Anoop: ದತ್ತಬಾಯ್ ಮನೆಯಲ್ಲಿ 500 ಕದ್ದ ರಾಜಾ; ಲಕ್ಷ ಲಕ್ಷ ರೂಪಾಯಿ ಥಾರ್ ಖರೀದಿ!
ಕಲರ್ಸ್ ಕನ್ನಡದಲ್ಲಿ 'ದೃಷ್ಟಿಬೊಟ್ಟು' ಧಾರಾವಾಹಿ ಹಲವರ ಮನಸ್ಸನ್ನು ಗೆದ್ದಿದೆ. ವಿಜಯ್ ಸೂರ್ಯ ಕಮ್ ಬ್ಯಾಕ್ ಮಾಡಿದಂತ, ಹೊಸ ಪ್ರತಿಭೆ ಅಮೃತಾ ಅವರ ಪರಿಚಯವಾದಂತ ಸೀರಿಯಲ್. ವಿಜಯ್ ಸೂರ್ಯ ಅವರು ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಧಾರಾವಾಹಿ. ವಿಜಯ್ ಸೂರ್ಯ ಅವರು ಇಷ್ಟು ವರ್ಷ ಕಂಡ ಲುಕ್ ಬಿಟ್ಟು ಬೇರೆಯದ್ದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದೃಷ್ಟಿ ಸ್ಪುರದ್ರೂಪಿಯೇ ಸರಿ. ಆದರೆ ಆ ರೂಪವೇ ಜೀವನಕ್ಕೆ ಮುಳ್ಳಾಗಲಿದೆ ಎಂಬ ಕಾರಣಕ್ಕೆ ಕಪ್ಪು ಬಣ್ಣದಿಂದ ದೃಷ್ಟಿಯನ್ನ ಹೊರ ಜಗತ್ತಿಗೆ ಬಿಟ್ಟಿದ್ದಾಳೆ ಚನ್ನಮ್ಮ. ಆದರೆ ಈಗ ದೃಷ್ಟಿಗೆ ದತ್ತನ ಮೇಲೆ ಲವ್ವಾಗಿದೆ. ಅದನ್ನ ಹೇಳಿಕೊಳ್ಳುವಂತೆ ಇಲ್ಲ. ಯಾಕಂದ್ರೆ ದತ್ತನೇ ಇಡೀ ಮನೆಗೆ ಜೀವನ ಒದಗಿಸಿಕೊಟ್ಟಿರುವಂತವರು. ದತ್ತನಿಗೂ ದೃಷ್ಟಿ ಮೇಲೆ ಅಪಾರ ಅಭಿಮಾನ. ಆದರೆ ಅದು ಪ್ರೀತಿ ಅನ್ನೋದು ದತ್ತನಿಗೆ ಗೊತ್ತಾಗೋಕೆ ಇನ್ನು ಸಮಯ ಬೇಕಾಗಿದೆ.

ದೃಷ್ಟಿ-ಶರಾವತಿ ನಡುವೆ ಜಿದ್ದಾಜಿದ್ದಿ
ದತ್ತನ ಜೊತೆಗೆ ದೃಷ್ಟಿ ಕ್ಲೋಸ್ ಆಗಿರುವುದು, ಗಮನ ಸೆಳೆಯುವುದನ್ನು ಕಂಡು ಶರಾವತಿಗೆ ಕೋಪ ಹೆಚ್ಚಾಗಿದೆ. ದತ್ತನನ್ನು ಕೊಂದು ಬಿಡಬೇಕೆಂದು ಶರಾವತಿ ಪ್ಲ್ಯಾನ್ ಮಾಡುತ್ತಿದ್ದರೆ ದತ್ತನ ಮನಸ್ಸನ್ನು ಗೆಲ್ಲುವುದಕ್ಕೆ ದೃಷ್ಟಿ ಪ್ರಯತ್ನ ಪಡುತ್ತಾ ಇದ್ದಾಳೆ. ಇದೇ ವಿಚಾರ ಈಗ ಶರಾವತಿ ಜಿದ್ದಿಗೆ ಬೀಳುವಂತೆ ಮಾಡಿದೆ.
500 ರೂಪಾಯಿ ಕದ್ದ ರಾಜಾ..!
