ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ಕೂಡ ಮೂಡಿ ಬರುತ್ತಿವೆ. 'ತ್ರಿನಯನಿ', 'ಪುನರ್‌ ವಿವಾಹ' ಸೇರಿದಂತೆ ಹಲವು ಧಾರಾವಾಹಿಗಳು ಈಗಾಗಲೇ ಕನ್ನಡಕ್ಕೆ ಡಬ್ ಆಗಿವೆ. ಇದೀಗ ಮತ್ತೊಂದು ಧಾರಾವಾಹಿ ಡಬ್ ಆಗಲು ಸಜ್ಜಾಗಿದೆ. ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿರುತ್ತೆ. ಅದೇ ಲಿಸ್ಟ್‌ಗೆ ಈ ಧಾರಾವಾಹಿ ಸೇರುತ್ತಿದೆ.

ಸದ್ಯ ಮಧ್ಯಾಹ್ನದಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ಜೀ ಅಚ್ಚುಮೆಚ್ಚಿನ ಧಾರಾವಾಹಿಗಳನ್ನೆ ನೀಡುತ್ತಿದೆ. ಯಾವುದು ಕೂಡ ಟಿಆರ್‌ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೋವಿಡ್‌ನಿಂದಾಗಿ ಡಬ್ಬಿಂಗ್ ಧಾರಾವಾಹಿಗಳು ಕನ್ನಡಕ್ಕೆ ಎಂಟ್ರಿ ಕೊಟ್ಟವು. ಈ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರೇಕ್ಷಕರು ಕೂಡ ಒಪ್ಪಿದ್ದಾರೆ. ಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಒಳ್ಳೆಯ ಧಾರಾವಾಹಿಗಳನ್ನು ನೋಡಲಾಗುತ್ತಿರಲಿಲ್ಲ. ಅದೇ ಧಾರಾವಾಹಿಗಳು ಡಬ್ ಆಗಿ ಕನ್ನಡಕ್ಕೆ ಬಂದಾಗ ಪ್ರೇಕ್ಷಕರು ಅದ್ಧೂರಿತನದ ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

Dubbed serial Sandhyaraga will premiere on Zee Kananda channel soon

ಕನ್ನಡದಲ್ಲಿ ಈಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚೆಚ್ಚು ಬರಲು ಶುರುವಾಗಿವೆ. ಆದರೆ ಈ ಡಬ್ಬಿಂಗ್‌ಗೆ ಸ್ವಲ್ಪ ಮಿತಿ ಇರಲಿ ಎಂಬುದು ಕೆಲವರ ಅಭಿಪ್ರಾಯ. ಹಾಗಿದ್ದರೂ ಕೂಡ ಈಗ ಮತ್ತೊಂದು ಡಬ್ಬಿಂಗ್‌ ಧಾರಾವಾಹಿ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದೆ. ಆ ಧಾರಾವಾಹಿ ಯಾವುದು.? ಯಾವ ಸಮಯದಲ್ಲಿ ಮೂಡಿ ಬರುತ್ತದೆ ಎಂದು ತಿಳಿಯೋಣ ಬನ್ನಿ..

ಜೀ ಕನ್ನಡ ವಾಹಿನಿವಾಹಿನಿಯಲ್ಲಿ ಈಗಾಗಲೇ ಎರಡು ಹೊಸ ಧಾರಾವಾಹಿಗಳು ಮೂಡಿ ಬರುತ್ತಿದೆ. ಇದರ ಬೆನ್ನಲ್ಲೇ ಮತ್ತೆರಡು ಧಾರಾವಾಹಿಗಳು ಕೂಡ ಪ್ರಸಾರ ಕಾಣಲು ಸಜ್ಜಾಗಿದೆ. 'ಸೀತಾ ರಾಮ' ಹಾಗೂ 'ಅಮೃತಧಾರೆ' ಧಾರಾವಾಹಿಗಳ ಪ್ರೋಮೋ ರಿಲೀಸ್‌ ಆಗಿದ್ದು, ಈ ಧಾರಾವಾಹಿಗಳನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ, ವೀಕೆಂಡ್‌ ನಲ್ಲಿ ಕೂಡ ಎರಡು ರಿಯಾಲಿಟಿ ಶೋಗಳು ಮೂಡಿ ಬರಲು ಸಜ್ಜಾಗಿವೆ.

