twitter
    For Quick Alerts
    ALLOW NOTIFICATIONS  
    For Daily Alerts

    ನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನ

    |

    ಸಿನಿಮಾಗಳಂತೆಯೇ ಧಾರಾವಾಹಿ, ವೆಬ್ ಸೀರೀಸ್‌ಗಳೂ ಕನ್ನಡದಲ್ಲಿ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುವ ನಿರೀಕ್ಷೆ ಹುಟ್ಟಿಸಿದ್ದವು. ಹಿಂದಿಯಲ್ಲಿ ಪ್ರಸಾರವಾದ ಪ್ರಮುಖ ಧಾರಾವಾಹಿ, ಕಾರ್ಯಕ್ರಮಗಳನ್ನು ಇತರೆ ಭಾಷೆಯ ಜನರಂತೆಯೇ ಕನ್ನಡಿಗರು ಕೂಡ ನಮ್ಮ ಭಾಷೆಯಲ್ಲಿಯೇ ನೋಡಬಹುದು ಎಂದು ಅನೇಕರು ಖುಷಿಪಟ್ಟಿದ್ದರು. ಆದರೆ ಡಬ್ಬಿಂಗ್ ವಿರೋಧಿ ಬಣದ ಒತ್ತಡಕ್ಕೆ ಮಣಿದು ಈ ಕಾರ್ಯಕ್ರಮಗಳ ಕನ್ನಡ ಅವತರಣಿಕೆ ಪ್ರಸಾರಕ್ಕೆ ತಡೆ ನೀಡಲಾಗಿದೆ.

    ಇದು ಡಬ್ಬಿಂಗ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಭಾಷೆಯ ಕಾರ್ಯಕ್ರಮವನ್ನು ನಮ್ಮ ಭಾಷೆಯಲ್ಲಿಯೇ ನೋಡಬೇಕು ಎಂದು ಕಾನೂನಾತ್ಮಕ ಹೋರಾಟ ಮಾಡಿ ಅದರಲ್ಲಿ ಯಶಸ್ವಿಯಾದರೂ ಡಬ್ಬಿಂಗ್ ಕಾರ್ಯಕ್ರಮಗಳು ಕನ್ನಡಿಗರಿಗೆ ಲಭ್ಯವಾಗುತ್ತಿಲ್ಲ. 'ಮಹಾಭಾರತ' ಧಾರಾವಾಹಿ ಕನ್ನಡದಲ್ಲಿ ಪ್ರಸಾರವಾಗುತ್ತದೆ ಎಂಬ ಸುದ್ದಿ ಅವರಿಗೆ ಖುಷಿ ನೀಡಿತ್ತು. ಈಗ ಅವುಗಳ ಜಾಹೀರಾತು ಮಾಯವಾಗಿದೆ. ಮುಂದೆ ಓದಿ...

    ಸಂಜೆ ಟ್ವಿಟರ್ ಅಭಿಯಾನ

    ಸಂಜೆ ಟ್ವಿಟರ್ ಅಭಿಯಾನ

    ಮಹಾಭಾರತವನ್ನು ಕನ್ನಡದಲ್ಲಿಯೇ ಪ್ರಸಾರ ಮಾಡುವಂತೆ ಡಬ್ಬಿಂಗ್ ಪರ ಹೋರಾಟಗಾರರು ಏಪ್ರಿಲ್ 9ರ ಸಂಜೆ 6 ಗಂಟೆಯಿಂದ ಟ್ವಿಟ್ಟರ್ ಅಭಿಯಾನ ನಡೆಸಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರೆಲ್ಲರೂ ಟಿವಿ ವಾಹಿನಿಗೆ ಒತ್ತಾಯಿಸುವ ಅಭಿಯಾನ ಆಯೋಜಿಸಲಾಗಿದೆ.

    ವೀಕ್ಷಕರಿಗೆ ಸಿಹಿ ಸುದ್ದಿ: ಕನ್ನಡದಲ್ಲಿಯೂ ಪ್ರಸಾರವಾಗಲಿದೆ ಮಹಾಭಾರತವೀಕ್ಷಕರಿಗೆ ಸಿಹಿ ಸುದ್ದಿ: ಕನ್ನಡದಲ್ಲಿಯೂ ಪ್ರಸಾರವಾಗಲಿದೆ ಮಹಾಭಾರತ

    ಕನ್ನಡಿಗರ ಜನಾಭಿಪ್ರಾಯ

    ಕನ್ನಡಿಗರ ಜನಾಭಿಪ್ರಾಯ

    ಟ್ವಿಟರ್‌ನಲ್ಲಿನ ಕನ್ನಡಿಗ ಪುಟದ ಖಾತೆಯಿಂದ ಈ ಟ್ವಿಟರ್ ಅಭಿಯಾನ ಆರಂಭವಾಗಲಿದೆ. ಮಹಾಭಾರತವನ್ನು ಕನ್ನಡ ಭಾಷೆಯಲ್ಲಿ ಪ್ರಸಾರ ಮಾಡುವಂತೆ ಆಗ್ರಹಿಸಿ ಅದನ್ನು ಟ್ವಿಟರ್ ಟ್ರೆಂಡ್ ಮಾಡುವ ಮೂಲಕ ಚಾನೆಲ್‌ಗೆ ಕನ್ನಡಿಗರ ಅಭಿಪ್ರಾಯವನ್ನು ತಿಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

