For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲೂ ದಾಖಲೆ ಬರೆದ 'ದೃಶ್ಯಂ 2': ದಾಖಲೆ ಟಿಆರ್‌ಪಿ

  |

  ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಿದ್ದ ಮೋಹನ್‌ಲಾಲ್ ನಟನೆಯ 'ದೃಶ್ಯಂ 2' ಕೆಲವು ದಿನಗಳ ಹಿಂದಷ್ಟೆ ಟಿವಿಯಲ್ಲಿ ಪ್ರಸಾರವಾಗಿ ಅಲ್ಲಿಯೂ ದಾಖಲೆ ಬರೆದಿದೆ.

  ಮೇ 21 ರಂದು ಮೋಹನ್‌ಲಾಲ್ ಹುಟ್ಟುಹಬ್ಬದ ದಿನಂದು ಏಷಿಯನ್‌ನೆಟ್ ಮಲಯಾಳಂ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗಿದ್ದ 'ದೃಶ್ಯಂ 2' ಸಿನಿಮಾವನ್ನು ಅತಿಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈವರೆಗೆ ಮಲಯಾಳಂ ಟಿವಿ ಇತಿಹಾಸದಲ್ಲಿ ಯಾವ ಕಾರ್ಯಕ್ರಮ ಅಥವಾ ಸಿನಿಮಾ ಪಡೆಯದಷ್ಟು ಟಿಆರ್‌ಪಿ ರೇಟಿಂಗ್ ಅನ್ನು 'ದೃಶ್ಯಂ 2' ಸಿನಿಮಾ ಪಡೆದುಕೊಂಡಿದೆ.

  ಈ ಮುಂಚೆ ಮಲಯಾಳಂನ 'ಪದತ ಪಣಿಕಿಲಿ' ಎನ್ನುವ ಟಿವಿ ಶೋ ಟಿಆರ್‌ಪಿ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗದು ಎರಡನೇ ಸ್ಥಾನಕ್ಕೆ ಕುಸಿದಿದೆ. 'ದೃಶ್ಯಂ 2' ಸಿನಿಮಾ 6589 ಟಿಆರ್‌ಪಿ ರೇಟಿಂಗ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ 'ಪದತ ಪಣಿಕಿಲಿ' ಶೋಗೆ 4794 ಪಾಯಿಂಟ್ಸ್ ದೊರೆತಿದೆ.

  ಫೆಬ್ರವರಿಯಲ್ಲಿ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ 2' ಸಿನಿಮಾ ಸಹ ದಾಖಲೆ ಬರೆದಿತ್ತು. ವಿಶ್ವದಾದ್ಯಂತ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಭಾರತೀಯ ಪ್ರಾದೇಶಿಕ ಭಾಷಾ ಸಿನಿಮಾ ಎಂಬ ದಾಖಲೆ 'ದೃಶ್ಯಂ 2' ಪಾಲಾಗಿತ್ತು.

  2013 ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾ ಸಹ ಬಿಡುಗಡೆ ಆದಾಗ ಭಾರಿ ಗಳಿಕೆ ಕಂಡಿತ್ತು. ಅದು ಮಾತ್ರವಲ್ಲದೆ ಅತಿ ಹೆಚ್ಚು ಭಾಷೆಗಳಿಗೆ ರೀಮೇಕ್ ಆದ ಭಾರತೀಯ ಸಿನಿಮಾ ಎಂಬ ಖ್ಯಾತಿಯನ್ನೂ ಮುಡಿಗೇರಿಸಿಕೊಂಡಿತ್ತು. ಅದೇ ಸಿನಿಮಾದ ಮುಂದುವರೆದ ಭಾಗ 'ದೃಶ್ಯಂ 2'.

  'ದೃಶ್ಯಂ 2' ಸಿನಿಮಾವನ್ನು ಕನ್ನಡದಲ್ಲಿ ರವಿಚಂದ್ರನ್ ರೀಮೇಕ್ ಮಾಡಲಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್, ಹಿಂದಿಯಲ್ಲಿ ಅಜಯ್ ದೇವಗನ್ ಸಹ ರೀಮೇಕ್ ಮಾಡಲಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮಲಯಾಳಂನ ಮೂಲ ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ತೆಲುಗಿನಲ್ಲಿಯೂ ನಿರ್ದೇಶನ ಮಾಡುತ್ತಿದ್ದಾರೆ.

  English summary
  Mohanlal starer 'Drishyam 2' movie telecast on on TV recently and it grabs record TRP rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X