ರವಿ ಬೆಳಗೆರೆಗೆ ಆ ಸಮಯದಲ್ಲಿ ಶಾಪ ಹಾಕಿದ್ದರಂತೆ ದುನಿಯಾ ರಶ್ಮಿ
Recommended Video
ದುನಿಯಾ ರಶ್ಮಿ ಕುರಿತು ಪತ್ರಕರ್ತ ರವಿ ಬೆಳಗೆರೆ ತಮ್ಮ 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆದಿದ್ದರು ಎಂದು ಸ್ವತಃ ರಶ್ಮಿ ಹೇಳಿಕೊಂಡಿದ್ದರು. ಈಗ ದೊಡ್ಮನೆಯಿಂದ ರಶ್ಮಿ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ, ನಟಿ ದುನಿಯಾ ರಶ್ಮಿ, ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಬಿಗ್ ಬಾಸ್ ಜರ್ನಿ ಬಗ್ಗೆ ಅಲ್ಲಿನ ಸಹ ಸ್ಪರ್ಧಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಸಂದರ್ಶನದಲ್ಲಿ ರವಿ ಬೆಳಗೆರೆ ಕುರಿತು ಮಾತನಾಡಿದ ರಶ್ಮಿ ''ಆಗೊಂದು ಸಲ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದರು. ಆಗ ತುಂಬಾ ಕೋಪವಿತ್ತು. ಬಹಳ ಬೈಯ್ದುಕೊಂಡಿದ್ದೆ. ಶಾಪ ಕೂಡ ಹಾಕಿದ್ದೆ. ಬಳಿಕ ಬಿಗ್ ಬಾಸ್ ಮನೆಯಲ್ಲಿ ನಮ್ಮ ಜೊತೆ ಮಾತನಾಡಿದ್ಮೇಲೆ ವಾಹ್ ಎನಿಸಿತು'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

''ರವಿ ಬೆಳಗೆರೆ ತಮ್ಮ ಕುಟುಂಬದ ಬಗ್ಗೆ, ಅವರ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹೆಚ್ಚು ಸಮಯ ನಮ್ಮೊಂದಿಗೆ ಕಳೆಯುತ್ತಿದ್ದರು. ಏನಾದರೂ ಕಷ್ಟ ಬಂದಾಗ ನನ್ನ ಬಳಿ ಬಾ ಎಂದು ಧೈರ್ಯ ನೀಡಿದ್ದರು. ಈಗ ಹೊರಗೆ ಬಂದಿದ್ದೇನೆ. ಅವರನ್ನು ಭೇಟಿ ಮಾಡುತ್ತೇನೆ'' ಎಂದು ರಶ್ಮಿ ತಿಳಿಸಿದರು.
2007ರಲ್ಲಿ 'ದುನಿಯಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ರಶ್ಮಿ, ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡರು. ಅಲ್ಲಿಂದ ದುನಿಯಾ ರಶ್ಮಿ ಎಂದೇ ಖ್ಯಾತಿ ಗಳಿಸಿಕೊಂರು. ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಈಗ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಒಳ್ಳೆಯ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕೊನೆಯದಾಗಿ ಕಾರ್ನಿ ಸಿನಿಮಾದಲ್ಲಿ ರಶ್ಮಿ ನಟಿಸಿದ್ದರು.


Click it and Unblock the Notifications











