Bigg Boss: ಡ್ರೋನ್ ಪ್ರತಾಪ್‌ಗೆ ಈ ಸೀಸನ್‌ನ ಕೊನೆಯ ಕಳಪೆ ಪಟ್ಟ; ಸಂಗೀತಾ ಕಣ್ಣೀರು ಹಾಕಿದ್ದೇಕೆ?
ಬಿಗ್ ಬಾಸ್ ಸೀಸನ್ 10 ಇನ್ನೊಂದು ವಾರವಷ್ಟೇ. ದೊಡ್ಮನೆಯ ಜರ್ನಿ ಎಲ್ಲರಿಗೂ ಮುಗಿದು ಬಿಡುತ್ತದೆ. ಕಳಪೆ-ಉತ್ತಮ, ಕ್ಯಾಪ್ಟನ್ಸಿ ಟಾಸ್ಕ್‌ಗಳು ಮುಕ್ತಾಯವಾಗಿದೆ. ಈ ವಾರದ ಕಡೆಯ ಕಳಪೆ ಪಟ್ಟವನ್ನು ಪ್ರತಾಪ್ ಹೊತ್ತುಕೊಂಡಿದ್ದಾರೆ. ಕಳಪೆ ಪಟ್ಟ ತೆಗೆದುಕೊಂಡ ಪ್ರತಾಪ್ ಬೇಸರದಿಂದಾನೇ ಜೈಲು ಸೇರಿದ್ದಾರೆ.
ಬಿಗ್ ಬಾಸ್ ಇದು ಹತ್ತನೇ ಸೀಸನ್ ಕೊನೆಯ ಹಂತ ತಲುಪಿದೆ. ಆದರೆ ಇಷ್ಟು ಸೀಸನ್‌ಗಳಲ್ಲಿ ನಡೆಯದ ಅದ್ಭುತಗಳು ಈ ಸೀಸನ್‌ನಲ್ಲಿ ಕಾಣಿಸುತ್ತಿವೆ. ಬಿಗ್ ಬಾಸ್ ಮುಗಿಯುತ್ತಾ ಬಂದರೂ ಮನೆಯಲ್ಲಿ ಇರುವ ಯಾರ ಕಣ್ಣಲ್ಲೂ ಆ ಬೇಸರ ಕಾಣಿಸುತ್ತಿಲ್ಲ. ಎಲ್ಲರ ಗುರಿ ಟ್ರೋಫಿ ಕಡೆಯಷ್ಟೇ ನೆಟ್ಟಿದೆ.

ಕಡೆಯ ಕಳಪೆ ಪಟ್ಟ ಪ್ರತಾಪ್
ಬಿಗ್ ಬಾಸ್ ಮನೆಗೆ ಬಂದ ಮೊದಲ ವಾರ ಕಳಪೆ ಕೊಡುವುದು, ಕಡೆಯ ವಾರ ಕಳಪೆ ಕೊಡುವುದು ಎರಡು ಬಹಳ ಕಷ್ಟ. ಆದರೆ, ಈ ಸೀಸನ್‌ನಲ್ಲಿರುವ ಸ್ಪರ್ಧಿಗಳಿಗೆ ಪ್ರತಿ ವಾರ ಕಳಪೆ ಕೊಡುವುದೇ ಕಷ್ಟವಾಗಿದೆ. ಸಾಕಷ್ಟು ಬಾರಿ ಕಳಪೆ ಪಟ್ಟಕ್ಕೆ ಹಾಗೂ ಉತ್ತಮ ಪಟ್ಟಕ್ಕೆ ರಾಂಗ್ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದಾರೆ. ಈಗ ಕಡೆಯ ಕಳಪೆಯಾಗಿ ಪ್ರತಾಪ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಾಪ್ ಯೂನಿಫಾರ್ಮ್ ತೊಟ್ಟು ಜೈಲು ಸೇರಿದ್ದಾರೆ.
ಪ್ರತಾಪ್‌ಗೆ ಕಳಪೆ ಕೊಟ್ಟವರು ಯಾರು?