Dubbed serial Sandhyaraga will premiere on Zee Kananda channel soon

ಛೋಟಾ ಚಾಂಪಿಯನ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಶುರುವಾಗಲಿದೆ. ಇದರ ಪ್ರೋಮೋಗಳು ಬಹಳ ವಿಭಿನ್ನವಾಗಿದ್ದು, ಜೀ ವಾಹಿನಿಯ ಪ್ರೇಕ್ಷಕರು ಕಾತುರರಾಗಿದ್ದಾರೆ. ಶೀಘ್ರದಲ್ಲೇ 'ಸಂಧ್ಯಾರಾಗ' ಎಂಬ ಹೊಸ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ. ಸದ್ಯ ಅದರ ಪ್ರೊಮೋ ರಿಲೀಸ್ ಆಗಿದ್ದು, ಕಥೆ ಅದ್ಭುತವಾಗಿದೆ ಎನ್ನಲಾಗಿದೆ.

ಇದೊಂದು ಅಕ್ಕ-ತಂಗಿಯರ ಕಥೆಯಾಗಿದೆ. ತಂಗಿಗೋಸ್ಕರ ಸಪ್ತಸಾಗರ ದಾಟಿದ ಅಕ್ಕನ ಕಥೆ ಎಂದು ಜೀ ಕನ್ನಡ ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ. ಪ್ರೋಮೋ ನೋಡಿದರೆ, ಅಕ್ಕ ತಂಗಿ ಬಹಳ ವರ್ಷಗಳ ಹಿಂದೆಯೇ ದೂರವಾಗಿದ್ದು, ಇಬ್ಬರೂ ಕೂಡ ಭೇಟಿ ಮಾಡಲು ಕಾಯುತ್ತಿದ್ದಾರೆ ಎಂಬ ರೀತಿಯಲ್ಲಿದೆ.

Dubbed serial Sandhyaraga will premiere on Zee Kananda channel soon

ಈ ಧಾರಾವಾಹಿಯಲ್ಲಿ ಅಕ್ಕನ ಪಾತ್ರದಲ್ಲಿ ಜಯಶ್ರೀ ಎಸ್. ರಾಜ್ ಕಾಣಿಸಿಕೊಂಡಿದ್ದಾರೆ. ಒಂಟಿಯಾಗಿ ನಾನು ಎಷ್ಟು ನೋವನ್ನಾದ್ರೂ ಸಹಿಸಿಕೊಳ್ತೇನೆ. ಆದ್ರೆ ನನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದನ್ನು ಯಾವತ್ತೂ ಮರೆಯಲ್ಲ ಎಂದು ಅಕ್ಕ ಪ್ರೋಮೋದಲ್ಲಿ ಹೇಳುತ್ತಾಳೆ. ಆಗ ತಂಗಿ ನಿನ್ನನ್ನು ನೋಡೋಕೆ ಅಂತಾನೇ ಉಸಿರು ಗಟ್ಟಿ ಹಿಡಿದುಕೊಂಡು ಕಾಯ್ತಾ ಇದ್ದೇನೆ ಎನ್ನುತ್ತಾಳೆ.

ಪ್ರೋಮೋದಲ್ಲಿ ಅಕ್ಕ ತಂಗಿಗೆ ಪತ್ರವನ್ನು ಬರೆಯುತ್ತಾಳೆ. ಇದು ತೆಲುಗಿನಲ್ಲಿ ಹಿಟ್‌ ಆದ ಧಾರಾವಾಹಿ ಎಂದು ಹೇಳಲಾಗಿದೆ. 'ಪಡಮಟಿ ಸಂಧ್ಯಾರಾಗಂ' ಎಂದು ತೆಲುಗಿನಲ್ಲಿ ಪ್ರಸಾರಗೊಂಡಿದ್ದು, ಈಗ ಕನ್ನಡದಲ್ಲಿ ಮೂಡಿ ಬರಲಿದೆ. ಹಲವರು ಕನ್ನಡದಲ್ಲೂ ಈ ಧಾರಾವಾಹಿ ಬರುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಇನ್ನು ಈ ಧಾರಾವಾಹಿ ಸಂಜೆ 6.30ಕ್ಕೆ ಪ್ರಸಾರವಾಗುತ್ತೆ ಎಂದು ಹೇಳಲಾಗುತ್ತಿದೆ.

More from Filmibeat

English summary
Dubbed serial Sandhyaraga will premiere on Zee Kananda channel soon new serial sandhyaraga in zee kannada promo released. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X