For Quick Alerts
  ALLOW NOTIFICATIONS  
  For Daily Alerts

  ಹಿಂದಿಯ ದೊಡ್ಡ ಕಾರ್ಯಕ್ರಮಕ್ಕೆ ಆಯ್ಕೆ ಆದ 'ಡ್ರಾಮಾ ಜೂನಿಯರ್' ಪ್ರತಿಭೆ ಚಿತ್ರಾಲಿ

  By Naveen
  |
  ಡ್ರಾಮಾ ಜೂನಿಯರ್ ಚಿತ್ರಾಲಿಗೆ ಒಲಿದ ಅದೃಷ್ಟ..!! | Filmibeat Kannada

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜೂನಿಯರ್'. ಈ ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ವಿನ್ನರ್ ಆಗಿದ್ದು ಪುಟ್ಟ ಬಾಲಕಿ ಚಿತ್ರಾಲಿ. ಡ್ರಾಮಾ ಜೂನಿಯರ್ ಆದ ಮೇಲೆ ಚಿತ್ರಾಲಿ ಕೆಲ ಸಿನಿಮಾಗಳನ್ನು ಸಹ ಮಾಡಿದ್ದರು. ಆದರೆ ಈಗ ಈ ಪುಟ್ಟ ಹುಡುಗಿ ಹಿಂದಿಯ ಶೋ ಒಂದರಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

  ಡ್ರಾಮಾದಲ್ಲಿ ವೀಕ್ಷಕರ ಮನಗೆದ್ದ ಕುಡ್ಲದ ಪೋರಿ ಚಿತ್ರಾಲಿ ಬಗ್ಗೆ ಒಂಚೂರು.. ಡ್ರಾಮಾದಲ್ಲಿ ವೀಕ್ಷಕರ ಮನಗೆದ್ದ ಕುಡ್ಲದ ಪೋರಿ ಚಿತ್ರಾಲಿ ಬಗ್ಗೆ ಒಂಚೂರು..

  ಹಿಂದಿಯ ಜೀ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್ ಸೀಸನ್ 3' ನ ಆಡಿಷನ್ ನಲ್ಲಿ ಚಿತ್ರಾಲಿ ಆಯ್ಕೆ ಆಗಿದ್ದಾರೆ. ಮೇ 8 ರಂದು ಈ ಕಾರ್ಯಕ್ರಮ ನಡೆದಿದೆ. ಹಿಂದಿಯಲ್ಲಿ ದೊಡ್ಡ ಜನಪ್ರಿಯತೆ ಹೊಂದಿರುವ ಈ ಕಾರ್ಯಕ್ರಮಕ್ಕೆ ಕನ್ನಡದ ಈ ಕಂದ ಕಾಲಿಟ್ಟಿದ್ದಾರೆ.

  ಅದರಲ್ಲಿಯೂ ಆಡಿಷನ್ ನಲ್ಲಿ ಚಿತ್ರಾಲಿ ನಟನೆ ನೋಡಿ ಕಾರ್ಯಕ್ರಮದ ತೀರ್ಪುಗಾರರಾದ ನಟಿ ಸೋನಾಲಿ ಬೆಂದ್ರೆ, ಅನುರಾಗ್ ಬಸು ಹಾಗೂ ವಿವೇಕ್ ಒಬೆರಾಯ್ ಫಿದಾ ಆಗಿದ್ದಾರೆ. ಈ ಕಾರ್ಯಕ್ರಮ ಸದ್ಯದಲ್ಲಿಯೇ ಪ್ರಸಾರ ಆಗಲಿದೆ.

  ಅಂದಹಾಗೆ, 'ಡ್ರಾಮಾ ಜೂನಿಯರ್' ನಂತರ ಸುದೀಪ್ ನಿರ್ಮಾಣದ 'ವಾರಸ್ಧಾರ' ಧಾರಾವಾಹಿಯ ಲೀಡ್ ರೋಲ್ ನಲ್ಲಿ ಚಿತ್ರಾಲಿ ಕಾಣಿಸಿಕೊಂಡರು. ಇದರ ಜೊತೆಗೆ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಭೀಮಸೇನಾ ನಳಮಹರಾಜ' ಸಿನಿಮಾದಲ್ಲಿ ಚಿತ್ರಾಲಿ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ, ಇದೇ ಸಿನಿಮಾದಲ್ಲಿ ಬೇಬಿ ಡಾಲ್ ಆದ್ಯಾ ಕೂಡ ಒಂದು ಪಾತ್ರವನ್ನು ಮಾಡಿದ್ದಾರೆ.

  English summary
  Zee Kannada channel's popular show 'Drama Juniors' winner Chitrali selected in 'India Best Dramebaaz' show audition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X