Gicchi Giligili: ಡ್ರೋನ್ ಅಲ್ಲ ಇನ್ಮುಂದೆ ಓನ್ಲಿ ಪ್ರತು; ಹುಡುಗೀರ ಮನಸ್ಸು ಕದ್ದ ಪ್ರತಾಪ್..!
ಬಿಗ್ ಬಾಸ್ ಸೀಸನ್- 10 ಮುಗಿದರು ಡ್ರೋನ್ ಪ್ರತಾಪ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಗಿಚ್ಚಿಗಿಲಿಗಿಲಿ ಸೀಸನ್- 3ರಲ್ಲೂ ಡ್ರೋನ್ ಪ್ರತಾಪ್ ಮಿಂಚುತ್ತಿದ್ದಾರೆ. ಯಾವಾಗಲೂ ಸೈಲೆಂಟ್ ಇರುವಂತಹ ಪ್ರತಾಪ್‌ನಿಂದ ಕಾಮಿಡಿ ಮಾಡಿಸುವ ಸಾಹಸಕ್ಕೆ ಕೈ ಹಾಕಿದೆ ಕಲರ್ಸ್ ಕನ್ನಡ.
ಈಗಾಗಲೇ ಡ್ರೋನ್ ಪ್ರತಾಪ್ ಇರುವಂತ ಪ್ರೋಮೋಗಳನ್ನ ಬಿಟ್ಟು ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಪ್ರತಾಪ್ ಆಕ್ಟಿಂಗ್, ನಗಿಸುವುದಕ್ಕೆ ಪಡುತ್ತಿರುವ ಪ್ರಯತ್ನ ಎಲ್ಲವೂ ನೋಡುಗರಿಗೆ ಒಳ್ಳೆ ಮನರಂಜನೆ ನೀಡುತ್ತಿದೆ. ಈಗ ಪ್ರತಾಪ್ ಕಡೆಯಿಂದ ಒಂದು ಪದ ಹೇಳಿಸುವುದಕ್ಕೆ ಮೆಂಟರ್ ಸರ್ಕಸ್ ಮಾಡಿದ್ದಾರೆ.

ಚಂದ್ರಪ್ರಭಾ-ಸಂಜನಾ ಹರಸಾಹಸ
ಕಲರ್ಸ್ ಕನ್ನಡದ ನಕ್ಕು ನಲಿಸುವ ಶೋ ಎಂದರೆ ಅದು ಗಿಚ್ಚಿ ಗಿಲಿಗಿಲಿ. ಈಗ ಸೀಸನ್ -3 ಆರಂಭವಾಗಿದೆ. ಹಳೇ ಸ್ಪರ್ಧಿಗಳು ಬೆರಳೆಣಿಕೆಯಷ್ಟಿದ್ದರೆ, ಹೊಸಬರು ಕೂಡ ಜೊತೆಯಾಗಿದ್ದಾರೆ. ನಕ್ಕು ನಗಿಸುವ ಶೋ ಆದರೂ ಅಲ್ಲು ಒಂದಷ್ಟು ಮೆಸೇಜ್ ಇರಲಿದೆ. ಹೀಗಾಗಿ ವಿಭಿನ್ನ, ವೈಶಿಷ್ಟ್ಯದ ಸ್ಕಿಟ್‌ಗಳನ್ನು ಈ ಶೋನಲ್ಲಿ ಮಾಡಿಸುತ್ತಾ ಇರುತ್ತಾರೆ. ಇವತ್ತು ಚಂದ್ರಪ್ರಭಾ ಹಾಗೂ ಸಂಜನಾ ಸ್ಕಿಟ್ ಶುರುವಾಗಿದೆ. ಆದರೆ ಇಬ್ಬರು ಡೈಲಾಗ್ ಏನು ಹೇಳಬೇಕು ಎಂಬುದು ತೋಚದೇ ನಿಂತಿದ್ದಾರೆ.
ಆತ್ಮಕರೆಸುವ ಆಟದಲ್ಲಿ ಫೇಲ್
ಡ್ರೋನ್ ಪ್ರತಾಪ್‌ನಿಂದ ಕಾಮಿಡಿ ಮಾಡಿಸಿಯೇ ಮಾಡಿಸುತ್ತೀನಿ ಎಂಬ ಭರವಸೆಯಿಂದ ಗಿಚ್ಚಿ ಗಿಲಿಗಿಲಿ ಶೋಗೆ ಸೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಪ್ರತಾಪ್ ಕಾಮಿಡಿ ಮಾಡಿ ತೋರಿಸಿದ್ದಾರೆ. ಈಗ ಗಿಚ್ಚಿಗಿಲಿ ಗಿಲಿಯಲ್ಲೂ ತನ್ನೊಳಗೂ ಒಬ್ಬ ಹಾಸ್ಯನಟ ಇದ್ದಾನೆ ಎಂಬುದನ್ನು ಪ್ರತಾಪ್ ಈಗ ಪ್ರೂವ್ ಮಾಡಿಕೊಂಡಿದ್ದಾರೆ. ಈಗ ಇರುವ ಚಾಲೆಂಜ್ ಆತ್ಮವನ್ನು ಮತ್ತೊಂದು ದೇಹದ ಮೇಲೆ ಕರೆಸಬೇಕಿದೆ.

