For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಯಾದ ಒಂದೇ ತಿಂಗಳಲ್ಲೇ ಕಿರುತೆರೆಗೆ ಬಂದ ಪೊಗರು

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದಲ್ಲಿ ತೆರೆಕಂಡಿದ್ದ ಪೊಗರು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಭರ್ಜರಿ ಗಳಿಕೆ ಕಂಡಿತ್ತು. ಆರು ದಿನಕ್ಕೆ ಪೊಗರು ಸಿನಿಮಾ 48 ಕೋಟಿ ಬಾಚಿಕೊಂಡಿತ್ತು ಎಂದು ಸ್ವತಃ ನಿರ್ಮಾಪಕ ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

  ಸುಮಾರು ಮೂರುವರೆ ವರ್ಷದ ಬಳಿಕ ತೆರೆಗೆ ಬಂದಿದ್ದ ಧ್ರುವ ಸರ್ಜಾ ಸಿನಿಮಾ ಕೊರೊನಾ ಭೀತಿಯಲ್ಲೂ ಅಬ್ಬರಿಸಿತ್ತು. ಚಿತ್ರಮಂದಿರಕ್ಕೆ ಜನ ಬರ್ತಾರೋ ಬರಲ್ಲೋ ಎಂಬ ಆತಂಕವನ್ನು ದೂರ ಮಾಡಿ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಹೀಗೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಪೊಗರು ಸಿನಿಮಾ ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಬಿಡುಗಡೆಯಾದ ಒಂದೇ ತಿಂಗಳಲ್ಲಿ ಪೊಗರು ಟಿವಿಯಲ್ಲಿ ಮೂಡಿಬರುತ್ತಿದೆ. ಮುಂದೆ ಓದಿ...

  ಹಿಂದಿಯಲ್ಲಿ ಪೊಗರು ಪ್ರಸಾರ

  ಹಿಂದಿಯಲ್ಲಿ ಪೊಗರು ಪ್ರಸಾರ

  ಪೊಗರು ಸಿನಿಮಾದ ಹಿಂದಿ ಅವತರಣಿಕೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಏಪ್ರಿಲ್ ತಿಂಗಳಲ್ಲಿ ಪೊಗರು ಸಿನಿಮಾ ಟಿವಿಯಲ್ಲಿ ಮೂಡಿಬರಲಿದೆ ಎಂದು ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಸಿನಿಫ್ಲೆಕ್ಸ್ ಚಾನಲ್‌ನಲ್ಲಿ ಪೊಗರು ಹಿಂದಿ ವರ್ಷನ್ ಪ್ರಸಾರವಾಗಲಿದೆ. ಏಪ್ರಿಲ್ ತಿಂಗಳು ಎಂದು ಪ್ರಕಟಿಸಿದ್ದು, ನಿಖರವಾದ ದಿನಾಂಕ ತಿಳಿಸಿಲ್ಲ.

  ಜೂನಿಯರ್ ಚಿರು ಜೊತೆ ಖರಾಬು ಹಾಡು ವೀಕ್ಷಿಸಿದ ಧ್ರುವ ಸರ್ಜಾಜೂನಿಯರ್ ಚಿರು ಜೊತೆ ಖರಾಬು ಹಾಡು ವೀಕ್ಷಿಸಿದ ಧ್ರುವ ಸರ್ಜಾ

  ದುಬಾರಿ ಬೆಲೆಗೆ ಪೊಗರು ಹಕ್ಕು ಮಾರಾಟ

  ದುಬಾರಿ ಬೆಲೆಗೆ ಪೊಗರು ಹಕ್ಕು ಮಾರಾಟ

  ದಕ್ಷಿಣದ ಮೂರು ಭಾಷೆಗಳಲ್ಲಿ ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದ ಪೊಗರು ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಆದರೆ, ವಿಮರ್ಶಾತ್ಮಕವಾಗಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಹಿಂದಿಯಲ್ಲಿ ದುಬಾರಿ ಬೆಲೆ ಕೊಟ್ಟು ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದರು. 7.2 ಕೋಟಿಗೆ ಪೊಗರು ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿತ್ತು ಎಂಬ ಮಾಹಿತಿ ಇದೆ.

  ಫೆಬ್ರವರಿ 19ರಂದು ಬಿಡುಗಡೆಯಾಗಿದ್ದ ಪೊಗರು

  ಫೆಬ್ರವರಿ 19ರಂದು ಬಿಡುಗಡೆಯಾಗಿದ್ದ ಪೊಗರು

  ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಡುಗಡೆಯಾತ್ತು. ನಂದಕಿಶೋರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಧನಂಜಯ್, ಸಂಪತ್ ರಾಜ್, ಚಿಕ್ಕಣ್ಣ, ರಾಘವೇಂದ್ರ ರಾಜ್ ಕುಮಾರ್, ಕುರಿ ಪ್ರತಾಪ್, ರವಿಶಂಕರ್, ಪವಿತ್ರ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದರು. ಚಂದನ್ ಶೆಟ್ಟಿ ಸಂಗೀತ ನೀಡಿದ್ದರು.

  ಧ್ರುವ ಸರ್ಜಾ ಹೊಸ ಲುಕ್ ಗೆ ಅಭಿಮಾನಿಗಳು ಫಿದಾಧ್ರುವ ಸರ್ಜಾ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

  ದುಬಾರಿ ಚಿತ್ರ ಆರಂಭಿಸಿದ ಧ್ರುವ ಸರ್ಜಾ

  ದುಬಾರಿ ಚಿತ್ರ ಆರಂಭಿಸಿದ ಧ್ರುವ ಸರ್ಜಾ

  ಪೊಗರು ನಂತರ ಮತ್ತೆ ನಂದಕಿಶೋರ್ ಜೊತೆ ಧ್ರುವ ಸರ್ಜಾ ಸಿನಿಮಾ ಆರಂಭಿಸಿದ್ದಾರೆ. ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಈ ಚಿತ್ರಕ್ಕೆ ದುಬಾರಿ ಎಂದು ಹೆಸರಿಡಲಾಗಿದೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿಸಿ, ಮುಹೂರ್ತ ಸಹ ನಡೆದಿದೆ.

  English summary
  Dhruva Sarja starrer Pogaru Hindi Version to be Aired On Colors Cineplex Channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X