ದೃಷ್ಟಿಯನ್ನು ಹೇಗಾದರೂ ಮಾಡಿ ಮನೆಯಿಂದ ಓಡಿಸಬೇಕು, ಮನೆಯವರ ನಂಬಿಕೆಯನ್ನು ಹಾಳು ಮಾಡಬೇಕೆಂದು ಶರಾವತಿ ಇನ್ನಿಲ್ಲದ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದೇ ಸಮಯಕ್ಕೆ ರಾಜಾ ಸಿಕ್ಕಿಬಿದ್ದಿದ್ದಾನೆ. ಟೇಬಲ್ ಮೇಲೆ 500 ರೂಪಾಯಿ ಕಾಣುವಂತೆ ಇಟ್ಟಿದ್ದ ಶರಾವತಿ, ರಾಜಾ ತೆಗೆದುಕೊಳ್ಳುವುದನ್ನು ವಿಡಿಯೋ ಮಾಡಿಕೊಂಡಿದ್ದಾಳೆ. ಇದರಿಂದಾನೇ ಈಗ ಅವನನ್ನು ಸಿಕ್ಕಿ ಹಾಕಿಸುವ ಪ್ಲ್ಯಾನ್ ಮಾಡಿದ್ದಾಳೆ. ತನ್ನ ಮನೆಯವರಿಗೆ ಅವಮಾನವಾದರೆ ದೃಷ್ಟಿ ಸಹಿಸುವುದಿಲ್ಲ. ರಾಜನನ್ನು ಆ ಆರೋಪದಿಂದ ಹೇಗೆ ಕಾಪಾಡ್ತಾಳೆ ಎಂಬುದನ್ನು ನೋಡಬೇಕಿದೆ.
ಥಾರ್ ಖರೀದಿಸಿದ ರಾಜಾ
ಅದು ಸೀರಿಯಲ್ ಲೈಫ್ ಆದರೆ ರಿಯಲ್ ಆಗಿ ರಾಜಾ ಮಹಾರಾಜನ ರೀತಿಯೇ ಬದುಕುತ್ತಿದ್ದಾನೆ. ಇತ್ತೀಚೆಗಷ್ಟೇ ರಾಜಾ ಅಲಿಯಾಸ್ ಅನೂಪ್ ಮನೆಗೆ ಮಹೀಂದ್ರ ಥಾರ್ ಬಂದಿದ್ದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಥಾರ್ ಜೊತೆಗಿನ ವಿಡಿಯೋ ಕೂಡ ಮಾಡು ಹಾಕಿದ್ದಾರೆ. ಅವರನ್ನು ಫಾಲೋ ಮಾಡುವವರು ಕಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ.
ಅಪ್ಪು ಫ್ಯಾನ್ ದೃಷ್ಟಿಯ ತಮ್ಮ
ಅನೂಪ್ ಒಳ್ಳೆಯ ಡ್ಯಾನ್ಸರ್. ಸೋಷಿಯಲ್ ಮೀಡಿಯಾದಲ್ಲಿ ಅವರನ್ನ ಫಾಲೊಕ ಮಾಡುತ್ತಿರುವವರಿಗೆ ಅದು ಗೊತ್ತಿದೆ. ಅಷ್ಟೇ ಅಲ್ಲ ಡಿಕೆಡಿ ಫ್ಯಾಮಿಲಿ ವಾರ್ ಸೀಸನ್ 2ರ ವಿನ್ನರ್ ಕೂಡ ಹಾಗೆ ಡ್ರಾಮಾ ಜೂನಿಯರ್ ಫೈನಲಿಸ್ಟ್ ಕೂಡ ಆಗಿದ್ದಾರೆ. ಅಪ್ಪು ಪಕ್ಕ ಫ್ಯಾನ್. ಇಂದಿಗೂ ಅನೂಪ್ ತನ್ನ ಡಿಪಿಯಲ್ಲಿ ಹಾಕಿರುವ ಫೋಟೋ, ಪುನೀತ್ ರಾಜ್‍ಕುಮಾರ್ ಜೊತೆಗೆ ಇರುವಂತದ್ದು. ಬಘೀರ ಸಿನಿಮಾದಲ್ಲೂ ಆಕ್ಟ್ ಮಾಡಿದ್ದಾರೆ. ದೃಷ್ಟಿಬೊಟ್ಟು ಧಾರಾವಾಹಿಯಲ್ಲಂತು ಎಲ್ಲರ ಅಚ್ಚುಮೆಚ್ಚಿನ ಆರ್ಟಿಸ್ಟ್. ಸದ್ಯ ಮನೆಗೆ ಥಾರ್ ಬಂದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.


Click it and Unblock the Notifications











