೆಯಲ್ಲಿ ರವಿಮಾಮನೊಂದಿಗೆ ರಚಿತಾ ರಾಮ್ ಮಸ್ತ್ ಡ್ಯಾನ್ಸ್ ಮಾಡಿದ್ರು. ಇಬ್ಬರ ಡಾನ್ಸ್‌ಗೂ ತಮ್ಮಿಬ್ಬರ ನೆಚ್ಚಿನ ಅಭಿಮಾನಿಗಳು ಫಿದಾ ಆಗಿದ್ದರು. ರವಿಚಂದ್ರನ್ ಹಾಗೂ ರಚಿತಾ ರಾಮ್ ಒಟ್ಟಿಗೆ ಯಾವಾಗ ನಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಇದೀಗ ಭಾರತೀಯ ನಾರಿಯರು ಹೇಗಿರಬೇಕು ಎಂಬುವುದನ್ನು ರಚಿತಾ ರಾಮ್ ತೋರಿಸಿ ಕೊಟ್ಟಿದ್ದಾರೆ. ಹಾಗೆಯೇ ಸಾರಿ ಲುಕ್‌ನಲ್ಲೂ ನೋಡುಗರ ಗಮನ ಸೆಳೆದಿದ್ದಾರೆ. ರಚಿತಾ ರಾಮ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ ಸೀಸನ್ 4 ರಲ್ಲಿ ಜಡ್ಜ್ ಆಗಿ ಆಗಮಿಸಿದ್ದಾರೆ. ಕಲರ್ಸ್ ವಾಹಿನಿಯ ಮಜಾಭಾರತ ಕಾಮಿಡಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಬಂದಿದ್ದಾರೆ.
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ದಿನೇ ದಿನೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ನಟಿ ರಚಿತಾ ರಾಮ್ ಹೆಸರಲ್ಲಿ ಟ್ಟಿಟರ್ ಖಾತೆಯೊಂದಿದೆ. ಸಾವಿರಾರು ಮಂದಿ ಅಲ್ಲಿ ರಚಿತಾ ರಾಮ್‌ರನ್ನು ಫಾಲೋ ಮಾಡುತ್ತಿದ್ದಾರೆ. ಗುಳಿ ಕೆನ್ನೆ ಹುಡುಗಿ ಬೆಳ್ಳಿ ಪರದೆ ಮೇಲೆ ನಟಿಯಾಗಿ ಮಾತ್ರವಲ್ಲದೆ, ಕಿರುತೆರೆಯಲ್ಲಿಯೂ ಕಾಮಿಡಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಮಿಂಚುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ರಚಿತಾ ರಾಮ್ ಕನ್ನಡ ಧಾರಾವಾಹಿ 'ಅರಸಿ'ಯಲ್ಲಿ ಕಾಣಿಸಿಕೊಂಡಿದ್ದರು. ನಟಿ ರಚಿತಾ ರಾಮ್ 2013ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಬುಲ್‌ಬುಲ್' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು 'ದಿಲ್ ರಂಗೀಲಾ', 'ಅಂಬರೀಶ', 'ರನ್ನ', 'ರಥಾವರ', 'ಚಕ್ರವ್ಯೂಹ', 'ಭರ್ಜರಿ' ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಡಿಂಪಲ್ ಕ್ವೀನ್ ಎಂದೇ ಜನಪ್ರಿಯವಾಗಿರುವ ನಟಿ ರಚಿತಾ ರಾಮ್ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೇ ಮೊದಲೇನಲ್ಲ. ಹತ್ತು ವರ್ಷಗಳ ಹಿಂದೆ ಪ್ರಸಾರವಾಗಿದ್ದ 'ಅರಸಿ' ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಅವರ ಮೊದಲ ಸೀರಿಯಲ್ ಕೂಡ ಆಗಿತ್ತು. ಹತ್ತು ವರ್ಷಗಳ ನಂತರ ಮತ್ತೆ ಜೀ ಕನ್ನಡ ವಾಹಿನಿ ಬಳಗಕ್ಕೆ ಸೇರಿದ್ದಾರೆ.


Click it and Unblock the Notifications