ಈ ವಾರದ ಹಾಗೂ ಕಡೆಯ ಕಳಪೆಯನ್ನು ಪ್ರತಾಪ್‌ಗೆ ನೀಡಲಾಗಿದೆ. ವಿನಯ್, ತುಕಾಲಿ ಸಂತೋಷ್, ಕಾರ್ತಿಕ್ ಈ ಮೂವರು ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. "ಇಡೀ ಸೀಸನ್ ತೆಗೆದುಕೊಂಡರೆ ಅಷ್ಟಾಗಿ ಏನು ಪರ್ಫಾಮೆನ್ಸ್ ತೋರಿಸಿಲ್ಲ" ಎಂದು ವಿನಯ್ ಹೇಳಿದರೆ, "ಜೀರೋ ಪರ್ಫಾಮೆನ್ಸ್" ಎಂದು ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಾಪ್ ಜೈಲು ಸೇರಿದ್ದಕ್ಕೆ ಸಂಗೀತಾ ಬೇಸರ
ಸಂಗೀತಾ ಸರದಿ ಬಂದಾಗ ಯಾರಿಗೂ ಕಳಪೆಯನ್ನು ಕೊಡುವುದಕ್ಕೆ ಮುಂದಾಗಲಿಲ್ಲ. ನನ್ನ ಪ್ರಕಾರ, ಯಾರೂ ಕೂಡ ಕಳಪೆಯಿಲ್ಲ ಎಂದರು. ಆದರೆ, ಇನ್ನುಳಿದವರು ಕಳಪೆಯನ್ನು ಪ್ರತಾಪ್‌ಗೆ ಕೊಟ್ಟಾಗ ಸಂಗೀತಾ ಕಣ್ಣಲ್ಲಿ ಬೇಸರದಿಂದ ನೀರು ಬಂದಿತ್ತು. ಈ ವಾರ ಯಾರೂ ಕ್ಯಾಪ್ಟನ್ ಇಲ್ಲದ ಕಾರಣ ಸಂಗೀತಾ ಅವರೇ ಜೈಲಿನ ಡ್ರೆಸ್ ಕೊಟ್ಟು ಕಳುಹಿಸಿದರು. ಆಗಲೂ ಕಣ್ಣೀರು ಬಂದಿತ್ತು. ಬಾತ್ ರೂಮಿನ ಬಳಿ ಕುಳಿತು ಸಂಗೀತಾ ಕಣ್ಣೀರು ಹಾಕಿದರು. ನನ್ನ ಜೊತೆಗೆ ಇದ್ದವರನ್ನು ಹೀಗೆ ಜೈಲಿಗೆ ಕಳುಹಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಾಪ್‌ಗೆ ಕಳಪೆ ಪಟ್ಟ ಎಷ್ಟು ಸರಿ?
ಕಳಪೆ ಪಟ್ಟವನ್ನು ನೀಡುವುದು ಆ ವಾರದ ಪರ್ಫಾಮೆನ್ಸ್ ಆಧಾರದ ಮೇಲೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಈ ವಾರವೆಲ್ಲಾ ಹೇಳಿಕೊಳ್ಳುವಂತ ಟಾಸ್ಕ್ ಇರಲಿಲ್ಲ. ಜೊತೆಗೆ ಫಿನಾಲೆ ರೌಂಡ್‌ನಲ್ಲಿ ಹೆಚ್ಚು ಅಂಕ ಪಡೆದವರು ಪ್ರತಾಪ್ ಆಗಿದ್ದಾರೆ. ಈ ವಾರ ಮನೆಯ ವಾತಾವರಣಕ್ಕೆ ತಕ್ಕದಾಗಿ ಪ್ರತಾಪ್ ನಡೆದುಕೊಂಡಿದ್ದಾರೆ. ಆದರೆ, ಏನು ಮೈನಸ್ ಪಾಯಿಂಟ್ ಇಲ್ಲದೆ ಕಳಪೆ ಕೊಟ್ಟಿದ್ದು ಪ್ರತಾಪ್‌ಗೆ ಕೂಡ ನೋವಾಗಿದೆ. ಸಪೋರ್ಟ್ ಮಾಡಿದ ಸಂಗೀತಾ ದೀದಿಗೆ ಥ್ಯಾಂಕ್ಸ್ ಹೇಳಿ ಜೈಲಿಗೆ ಹೋಗಿದ್ದಾರೆ. ಆದರೆ, ಪ್ರತಾಪ್‌ಗೆ ಕಳಪೆ ಕೊಟ್ಟಿದ್ದು ಎಷ್ಟು ಸರಿ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.


Click it and Unblock the Notifications











