ಪಾತ್ರಕ್ಕಾಗಿ ಸೋಶಿಯಲ್ ಮೀಡಿಯಾ ಖಾತೆಯನ್ನೇ ಡಿಲೀಟ್ ಮಾಡಿದ್ದೇಕೆ 'ದೃಷ್ಟಿಬೊಟ್ಟು' ನಾಯಕಿ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಹೊಸ ಧಾರಾವಾಹಿಯೊಂದು ಪ್ರಾರಂಭವಾಗುತ್ತಿದೆ. ಇದರ ಬಗ್ಗೆ ಈಗಾಗಲೇ ವೀಕ್ಷಕರಿಗೆ ಪರಿಚಯವೂ ಇದೆ.
ಸದ್ಯ ಮೂರು ಪ್ರೊಮೋಗಳು ರಿಲೀಸ್ ಆಗಿದ್ದು, ಒಂದು ನಾಯಕಿ ಎರಡನೇಯದು ನಾಯಕ ಹಾಗೂ ಮೂರನೇ ವೀಡಿಯೋ ಎರಡೂ ಕುಟುಂಬದ ಬಗ್ಗೆ ಮಾಹಿತಿಯನ್ನು ನೀಡಿದೆ.
ಧಾರಾವಾಹಿಯ ಕಥೆಯ ಎಳೆಯನ್ನು ತಿಳಿಸಿಕೊಡಲಾಗಿದೆ. ಹೆಣ್ಣು ಮಕ್ಕಳಿಗೆ ಬಡತನ ಎಂತಹ ಕ್ರೂರವಾಗಿರುವಂತಹದ್ದು ಎಂದು ನಾಯಕಿ ಬಗ್ಗೆ ಹೇಳಿದ್ದರೆ, ಇತ್ತ ನಾಯಕನಿಗೆ ಎಲ್ಲಾ ಇದ್ದರೂ ಪ್ರೀತಿಯ ಕೊರತೆ ಬಗ್ಗೆ ತಿಳಿಸಿಕೊಟ್ಟಿದೆ.

ಬಾಡಿ ಶೇಮಿಂಗ್ ಕುರಿತ ಕಥೆ
ಬಾಡಿ ಶೇಮಿಂಗ್ ಕುರಿತು ಈ ಧಾರಾವಾಹಿ ಇದ್ದು, ಕೃಷ್ಣ ಸುಂದರಿಯಾಗಿರುವ ನಟಿ ಹಾಗೂ ಹಾಲಿನಂತಹ ಮನಸ್ಸಿನ ದತ್ತಭಾಯ್ ಹೇಗೆ ಒಂದಾಗುತ್ತಾರೆ ಎಂಬುದೇ ಕಥೆಯ ಎಳೆ. ಧಾರಾವಾಹಿಯು ಡಿಫರೆಂಟ್ ಆಗಿದ್ದು, ಪ್ರೋಮೋ ಮೂಲಕವೇ ಜನರನ್ನು ಸೆಳೆಯುತ್ತಿದೆ. ಈ ಧಾರಾವಾಹಿಯನ್ನು ನಟ ರಕ್ಷ್ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಶ್ರವಂತ್ ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯ ಪ್ರೋಮೋಗಳಂತೂ ಅದ್ಭುತವಾಗಿ ಮೂಡಿ ಬಂದಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 9 ರಿಂದ ಸಂಜೆ 6:30ಕ್ಕೆ ದೃಷ್ಟಿಬೊಟ್ಟು ಧಾರಾವಾಹಿ ಶುರುವಾಗಲಿದೆ.
