ನಮ್ಮ ಮಗ ಮತ್ತೆ ನಮಗೆ ಸಿಕ್ಕಿದ್ದು ನಿಮ್ಮಿಂದ ; ಗ್ರ್ಯಾಂಡ್ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ತಂದೆ,ತಾಯಿ ಭಾವೋದ್ವೇಗ

ಡ್ರೋನ್ ಪ್ರತಾಪ್ ಮೇಲಿದ್ದ ಅಭಿಪ್ರಾಯಗಳನ್ನ ಬದಲಿಸಿದ ಹೆಗ್ಗಳಿಕೆ ಬಿಗ್ ಬಾಸ್‌ದ್ದು. ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಮೊದಲು ಎಲ್ಲರ ಕಣ್ಣೀಗೆ ನಂಬಿಕೆ ದ್ರೋಹಿಯಂತೆ ಕಂಡಿದ್ದ ಪ್ರತಾಪ್, ಈಗ ಕೆಲವರ ಪಾಲಿಗೆ ಬುದ್ದಿವಂತ ನಂತೆ ಇನ್ನೂ ಹಲವರ ಪಾಲಿಗೆ ಮುಗ್ದನಂತೆ ಭಾಸವಾಗುತ್ತಿದ್ದಾರೆ.

ಇನ್ನೂ ಇಂದು ರಾತ್ರಿಯ ಫಲಿತಾಂಶ ಏನೇ ಆಗಿರಲಿ, ಪ್ರತಾಪ್ ಜನರ ಹೃದಯವನ್ನ ಗೆದ್ದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ತಂದೆ -ತಾಯಿಯ ಮನಸನ್ನ ಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನ್ನ ಆಟದ ಮೂಲಕ ಅವರ ಹೆಮ್ಮೆಯನ್ನೂ ಹೆಚ್ಚಿಸಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಪ್ರತಾಪ್ ತಂದೆ ಹಾಗೂ ತಾಯಿ ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್ ವೇದಿಕೆಯಿಂದ ನಮ್ಮ ಮಗ ನಮಗೆ ವಾಪಸ್ ಸಿಕ್ಕಿದ್ದಾನೆ. ಬದುಕಿರೋವರೆಗೂ ನಾವು ನಿಮಗೆ ಚಿರಋಣಿ ಎಂದಿದ್ದಾರೆ.

Drone prathap parents got emotional on Bigg Boss 10 Grand Finale stage

ಡ್ರೋನ್ ಪ್ರತಾಪ್ ತಂದೆ - ತಾಯಿ ಹೇಳಿದ್ದೇನು?

''ಯಾವ ಕನ್ನಡಿ ಪ್ರತಾಪ್ ಅವರನ್ನ ಬೈಯ್ಯುತ್ತಾ ಇತ್ತೋ, ಈಗ ಅದೇ ಕನ್ನಡಿ ಹೊಗಳುತ್ತಿದೆ. ಈ ಚೇಂಜ್‌ ಓವರ್‌ ಬಗ್ಗೆ ಹೇಗನಿಸುತ್ತದೆ?'' ಎಂದು ಕಿಚ್ಚ ಸುದೀಪ್‌ ಕೇಳಿದಾಗ, ''ಜನರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲಲ್ಲ. ನಾವು ಎಲ್ಲೇ ಹೋದರೂ, ಪ್ರತಾಪ್ ತಂದೆನಾ ಅಂತ ಗೌರವಿಸುತ್ತಾರೆ. ಅದು ಸಿಕ್ಕಿದ್ದು ಈ ವೇದಿಕೆಯಿಂದ. ಈ ವೇದಿಕೆ ನನ್ನ ಮಗನನ್ನ ಮನುಷ್ಯನನ್ನಾಗಿ ಮಾಡಿತು. ಈ ವೇದಿಕೆ ಸಿಕ್ಕಿಲ್ಲ ಅಂದಿದ್ದರೆ ಆ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಈ ವೇದಿಕೆ ಹಾಗೂ ಕರ್ನಾಟಕದ ಜನತೆಗೆ ನನ್ನ ನಮನ'' ಎಂದು ಡ್ರೋನ್ ಪ್ರತಾಪ್ ತಂದೆ ಹೇಳಿದರೆ, ಇಡೀ ಕರ್ನಾಟಕದ ಜನತೆಗೆ, ಈ 'ಬಿಗ್ ಬಾಸ್‌' ವೇದಿಕೆಗೆ ನಾವು ಬದುಕಿರೋವರೆಗೂ ಚಿರಋಣಿಯಾಗಿಯೇ ಬದುಕುತ್ತೇವೆ. ನಿಮ್ಮನ್ನ ನಾವು ಯಾವತ್ತೂ ಮರೆಯೋದಿಲ್ಲ ಸರ್. ನಮ್ಮ ಮಗನನ್ನ ನಮಗೆ ವಾಪಸ್‌ ಕೊಟ್ಟಿದ್ದೀರಾ'' ಎಂದು ಡ್ರೋನ್ ಪ್ರತಾಪ್ ತಾಯಿ ಹೇಳಿದರು.

ಡ್ರೋನ್ ಪ್ರತಾಪ್ ಮನೆಯಲ್ಲಿ ಸುದೀಪ್ ಫೋಟೋ !

ಇನ್ನೂ ಇದೇ ವೇಳೆ ನಾನು ನಿಮ್ಮ ದೊಡ್ಡ ಫ್ಯಾನ್. ನಿಮ್ಮ ಫೋಟೋವನ್ನ ನಾನು ಮನೆಯಲ್ಲಿ ಇಟ್ಟುಕೊಂಡಿದ್ದೇನೆ ಸರ್. ನಾನು ನಿಮ್ಮನ್ನ ಮನೆಯ ದೇವರು ತರಹ ನೋಡ್ತೀನಿ. ನನ್ನ ಮಗನಿಗೆ ನ್ಯಾಯ ಕೊಡಿಸಿದ್ರಿ'' ಎಂದು ಕಿಚ್ಚ ಸುದೀಪ್‌ ಬಗ್ಗೆ ಡ್ರೋನ್ ಪ್ರತಾಪ್‌ ತಾಯಿ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದರು.

More from Filmibeat

English summary
During Bigg Boss season 10 grand finale parents of drone prathap got emotional and thanked bigg boss and kichcha sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X