ವೀಕ್ಷಕರಿಗೆ ಹತ್ತಿರವಾಗುತ್ತಿದೆ ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ

By ಪೂರ್ವ

ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ಚೆನ್ನಾಗಿ ಮೂಡಿ ಬರುತ್ತಿದೆ. ಈ ಬಾರಿ ಬಹಳ ಡಿಫರೆಂಟ್ ಆಗಿ ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಬಾರಿ ಹೊಸ ಥೀಮ್ ನೊಂದಿಗೆ ರಿಯಾಲಿಟಿ ಶೋ ನಡೆಯುತ್ತಿದ್ದು ನೋಡುಗರ ಕಣ್ಣಿಗೆ ಮುದ ನೀಡುತ್ತಿದೆ. ಈ ಬಾರಿ ಮಕ್ಕಳ ಜೊತೆ ಪೋಷಕರು ಅಭಿನಯಿಸುವ ಟಾಸ್ಕ್ ನೀಡಲಾಗಿದೆ. ಇದರಿಂದ ಎಲ್ಲಾ ಪೋಷಕರು ಮಕ್ಕಳಿಗೆ ಸಪೋರ್ಟ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ

ನೇಪಾಳದಿಂದ ಬೆಂಗಳೂರಿಗೆ ಬಂದು ನೆಲೆಯೂರಿದ ಮಗುವಿನ ತಾಯಿಯ ಕಷ್ಟ ಹೇಳತೀರದು. ಆದರೆ ಮಗುವಿನ ಖುಷಿಮುಂದೆ ಎಲ್ಲವನ್ನೂ ಆಕೆ ಮರೆತು ಬಿಡುತ್ತಾಳೆ. ಬೇರೆಯವರ ಮನೆ ಒರೆಸಿ ಗುಡಿಸಿ ಎಲ್ಲಾ ಕೆಲಸವನ್ನು ಮಾಡುತ್ತಾ ತನ್ನ ಮಗುವಿಗೂಸ್ಕರ ಹಗಲಿರುಳು ಎನ್ನದೆ ದುಡಿಯುತ್ತಾ ಡ್ರಾಮಾ ಜ್ಯೂನಿಯರ್ ಸೇರಿಸಬೇಕು ಎಂಬ ಹಂಬಲ ಮೂಡಿತ್ತು. ಹಾಗೆಯೇ ಮಗಳನ್ನು ವೇದಿಕೆಗೆ ಕರೆದುಕೊಂಡು ಬರುತ್ತಾಳೆ ನೇಪಾಳದಿಂದ ಬಂದಿದ್ದರು ಉತ್ತಮ ಕನ್ನಡ ಮಾತನಾಡುತ್ತಾಳೆ ಚಿನ್ನಾರಿ ಬೆಡಗಿ.

ಮೆಚ್ಚಿದ ರವಿಚಂದ್ರನ್

ಮೆಚ್ಚಿದ ರವಿಚಂದ್ರನ್

ಉತ್ತಮವಾಗಿ ಅಭಿನಯಿಸಿ ರವಿಚಂದ್ರನ್ ಅವರ ಬಳಿ ಶಭಾಷ್ ಗಿರಿಯನ್ನು ಪಡೆದುಕೊಳ್ಳುತ್ತಾರೆ. ಈ ಬಾರಿ ಮಾಸ್ಟರ್ ಆನಂದ್ ಕೇಳುತ್ತಾರೆ ನಿನಗೆ ಯಾರು ಇಷ್ಟ ಎಂದು ಅದಕ್ಕೆ ಆಕೆ ಅಮ್ಮ ಮತ್ತು ರವಿಚಂದ್ರನ್ ಸರ್ ಕಂಡ್ರೆ ಇಷ್ಟ ಅನ್ನುತ್ತಾಳೆ. ಅದಕ್ಕೆ ರವಿ ಸರ್ ಹೇಳುತ್ತಾರೆ. ಅವಳು ಅಮ್ಮನನ್ನು ಯಾವತ್ತೂ ಬಿಟ್ಟು ಕೊಡಲ್ಲ. ಈಗಲೂ ಅಮ್ಮ ಮತ್ತು ನಾನು ಇಷ್ಟ ಹೇಳಿದಳು. ಇದರಲ್ಲಿಯೇ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.

ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡ ಚಿರಂತ್

ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡ ಚಿರಂತ್

ಚಿರಾಂತ್ ಹಾಗೂ ಸತೀಶ್, ಶಕುಂತಲಾ, ವೇದಿಕ್ ತಂದೆ ಮಹದೇವಪ್ಪ ಹಾಗೆ ಕುಳ್ಳ ಸಿಂಗಂ ಅರುಣ್, ಧನ್ಯ ತಾಯಿ ಚೈತ್ರ ಅಭಿನಯದಲ್ಲಿ ಕಿರು ನಾಟಕ ಪ್ರದರ್ಶನ ನಡೆಯಿತು. ಎಲ್ಲರೂ ಬಹಳ ಅದ್ಭುತವಾಗಿ ನಟನೆ ಮಾಡಿದರು. ಡಾಕ್ಟರ್ ಗಳಿಗೆ ಒಂದು ಕಿರು ಸಂದೇಶ ನೀಡುವ ಸ್ಟೋರಿ ಇದಾಗಿತ್ತು. ಕ್ಲಿನಿಕ್ ಗೆ ಆಗಮಿಸಿದ ರೋಗಿಯನ್ನು ಹೇಗೆ ನೋಡಿಕೊಳ್ಳಬೇಕು, ಬಡ ರೋಗಿಗಳ ಸಂಕಷ್ಟವನ್ನು ಸಾರಿ ಹೇಳುವ ಸ್ಕಿಟ್ ಇದಾಗಿತ್ತು.