    ಕನ್ನಡಿಗರ ಹಕ್ಕುಗಳಿಗೆ ನ್ಯಾಯ ಸಿಗಬೇಕು

    ಇಲ್ಲಿ 6 ಕೋಟಿ ಕನ್ನಡಿಗರ ಹಕ್ಕುಗಳಿಗೂ ನ್ಯಾಯ ದೊರಕಬೇಕು, ಕನ್ನಡ ಚಿತ್ರರಂಗ / ಟೀವಿರಂಗ ಅಸ್ತಿತ್ವ ಕಳೆದುಕೊಳ್ಳದಂತೆಯೂ ನೋಡಿಕೊಳ್ಳಬೇಕು. ಎರಡರ ಮಧ್ಯೆ ಬ್ಯಾಲೆನ್ಸ್ ಬಹಳ ಮುಖ್ಯ. ಈ ಜವಾಬ್ದಾರಿ ಕನ್ನಡ ಗ್ರಾಹಕರ ಕೂಟ ಸೇರಿದಂತೆ ಎಲ್ಲ ಕನ್ನಡ ಸಂಘಟನೆಗಳ ಮೇಲೂ ಇದೆ. ಈ ಜವಾಬ್ದಾರಿಯನ್ನು ಅರಿತು ನಾವು ಕೆಲಸ ಮಾಡುತ್ತಿದ್ದೇವೆ.

    ಸುವರ್ಣದಲ್ಲಿ ಪ್ರಸಾರವಾಗಲಿದೆ 'ಹೋಸ್ಟೇಜಸ್' ಡಬ್ಬಿಂಗ್: ಉಳಿದ ವೆಬ್ ಸೀರೀಸ್, ಸಿನಿಮಾಗಳೇಕಿಲ್ಲ?ಸುವರ್ಣದಲ್ಲಿ ಪ್ರಸಾರವಾಗಲಿದೆ 'ಹೋಸ್ಟೇಜಸ್' ಡಬ್ಬಿಂಗ್: ಉಳಿದ ವೆಬ್ ಸೀರೀಸ್, ಸಿನಿಮಾಗಳೇಕಿಲ್ಲ?

    ತಾವೂ ಮಾಡಲ್ಲ ಪರರಿಗೂ ಬಿಡಲ್ಲ

    ಹಿಂದಿಯಲ್ಲಿ ಮಹಾಭಾರತ ಬಂದು ಇಪ್ಪತ್ತೈದು ವರ್ಷಗಳಾಗಿವೆ, ಇಷ್ಟು ವರ್ಷದಲ್ಲಿ ಕನ್ನಡದಲ್ಲಿ ಇದೇ ಮಟ್ಟದ ಧಾರಾವಾಹಿ ಯಾಕೆ ನಿರ್ಮಿಸಲು ಸಾದ್ಯವಾಗಿಲ್ಲ? ಈಗ ಕ್ಲಾಸಿಕ್ ಎನಿಸಿಕೊಂಡಿರುವ ಇದನ್ನು ಕನ್ನಡಕ್ಕೆ ಬರದಂತೆ ತಡೆಯುತ್ತಿರಾ? ತಾವೂ ಮಾಡಲ್ಲ ಪರರಿಗೂ ಬಿಡಲ್ಲ. #ಡಬ್ಬಿಂಗ್_ಇದು_ಕನ್ನಡಪರ #ಡಬ್ಬಿಂಗ್_ನಮ್ಮಹಕ್ಕುಸ

    ಮಾಸ್ಟರ್ ಪೀಸ್ ಮಾಲ್ಗುಡಿ ಡೇಸ್

    ಶಂಕರ್ ನಾಗ್ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಲೆಂದೇ ಅವರ ಮಾಸ್ಟರ್ ಪೀಸ್ ಮಾಲ್ಗುಡಿ ಡೇಸ್ ಅನ್ನು ಮೂರು ವರ್ಷಗಳ ಸತತ ಪ್ರಯತ್ನದಿಂದ ಕನ್ನಡಕ್ಕೆ ಡಬ್ ಮಾಡಿದೆವು. ಇದಕ್ಕಾಗಿ ಪಟ್ಟ ಶ್ರಮ, ಮುಂಬೈ ತಿರುಗಾಟ, ಇವೆಲ್ಲಾ ನಮಗೆ ಮಾತ್ರ ಗೊತ್ತು. ಈಗ ಟೀವಿ ಚಾನೆಲ್‍ಗಳು ಮಾಲ್ಗುಡಿ ಡೇಸನ್ನು ಕನ್ನಡದಲ್ಲಿ ಪ್ರಸಾರ ಮಾಡದೇ ಶಂಕರಣ್ಣನ ಕೆಲಸಕ್ಕೆ ಅವಮಾನ ಮಾಡುತ್ತಿದ್ದಾರೆ.

    ಕನ್ನಡಕ್ಕೆ ಬಂದ ತಮಿಳಿನ 'ಮಾಸ್ಟರ್': ಪೋಸ್ಟರ್ ಬಿಡುಗಡೆಕನ್ನಡಕ್ಕೆ ಬಂದ ತಮಿಳಿನ 'ಮಾಸ್ಟರ್': ಪೋಸ್ಟರ್ ಬಿಡುಗಡೆ

    English summary
    Supporters of Kannada dubbing to start online campaign demanding to telecast Mahabharata in Kannada.
    Thursday, April 9, 2020, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X