ಕುಳ್ಳ ಸಿಂಗಂ 'ಪುಷ್ಟ' ಸ್ಟೆಪ್‌ಗೆ ಫಿದಾ ಆಗಿ ಮುತ್ತಿಟ್ಟ ರಚಿತಾ ರಾಮ್!
ಸತತ ಮೂರು ವರುಷಗಳಿಂದ ನಂಬರ್ ಒನ್ ಸ್ಥಾನದಲ್ಲಿದ್ದ ಡ್ರಾಮಾ ಜ್ಯುನಿಯರ್ಸ್ ಜೀ ಕನ್ನಡಕ್ಕೆ ಹೆಮ್ಮೆಯ ಗರಿ ಇದ್ದ ಹಾಗೆ. 'ಡ್ರಾಮಾ ಜ್ಯುನಿಯರ್ಸ್' ರಿಯಾಲಿಟಿ ಶೋ ಸೀಸನ್ 4 ಪುಟ್ಟ ಮಕ್ಕಳ ರಿಯಾಲಿಟಿ ಶೋ. ಈ ಬಾರಿನ ರಾಯಚೂರಿನ ಪುಟ್ಟ ಪೋರಾ 'ಪುಷ್ಪ' ಅವತಾರದಲ್ಲಿ ಮಿಂಚಿದ್ದಾನೆ.
'ಗರುಡ ಗಮನ ವೃಷಭ ವಾಹನ' ಚಿತ್ರದ ಶಿವನಾಗಿ ಮಂಗಳೂರಿನ ಕಡಬದ ವೇದಿಕ್ ಕೌಶಲ್, ಕುಳ್ಳ ಸಿಂಗಂ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಆಕ್ಟಿಂಗ್‌ಗೆ ನೋಡುಗರು ಫಿದಾ ಆಗಿದ್ದಾರೆ. ಈ ಬಾರಿಯ 'ಡ್ರಾಮಾ ಜ್ಯುನಿಯರ್ಸ್' ರಿಯಾಲಿಟಿ ಶೋ ಸೀಸನ್ 4ರ ಪ್ರೋಮೋ ಸಖತ್ ಆಗಿ ಮೂಡಿ ಬಂದಿದೆ.
ಇದನ್ನು ನೋಡಿ ಜನ ಶನಿವಾರ -ಭಾನುವಾರ ಯಾವಾಗ ಬರುತ್ತೋ, ಡ್ರಾಮಾ ಜ್ಯೂನಿಯರ್ಸ್ ಅನ್ನು ಯಾವಾಗ ಕಣ್ತುಂಬಿಸಿಕೊಳ್ಳುತ್ತೇವೊ ಎಂದು ಕಾತರದಿಂದ ಕಾಯುವ ಸರದಿ ನೋಡುಗರದ್ದು. ಜನರ ಹಾಟ್ ಫೇವರಿಟ್ ಆಗಿದೆ ಡ್ರಾಮಾ ಜ್ಯೂನಿಯರ್ಸ್.