ಡಾಕ್ಟರ್ ಗಳಿಗೆ ಕಿವಿ ಮಾತು ಹೇಳುವ ಡ್ರಾಮಾ

ಡಾಕ್ಟರ್ ಗಳಿಗೆ ಕಿವಿ ಮಾತು ಹೇಳುವ ಡ್ರಾಮಾ

ಮತ್ತೊಂದು ಮಗು ಡಾಕ್ಟರ ಬಳಿ ಓಡಿ ಬರುತ್ತಾಳೆ. ನನ್ನ ಅಮ್ಮನಿಗೆ ಡಿಕೆಡಿ ನೋಡಿ ಇದೀಗ ಒಂತರ ಆಡುತ್ತಿದ್ದಾರೆ ಎಂದು ಹೇಳುತ್ತಾನೆ. ಇದನ್ನು ಕಡಿಮೆ ಮಾಡಲು ಬಹಳ ಹಣ ಖರ್ಚು ಆಗಲಿದೆ ಎಂದು ಹೇಳುತ್ತಾನೆ. ಆದ್ರೂ ಟ್ರೀಟ್ ಮೇಂಟ್ ಮಾಡಿ ಮನೆಗೆ ಕರೆದುಕೊಂಡು ಹೋದರು, ಬಳಿಕ ಮತ್ತೊಬ್ಬ ಹಾರ್ಟ್ ಪೇಷಂಟ್ ಬರುತ್ತಾನೆ. ಆತನನ್ನು ಎಷ್ಟೇ ಮನೆಗೆ ಹೋಗಲು ಹೇಳಿದರೆ ಆತ ಹೋಗಲು ರೆಡಿ ಇಲ್ಲ. ನನಗೆ ಹಾರ್ಟ್ ಅಟ್ಯಾಕ್ ಆದ್ರೆ ಏನು ಮಾಡುವುದು ಎಂದೆಲ್ಲ ಹೇಳಿ ಅವರ ಜೊತೇನೆ ಇದ್ದರೂ ಇದನ್ನು ಕಂಡು ಡಾಕ್ಟರ್ ಹೆಂಡತಿ ಕುಪಿತ ಗೊಂಡು ಮನೆಬಿಟ್ಟು ತೆರಳುತ್ತಾಳೆ.

ಸೇವೆಯೇ ಮೊದಲು ಶುಲ್ಕ ನಂತರ

ಸೇವೆಯೇ ಮೊದಲು ಶುಲ್ಕ ನಂತರ

ಇದನ್ನು ಕಂಡ ಡಾಕ್ಟರ್ ಗೆ ಬಹಳ ದುಖವಾಗುತ್ತದೆ. ಬಳಿಕ ಹಾರ್ಟ್ ಪೇಷಂಟ್ ಹುಷಾರಾದ. ಇದನ್ನು ಕಂಡ ಡಾಕ್ಟರ್ ಗೆ ಖುಷಿಯಾಗುತ್ತದೆ. ಬಳಿಕ ನೋಡುತ್ತಾನೆ 10 ಜನರನ್ನು ಕರೆದುಕೊಂಡು ಬಂದಿದ್ದನ್ನು ನೋಡಿದ ಡಾಕ್ಟರ್ ಗೆ ಹಾರ್ಟ್ ಪ್ರಬ್ಲಂ ಬರುತ್ತದೆ. ಇದನ್ನು ಕಂಡ ಆತ ನೋಡಿದಿರಾ ಡಾಕ್ಟರ್, ''ನೀವು ಅಂದು ಬಂದಿದ್ದ ಹಾರ್ಟ್ ಪೇಷಂಟ್ ಹಣ ಕಟ್ಟಿದರೆ ಟ್ರೀಟ್ ಮೆಂಟ್ ಎಂದು ಹೇಳಿ ಕಳುಹಿರುವುದು ಸರಿಯಲ್ಲ. ಇನ್ನಾದರೂ ಹಣದ ಮೋಹ ಬಿಟ್ಟು ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲಿ ಎಂಬುವುದು ನಮ್ಮ ಆಶಯ ಎಂದು ಡ್ರಾಮಾ ಕೊನೆಗೊಳ್ಳುತ್ತದೆ. ಇದನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆಯನ್ನು ತಟ್ಟಿ ಪ್ರೋತ್ಸಾಹಿಸಿದರು.

More from Filmibeat

English summary
Drama juniors reality show update on 26th June. Parents also performing on the stage with their kids.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X