Drama Juniors Season 4: ಅವಮಾನ ಮಾಡಿದವರ ಎದುರು ತೊಡೆ ತಟ್ಟಿದ 'ಡ್ರಾಮ ಜೂನಿಯರ್' ಸಿಂಗಂ

By ಪೂರ್ವ

ಡ್ರಾಮಾ ಜ್ಯೂನಿಯರ್ ರಿಯಾಲಿಟಿ ಶೋ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಚಿಣ್ಣರ ಚಿಲಿಪಿಲಿಗಳ ನಡುವೆ ಅದೆಷ್ಟೋ ನೋವುಗಳನ್ನು ಕಲಿಯಬೇಕು ಸಾಧಿಸಬೇಕು ಎಂಬ ಹುಮ್ಮಸ್ಸನ್ನು ಮಕ್ಕಳು ಕಣ್ಣಿಗೆ ಕಟ್ಟುವ ರೀತಿ ತೆರೆದಿಡುತ್ತಿದ್ದಾರೆ. ಅವಮಾನ ಮಾಡಿದವರ ಎದುರು ತೊಡೆ ತಟ್ಟಿದ್ದಾನೆ ಪುಟ್ಟ ಹುಡುಗ. ತಾನು ಕೊಳಾಕ್ಕಿದ್ದೇನೆ ಎಂದು ಎಲ್ಲರೂ ತಲೆಗೆ ಹೊಡೀತಾರೆ ಎಂದು ಕಣ್ಣೀರಿಟ್ಟಿದ್ದಾನೆ.

ಇನ್ನು ಇದೇ ಕಾರಣಕ್ಕೆ ಅವನ ಮನಸ್ಸಿನಲ್ಲಿ ಕೋಪ , ಛಲ, ಏನಾದರೂ ಸಾಧಿಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು.ಅರುಣ್ ಎಂಬ ಹುಡುಗ ಜೀವನದಲ್ಲಿ ಅದೆಷ್ಟು ನೊಂದಿದ್ದಾನೆ ಎಂದರೆ ಶಾಲೆಗೆ ಹೋಗಲು ಬೇಸರಿಸಿಕೊಳ್ಳುವ ತನಕ ಅವನ ಮನಸ್ಸಿಗೆ ಗಾಯದ ಬರೆಯನ್ನು ಹಾಕಿ ಬಿಟ್ಟಿದ್ದಾರೆ. ಡ್ರಾಮ ಜೂನಿಯರ್ಸ್‌ನಲ್ಲಿ ಭಾಗವಹಿಸಬೇಕು ಎಂಬುದು ಎಲ್ಲರ ಆಸೆಯಾಗಿರುತ್ತೆ. ಆದರೆ, ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅವರಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ನೀಡಲಾಗಿದೆ.

ಡ್ರಾಮಾ ಜೂನಿಯರ್ಸ್ 4ನೇ ಸೀಸನ್‌ಗೆ ಚಾಲನೆ

ಡ್ರಾಮಾ ಜೂನಿಯರ್ಸ್ 4ನೇ ಸೀಸನ್‌ಗೆ ಚಾಲನೆ

ಡ್ರಾಮಾ ಜೂನಿಯರ್ಸ್' ಇಡೀ ಕರ್ನಾಟಕವೇ ಮೆಚ್ಚಿ ಅಪ್ಪಿಕೊಂಡಿರುವ ಕಾರ್ಯಕ್ರಮ. ಈ ಡ್ರಾಮಾ ಜೂನಿಯರ್ಸ್ ನಾಲ್ಕನೇ ಸೀಸನ್‌ಗೆ ಶನಿವಾರ ಚಾಲನೆ ಸಿಕ್ಕಿದ್ದು, ಮೆಗಾ ಆಡಿಷನ್‌ನ ಎರಡು ಸಂಚಿಕೆಗಳು ಪ್ರಸಾರವಾಗಿವೆ. ಕರ್ನಾಟಕದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಡ್ರಾಮ ಜೂನಿಯರ್ಸ್‌ಗೆ ಆಗಮಿಸಿದ್ದಾರೆ. ಇವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ನೇಪಾಳದ ಬಾಲಕಿ ಕೂಡ ಡ್ರಾಮಾ ವೇದಿಕೆ ತಲುಪಿದ್ದಾಳೆ. ಆದರೆ ಈಕೆ ಸ್ಪರ್ಧಿಯಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಆಕೆಗಿರುವ ಆಸಕ್ತಿಗೆ ರವಿಚಂದ್ರನ್ ಫಿದಾ ಆಗಿದ್ದಾರೆ. ಆಕೆ ನಮ್ಮ ಜೊತೆನೇ ಇರಲಿ ಎಂದು ಹೇಳಿ ಕಾರ್ಯಕ್ರಮ ಕೊನೆಯವರೆಗೂ ಈ ಬಾಲಕಿ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪ್ರತಿ ಸೀಸನ್‌ನಲ್ಲಿಯೂ ಈ ಕಾರ್ಯಕ್ರಮ ಜನಪ್ರಿಯವಾಗುತ್ತಿದೆ. ನಮ್ಮ ನೆಲದ ಕಥೆಗಳಿಗೆ ನಾಟಕದ ರೂಪ ನೀಡಿ ಜೀವ ತುಂಬುತ್ತಿದ್ದು ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಚಿಣ್ಣರ ಅಭಿನಯ ನೋಡಲು ವೀಕ್ಷಕರು ಕಾತುರ