ನಟಿ ಅಂಬಿಕಾ ಧಾರಾವಾಹಿಯಲ್ಲಿ ನಟನೆ
ನಾಯಕನಾಗಿ ವಿಜಯ್ ಸೂರ್ಯ ಮಿಂಚುತ್ತಿದ್ದು, ಅಭಿಮಾನಿಗಳು ಮತ್ತೆ ತಮ್ಮ ನೆಚ್ಚಿನ ನಟನ ಅದ್ಧೂರಿ ಎಂಟ್ರಿಗೆ ಫಿದಾ ಆಗಿದ್ದಾರೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಅಂಬಿಕಾ, ದೀಪಶ್ರೀ ಹರೀಶ್, ರಾಘು ಶಿವಮೊಗ್ಗ, ಅಶೋಕ್ ಹೆಗಡೆ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಜೆಂಟ್ಸ್ ಸಂಸ್ಥೆ ಅಡಿ ದೃಷ್ಟಿಬೊಟ್ಟು ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನಟ ರಕ್ಷ್ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಶ್ರವಂತ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಖಾತೆ ಡಿಲೀಟ್
ಇನ್ನು ಇಷ್ಟು ದಿನ ಧಾರಾವಾಹಿಯ ನಾಯಕಿ ನಟಿ ಬಗ್ಗೆ ಯಾರಿಗೂ ಮಾಹಿತಿಯೇ ದೊರಕಿರಲಿಲ್ಲ. ಯಾಕೆಂದರೆ ನಾಯಕಿಯಾಗಿ ನಟಿಸುತ್ತಿರುವ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಇದಕ್ಕೆ ಕಾರಣ ತಮ್ಮನ್ನು ಜನರು ಪಾತ್ರದ ಮೂಲಕವೇ ಗುರುತಿಸಬೇಕು ಎಂಬ ಆಲೋಚನೆಯಿಂದ. ಹೌದು, ನಾಯಕಿ ನಟಿಯಾಗಿ ಅರ್ಪಿತಾ ಮೋಹಿತೆ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂಲತಃ ಕನಕಪುರದ ಅರ್ಪಿತಾ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಬಿಕಾಂ ವ್ಯಾಸಂಗ ಮಾಡಿದ್ದಾರೆ. ಸದ್ಯ ದೃಷ್ಟಿಬೊಟ್ಟು ಧಾರಾವಾಹಿಗೆ ಆಯ್ಕೆ ಆಗಿದ್ದಾರೆ.
ಎರಡು ಗಂಟೆ ಮೇಕಪ್ ಮಾಡಬೇಕು
ಈ ಧಾರಾವಾಹಿಯಲ್ಲಿ ನಟಿ ಅರ್ಪಿತಾ ಅವರು ನಟಿಸಲು ಸಾಕಷ್ಟು ಸಾಹಸವನ್ನು ಮಾಡಿದ್ದಾರೆ. ಕಾರಣ ನಟನೆಯೊಂದೆ ಇವರ ಮುಂದಿರುವ ಸವಾಲ್ ಅಲ್ಲ. ಜೊತೆಗೆ ಇವರ ಮೇಕಪ್ ಬಗ್ಗೆಯೂ ಅತೀ ಹೆಚ್ಚು ಕಾಳಜಿ ವಹಿಸಲಾಗಿದೆ. ಕಪ್ಪು ವರ್ಣದ ನಾಯಕಿಯನ್ನು ಕ್ಯಾಮರಾ ಮುಂದೆ ಕಳಿಸುವ ಮುನ್ನ ಕನ್ನಡಿ ಎದುರು ಬರೋಬ್ಬರಿ ಎರಡು ಗಂಟೆಗಳ ಕಾಲ ಕೂರಿಸಬೇಕಂತೆ. ಹೌದು, ನಟಿ ಅರ್ಪಿತಾ ಅವರ ಮುಖದ ಜೊತೆಗೆ ಕೈಗಳು, ಕಾಲು ಎಲ್ಲವನ್ನೂ ಕಪ್ಪು ವರ್ಣಕ್ಕೆ ತಿರುಗುವಂತೆ ಮೇಕಪ್ ಮಾಡಬೇಕಂತೆ. ಇದಕ್ಕೆ ಸಾಕಷ್ಟು ಸಮಯ ತಗುಲುತ್ತಿದೆಯಂತೆ. ಈ ಬಗ್ಗೆ ಸ್ವತಃ ಧಾರಾವಾಹಿಯ ನಾಯಕಿ ಅರ್ಪಿತಾ ಅವರೇ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಒಟ್ನಲ್ಲಿ 'ದೃಷ್ಟಿಬೊಟ್ಟು' ಧಾರಾವಾಹಿ ತೆರೆ ಮೇಲೆ ಬರಲು ಸಜ್ಜಾಗಿದ್ದು, ವೀಕ್ಷಕರು ಕೂಡ ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











