'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಪತ್ತೆಯಾದ ದುರ್ಗಾ: ಅಸಲಿ ಕಾರಣ ಏನು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣ'ದಲ್ಲಿ ಹಿರಿ ಸೊಸೆ ದುರ್ಗಾ ಕೆಲವು ಸಂಚಿಕೆಗಳಿಂದ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಇದೀಗ ದುರ್ಗಾ ಕಾಣೆಯಾಗಿದ್ದಾರೆ ಎಂದು ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದೂ ಆಗಿದೆ. ಅಂದ ಹಾಗೇ ದುರ್ಗಾ ಪಾತ್ರಧಾರಿ ನಂದಿನಿ ಮೂರ್ತಿ ಅದ್ಯಾಕೆ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಕಾಣೆಯಾದರು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಹಿರಿ ಸೊಸೆ ದುರ್ಗಾಳಾಗಿ ಕಾಣಿಸಿಕೊಂಡಿರುವ ನಂದಿನಿ ಮೂರ್ತಿ ಪವರ್ ಫುಲ್ ಹೆಣ್ಮಗಳಾಗಿ ಮೋಡಿ ಮಾಡುತ್ತಿದ್ದಾರೆ. ತನ್ನ ಮಾತೇ ವೇದವಾಕ್ಯ, ತಾನು ಹೇಳಿದ್ದೇ ಫೈನಲ್ ಎಂದು ನಂಬಿದ್ದ ದುರ್ಗಾ ಮನೆಗೆ ಸೊಸೆಯಾಗಿ ಬಂದ ಲೀಲಾ ಪಾಲಿಗೆ ವಿಲನ್. ಮನೆಯಲ್ಲಿ ಎಜೆ ನಂತರ ತನ್ನದೇ ಕಾರುಬಾರು ಎಂದು ನಂಬಿದ್ದ ದುರ್ಗಾ, ಎಜೆ ಮತ್ತು ಲೀಲಾಳನ್ನು ದೂರ ಮಾಡಲು ಹೊಂಚು ಹಾಕುತ್ತಿದ್ದರು.

hitler-kalyana-serial-nandini-murthy

ತನ್ನ ಸ್ವಾರ್ಥಕ್ಕಾಗಿ ಎಜೆ ಮೊದಲ ಹೆಂಡತಿ ಅಂತರಾ ರೂಪದ ಪ್ರಾರ್ಥನಾರನ್ನು ಮನೆಗೂ ಸೇರಿಸಿಕೊಂಡಿದ್ದರು. ಮುಂದೆ ಪ್ರಾರ್ಥನಾ ಭೀತಿ ಸಹಿಸಲಾರದೇ ಲೀಲಾ ಮುಂದೆ ಸತ್ಯಾಂಶ ತಿಳಿಸಿದ ದುರ್ಗಾ ಸದ್ಯ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಪ್ರಯಾಣ ಮಾಡುವುದಾಗಿ ಹೇಳಿದ್ದರು. ತದ ನಂತರ ಅವರು ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ದುರ್ಗಾ ಪಾತ್ರಧಾರಿ ನಂದಿನಿ ಮೂರ್ತಿ ಧಾರಾವಾಹಿಯ ಸಂಚಿಕೆಗಳಲ್ಲಿ ಕಾಣಿಸಿಕೊಂಡಿರದ ಕಾರಣ ಅವರು ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಇಲ್ಲವೇ ದುರ್ಗಾ ಪಾತ್ರಕ್ಕೆ ವಿದಾಯ ಹೇಳಿದ್ದಾರೆ ಎಂಬ ಅನುಮಾನಗಳು ಕಿರುತೆರೆ ವೀಕ್ಷಕರಿಗೆ ಕಾಡಿತ್ತು. ಆದರೆ, ಇದೀಗ ಆ ಅನುಮಾನಗಳಿಗೆ ಫುಲ್ ಸ್ಟಾಪ್ ಇಟ್ಟಿದೆ ಜೀ ಕುಟುಂಬ ಅವಾರ್ಡ್ಸ್.

ಹೌದು, ದುರ್ಗಾ ಪಾತ್ರಧಾರಿ ನಂದಿನಿ ಮೂರ್ತಿ ಗರ್ಭಿಣಿಯಾಗಿದ್ದಾರೆ. ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ನಟಿ ನಂದಿನಿ ಮೂರ್ತಿ. ಜೀ ಕುಟುಂಬ ಅವಾರ್ಡ್ಸ್‌ನಲ್ಲಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಕಲಾವಿದರುಗಳ ಜೊತೆ ಸೇರಿ ನಂದಿನಿಮೂರ್ತಿ ಅವರಿಗೆ ಅದ್ಧೂರಿಯಾದ ಸೀಮಂತ ಕಾರ್ಯ ಕೂಡಾ ಮಾಡಲಾಗಿದೆ. ಜೀ ಕನ್ನಡ ವಾಹಿನಿಯು ಕುಟುಂಬ ಅವಾರ್ಡ್ಸ್ ನ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ನಂದಿನಿ ಮೂರ್ತಿ ಸೀಮಂತ ವಿಡಿಯೋ ವೈರಲ್ ಆಗಿದೆ.

ಈ ಸುಂದರ ಕ್ಷಣದಲ್ಲಿ ಖುಷಿಯಿಂದ ಪಾಲ್ಗೊಂಡ ಹೆಣ್ಣಿನ ಜೀವನದಲ್ಲಿ ಇದೊಂದು ಬಹುಮುಖ್ಯವಾಗಿರುವ ಸಂದರ್ಭ ಹೌದು. ಮನಸ್ಸು ತುಂಬಿ ಬಂದಿದೆ. ಈ ಸಂತಸದ ಕ್ಷಣವನ್ನು ನಾನು ನನ್ನ ಜೀವನದಲ್ಲಿ ಮರೆಯುವುದಿಲ್ಲ‌. ನಿಮ್ಮ ಪ್ರೀತಿಗೆ ನಾನು ಚಿರ ಋಣಿ ಎಂದು ಮನಸಾರೆ ಹೇಳಿಕೊಂಡಿದ್ದಾರೆ ನಂದಿನಿಮೂರ್ತಿ. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟ ನೀಡಿದ ಸಿಹಿಸುದ್ದಿ ಕೇಳಿ ಪ್ರೇಕ್ಷಕ ಪ್ರಭುಗಳು ಫುಲ್ ಖುಷಿಯಾಗಿದ್ದಾರೆ.

More from Filmibeat

English summary
TV actress Nandini Murthy who gave sweet news. Zee Kudumba Awards held Nandini Seemantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X