ಚಿಣ್ಣರ ಅಭಿನಯ ನೋಡಲು ವೀಕ್ಷಕರು ಕಾತುರ

'ಡ್ರಾಮಾ ಜ್ಯೂನಿಯರ್ಸ್' ರಿಯಾಲಿಟಿ ಶೋ ನಲ್ಲಿ ನಮ್ಮ ನಾಡಿನ ಸೊಗಡು, ಹಳೆ ಕಾಲದ ನಾಟಕಗಳನ್ನು , ಸಾಧಕರ ಯಶೋಗಾಥೆ , ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನೇಕ, ಕನ್ನಡ ತನವನ್ನು ಪ್ರತಿನಿಧಿಸುವ ಕಥೆಗಳನ್ನು ಮಕ್ಕಳ ಮುಖಾಂತರ ಸಾಮಾನ್ಯರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಈ ಬಾರಿ ತೀರ್ಪುಗಾರರ ಸ್ಥಾನದಲ್ಲಿರುವ ಹಿರಿಯ ನಟಿ ಲಕ್ಷ್ಮೀ, ವಿ. ರವಿಚಂದ್ರನ್‌ ಮತ್ತು ರಚಿತಾ ರಾಮ್‌ ಉತ್ತಮರಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡಿದ್ದಾರೆ. ಆನೇಕಲ್‌ನ ಪರೀಕ್ಷಿತ್‌ , ಶಿರಸಿಯ ಖುಷಿ ಆನಂದ ಗೌಳಿ, ಬೆಂಗಳೂರಿನ ಜತಿನ್‌, ಚಾಮರಾಜನಗರದ ಗೌತಮ್‌ ರಾಜ್‌ ಮೊದಲ ಸಂಚಿಕೆಯಲ್ಲೇ ತೀರ್ಪುಗಾರರ ಮನಗೆದ್ದಿದ್ದಾರೆ. ಚಿಣ್ಣರ ತರಲೆ-ತುಂಟಾಟ , ಅಭಿನಯ ಕೌಶಲ್ಯವನ್ನು ಕಣ್ತುಂಬಿಕೊಳ್ಳಲು ವೀಕ್ಷಕರು ಕುತೂಹಲದಿಂದ ಕಾಯುತ್ತಿರುವುದಂತು ಅಕ್ಷರಶಃ ಸತ್ಯ.

15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್‌ನಲ್ಲಿ ಭಾಗಿ

15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್‌ನಲ್ಲಿ ಭಾಗಿ

15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್ಸ್‌ನಲ್ಲಿ ಭಾಗವಹಿಸಿದ್ದಾರೆ. ಇದೀಗ 15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಮೆಗಾ ಆಡಿಷನ್‌ನಲ್ಲಿ ಭಾಗವಹಿಸಿದ್ದಾರೆ. ಹಿಂದಿನ 3 ಸೀಸನ್‌ಗಳಲ್ಲಿ ತೀರ್ಪುಗಾರರಾಗಿದ್ದ ಹಿರಿಯ ನಟಿ ಲಕ್ಷ್ಮೀ 4ನೇ ಸೀಸನ್‌ನಲ್ಲೂ ಮುಂದುವರೆದಿರುವುದು ವಿಶೇಷ. ಅವರ ಜೊತೆಗೆ ಇದೇ ಮೊದಲ ಬಾರಿಗೆ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರು ಜೊತೆಯಾಗಿದ್ದಾರೆ. ಈ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್‌ ಆಗಿದ್ದ ಅವರು, ಇದೇ ಮೊದಲ ಬಾರಿಗೆ ಜೀ ಕನ್ನಡದ ರಿಯಾಲಿಟಿ ಶೋವೊಂದಕ್ಕೆ ಜಡ್ಜ್‌ ಆಗುವ ಮೂಲಕ ಜೀ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ರಚಿತಾ-ರವಿಚಂದ್ರನ್ ಪ್ರೋಮೊ ವೈರಲ್

ರಚಿತಾ-ರವಿಚಂದ್ರನ್ ಪ್ರೋಮೊ ವೈರಲ್

'ಡ್ರಾಮಾ ಜೂನಿಯರ್ಸ್' ಶೋ ಆರಂಭಕ್ಕೂ ಮುನ್ನ ರಿಲೀಸ್ ಆಗಿದ್ದ ಅಪಹರಣದ ಪ್ರೋಮೊಗಳು ಎಲ್ಲೆಡೆ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದವು. ಹಾಗೆಯೇ ರಚಿತಾ ರಾಮ್ ರನ್ನು ಕಾರಲ್ಲಿ ಕಿಡ್ನಾಪ್ ಮಾಡಿಕೊಂಡು ತೆರಳುತ್ತಿರುವ ದೃಶ್ಯ ಬಹಳ ಉತ್ತಮವಾಗಿ ಮೂಡಿಬಂದಿದೆ. ಅದರಲ್ಲಿಯೂ ಇಲ್ಲಿವರೆಗೂ ಜೀ ಕನ್ನಡದ ವಿಶೇಷ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದ ರವಿಚಂದ್ರನ್ ಈಗ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ರವಿಚಂದ್ರನ್ , ಲಕ್ಷ್ಮೀ ಜೊತೆಗೆ ರಚಿತಾ ರಾಮ್ ಶೋನಲ್ಲಿ ಜಡ್ಜ್‌ ಆಗಿದ್ದಾರೆ. 'ಮಾತಿನ ಮಲ್ಲ' ಮಾಸ್ಟರ್ ಆನಂದ್ ನಿರೂಪಕರಾಗಿ ಈ ಸೀಸನ್‌ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

More from Filmibeat

English summary
Drama juniors reality show written update on March 20th Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X