ತೀರ್ಪುಗಾರರು ನಕ್ಕು ನಕ್ಕು ಸುಸ್ತು
ಪ್ರತಾಪ್ ಮುಂದೆ ವ್ಯಕ್ತಿಯೊಬ್ಬ ಬಿದ್ದಿದ್ದಾನೆ. ಅವನ ಮೇಲೆ ಆತ್ಮ ಕರೆಸುವುದಕ್ಕೆ ಪ್ರತಾಪ್ ಜೊತೆಗೆ ಇನ್ನೊಬ್ಬ ಮಂತ್ರವಾದಿಯೂ ನಿಂತಿದ್ದಾನೆ. ಆವಾಹಯಾಮಿ ಡೈಲಾಗ್ ಹೇಳಬೇಕಿತ್ತು. ಆದರೆ ಆ ಡೈಲಾಗ್ ಹೇಳಲು ತಿಣುಕಾಡಿದ ಪ್ರತಾಪ್‌ಗೆ ನೆಟ್ಟಿಗರು ಕೂಡ ಕಮೆಂಟ್ ಬಾಕ್ಸ್‌ನಲ್ಲಿ ಹೇಳಿಕೊಟ್ಟಿದ್ದಾರೆ. ಅದು ಆವಾಹಯಾಮಿ.. ಹಾವಾಹಯಾಮಿ ಅಲ್ಲ ಎಂದಿದ್ದಾರೆ. ಇನ್ನು ಪ್ರತಾಪ್ ತಿಣುಕಾಟಕ್ಕೆ ಜಡ್ಜಸ್ ಸುಸ್ತಾಗಿ ಹೋಗಿದ್ದಾರೆ. ಸಾಧುಕೋಕಿಲಾ ಅಂತೂ ಕುರ್ಚಿ ಬಿಟ್ಟು ಎದ್ದು ಎದ್ದು ನಕ್ಕಿದ್ದಾರೆ.
ಡ್ರೋನ್ ಅಲ್ಲ ಈಗ ಓನ್ಲಿ ಪ್ರತು
ಪ್ರತಾಪ್ ಈಗ ಮಾಮೂಲಿ ಡ್ರೋನ್ ಪ್ರತಾಪ್ ಆಗಿ ಉಳಿದುಕೊಂಡಿಲ್ಲ. ಬದಲಿಗೆ ಪ್ರೀತಿಯ ಪ್ರತು ಆಗಿದ್ದಾರೆ. ಹೊರಗಡೆ ಕೆಲ ವಿಚಾರಗಳಿಂದ ಟೀಕೆಗೆ ಗುರಿಯಾಗಿದ್ದ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮೇಲಿನ ಭಾವನೆ ಬದಲಾಗಿಸಿಕೊಳ್ಳಲು ಪ್ರಯತ್ನಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಪ್ರೀತಿಯಿಂದ ಪ್ರತು ಎಂದು ಕರೆಯುತ್ತಿದ್ದರು. ಈಗ ನೆಟ್ಟಿಗರಿಗೂ ಡ್ರೋಣ್ ಪ್ರೀತಿಯ ಪ್ರತು ಆಗಿದ್ದಾರೆ. ಪ್ರತು ಕಾಮಿಡಿಗೆ ಮಹಿಳಾ ಮಣಿಗಳು ಫಿದಾ ಆಗಿದ್ದಾರೆ. ಗಿಚ್ಚಿಗಿಲಿ ಗಿಲಿಯಲ್ಲೂ ಪ್ರತಾಪ್ ಗೆಲ್ಲಬೇಕು ಎಂದೇ ಹಾರೈಸುತ್ತಿದ್ದಾರೆ. ಕೆಲವರು ಪ್ರತಾಪ್ ಬದಲಾವಣೆಯನ್ನು ಸ್ವಾಗತ ಮಾಡಿದ್ದಾರೆ, ಹಾರೈಸುತ್ತಿದ್ದಾರೆ.


Click it and Unblock the Notifications