'ಪುಷ್ಪ' ಅವತಾರವೆತ್ತಿ ವೇದಿಕೆಯಲ್ಲಿ ಧೂಳೆಬ್ಬಿಸಿದ ಪೋರ
ಮಕ್ಕಳು ಏನೇ ಮಾಡಿದರೂ ಚೆಂದ , ನೋಡುಗರ ಕಣ್ಣಿಗೆ ರಸದೌತಣ ನೀಡಿದ ಹಾಗೆ. ಮಕ್ಕಳ ಅಭಿನಯ, ತರಲೆಗೆ ಮಾರು ಹೋಗದೆ ಇರುವವರು ಯಾರು ಇಲ್ಲ. ಬೈಕ್ ಮೂಲಕ ವೇದಿಕೆಗೆ ಆಗಮಿಸಿ ಧೂಳೆಬ್ಬಿಸಿದ ರಾಯಚೂರಿನ ಅರುಣ್ ವೇದಿಕೆಯಲ್ಲಿ 'ಪುಷ್ಪ' ಸಿನಿಮಾದ 'ಪುಷ್ಪರಾಜ್; ಅವತಾರವೆತ್ತಿ ಚಿಂದಿ ಉಡಾಯಿಸಿದ್ದಾರೆ. ಬೈಕ್‌ನಲ್ಲಿ ಆಗಮಿಸಿದ ಕುಳ್ಳ ಸಿಂಗಂ 'ಪುಷ್ಪರಾಜ್' ಒಂದೆರಡು ಸ್ಟೆಪ್ ಹಾಕಿ 'ಪುಷ್ಪ'ನನ್ನು ಎದುರು ಹಾಕಿಕೊಂಡರೆ ಫೈಯರೇ ಎಂಬ ಡೈಲಾಗ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಶ್ರೀವಲ್ಲಿ ಹಾಡಿಗೆ ಸಖತ್ ಸ್ಟೆಪ್ಸ್
ಈ ಪ್ರೋಮೊ ನೋಡಿದ ಜನರು ಡ್ರಾಮಾ ನೋಡಲು ಕಾತರದಲ್ಲಿದ್ದಾರೆ. ಇವರೊಂದಿಗೆ ವೇದಿಕೆ ಮೇಲೆ 'ಗರುಡ ಗಮನ ವೃಷಭ ವಾಹನ' ಚಿತ್ರದ ಫೇಮಸ್ ಹುಲಿ ಕುಣಿತವೂ ಇದೆ. ಹುಲಿ ಕುಣಿತದ ಒಂದೆರಡು ಸ್ಟೆಪ್ ಹಾಕುತ್ತಾ ಮಿಂಚಿದ್ದಾರೆ ವೇದಿಕ್ ಕೌಶಲ್ . ವೇದಿಕ್ ಕೌಶಲ್‌ನನ್ನು ನೋಡಿದ ಕುಳ್ಳ ಸಿಂಗಂ 'ಪುಷ್ಪ ರಾಜ್'. "ಲೇಯ್ ಡಾನ್ಸ್ ಅಂದ್ರೆ ನನ್ನ ಹಾಗಿರಬೇಕು" ಎಂದು ಪುಷ್ಪ ಸಿನಿಮಾದ ಹಾಡು ನೋಟ ಬಂಗಾರವಾಯಿತೆ ಅಂತ ಶ್ರೀವಲ್ಲಿ ಹಾಡಿಗೆ ಅರುಣ್ ಸಖತ್ ಸ್ಟೆಪ್ ಹಾಕಿ ತೋರಿಸಿದ್ದಾನೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ರ ಪುಟಾಣಿಗಳ ತರಲೆ ತುಂಟಾಟಕ್ಕೆ ಜಡ್ಜ್ ಮನಸೋತಿದ್ದಾರೆ.

'ಪುಷ್ಪ'ಗೆ ಟಾಂಗ್ ಕೊಟ್ಟ ವೇದಿಕ್
ಅರುಣ್ ಸ್ಟೆಪ್‌ಗೆ ವೇದಿಕ್ ಕೌಶಲ್ ಕೂಡ ಸಖತ್ ಆಗಿ ಟಾಂಗ್ ನೀಡಿರುವುದು ಜನರ ಮೊಗದಲ್ಲಿ ನಗು ತರಿಸಿದೆ. ಪುಪ್ಪ ರಾಜ್ ಸ್ಟೆಪ್‌ಗೆ ಚಪ್ಪಲಿ ಕಿತ್ತು ಹೋಗೋ ಹಾಗೆ ನಡೆಯುವುದು ಒಂದು ಡಾನ್ಸ್, ಇನ್ನು ಹೆಚ್ಚು ಬೇಡ ಕ್ಯಾಮಾರದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತದೆ ಎಂದು ಹೇಳಿದ ಡೈಲಾಗ್‌ಗೆ ಜಡ್ಜ್ ಹೊಟ್ಟೆ ಹುಣ್ಣಾಗುವವರೆಗೆ ನಕ್ಕಿದ್ದಾರೆ. 'ಗರುಡ ಗಮನ ವೃಷಭ ವಾಹನ' ಚಲನಚಿತ್ರ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಮಧ್ಯಾಹ್ನ 3.30ಕ್ಕೆ ಈ ಎಪಿಸೋಡ್ ಪ್ರಸಾರವಾಗಲಿದೆ.

ಅರುಣ್ ,ವೈದಿಕ್ ಇಬ್ಬರ ಅಭಿನಯ ಸೂಪರ್
ಇನ್ನು ಇವರಿಬ್ಬರ ಮಾತುಕತೆ ಕೇಳಿ ರಚಿತಾ ರಾಮ್ ಆಗಾಗ ನಗುವಿನ ಚಟಾಕಿ ಬೀರುತ್ತಿದ್ದರು. ಅರುಣ್ ಹಾಗೆಯೇ ವೈದಿಕ್ ಇಬ್ಬರ ಅಭಿನಯ ಜನರ ಮನಮುಟ್ಟಿದೆ. ರಚಿತಾ ವೇದಿಕೆಗೆ ತೆರಳಿ ಕುಳ್ಳ ಸಿಂಗಂ ಜೊತೆ ಒಂದೆರಡು ಸ್ಟೆಪ್ ಹಾಕಿರುವುದು ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಿದ ಹಾಗೆ ಕಾಣಿಸುತ್ತಿತ್ತು. ಹೀಗೆ 'ಡ್ರಾಮಾ ಜೂನಿಯರ್ಸ್' ಸೀಸನ್ 4 ಆರಂಭದಲ್ಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದು, ಶೋನ ಟಿಆರ್‌ಪಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.


Click it and Unblock the Notifications











