ಎಮ್ಮಿ 2021: ವಿಜೇತರ ಪೂರ್ಣ ಪಟ್ಟಿ
ಟಿವಿ ಹಾಗೂ ಒಟಿಟಿ ವೆಬ್ ಸರಣಿಗಳ ಆಸ್ಕರ್ ಎಂದೇ ಪರಿಗಣಿಸಲಾಗುವ ಎಮ್ಮಿಯ 2021ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, 'ದಿ ಕ್ರೌನ್' ವೆಬ್ ಸರಣಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಪ್ರಕಟವಾದ ಪಟ್ಟಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಹಲವು ವೆಬ್ ಸರಣಿ, ಮಿನಿ ಸಿನಿಮಾ ಅಥವಾ ಮಿನಿ ಸೀರೀಸ್‌ಗಳಿಗೆ ಹೆಚ್ಚಿನ ಪ್ರಶಸ್ತಿ ದೊರಕಿದೆ. ಎಚ್‌ಬಿಒ, ಎಬಿಸಿ, ಹೂಲು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಕೆಲವು ವೆಬ್ ಸರಣಿಗಳಿಗೂ ಪ್ರಶಸ್ತಿ ದೊರಕಿದೆ.
ಬ್ರಿಟನ್ ರಾಣಿ ಎಲಿಜಿಬೆತ್ 2 ಜೀವನ ಹಾಗೂ ಬ್ರಿಟನ್ ರಾಜಮನೆತನದ ಒಳ-ಹೊರಗುಗಳ ಕುರಿತಾದ ವೆಬ್ ಸರಣಿ 'ದಿ ಕ್ರೌನ್' ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದಲ್ಲದೆ, ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾಮಿಡಿ ಸರಣಿಯಲ್ಲಿ 'ಟೆಡ್ ಲಾಸ್ಸೊ' ಹಾಗೂ ಲಿಮಿಟೆಡ್ ಸಿನಿಮಾ ವಿಭಾಗದಲ್ಲಿ 'ಮೇರ್ ಆಫ್ ಈಸ್ಟನ್' ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದೆ.

ಎಮ್ಮಿ 2021 ವಿಜೇತ ಟಿವಿ ಸರಣಿ, ಮಿನಿ ಸರಣಿ, ಸಿನಿಮಾಗಳು ಹಾಗೂ ನಟ-ನಟಿಯರ ಪಟ್ಟಿ ಇಲ್ಲಿದೆ
ಅತ್ಯುತ್ತಮ ಡ್ರಾಮಾ ಸರಣಿ: ದಿ ಕ್ರೌನ್
ಅತ್ಯುತ್ತಮ ನಟಿ: ಒಲಿವಿಯಾ ಕಾಲ್‌ಮನ್ (ದಿ ಕ್ರೌನ್)
ಅತ್ಯುತ್ತಮ ನಟ: ಜಾಶ್ ಓ ಕಾರ್ನರ್ (ದಿ ಕ್ರೌನ್)
ಅತ್ಯುತ್ತಮ ಪೋಷಕ ನಟಿ: ಜಿಲಿಯಾನ್ ಆಂಡರ್ಸನ್ (ದಿ ಕ್ರೌನ್)
ಅತ್ಯುತ್ತಮ ಪೋಷಕ ನಟ: ಟೋಬಿಸ್ ಮೆಂಜಿಸ್ (ದಿ ಕ್ರೌನ್)
ಅತ್ಯುತ್ತಮ ನಿರ್ದೇಶಕ: ಜೆಸ್ಸಿಕಾ ಹಾಬ್ಸ್ (ದಿ ಕ್ರೌನ್)
ಅತ್ಯುತ್ತಮ ಬರಹ: ಪೀಟರ್ ಮಾರ್ಗನ್ (ದಿ ಕ್ರೌನ್)
ಅತ್ಯುತ್ತಮ ಮಿಸಿ ಸರಣಿ: ದಿ ಕ್ವೀನ್ಸ್ ಗ್ಯಾಂಬಿಟ್ (ನೆಟ್‌ಫ್ಲಿಕ್ಸ್)
ಅತ್ಯುತ್ತಮ ಟಿವಿ ಸಿನಿಮಾ: ಡಾಲಿ ಪಾರ್ಟನ್ಸ್ ಕ್ರಿಸ್ಟ್‌ಮಸ್ ಆನ್ ದಿ ಸ್ಕೇರ್
ಲಿಮಿಟೆಡ್ ಸರಣಿಯ ಅತ್ಯುತ್ತಮ ನಟಿ: ಟೈಟ್ಯಾನಿಕ್ ಸಿನಿಮಾ ಖ್ಯಾತಿಯ ಕೇಟ್ ವಿನ್‌ಸ್ಲೆಟ್ (ಮೇರ್ ಆಫ್ ಈಸ್ಟನ್)
ಲಿಮಿಟೆಡ್ ಸರಣಿಯ ಅತ್ಯುತ್ತಮ ನಟ: ಎವಾನ್ ಮೆಕ್‌ಗ್ರಾರ್ (ಹಾಲ್‌ಸ್ಟನ್)
ಲಿಮಿಟೆಡ್ ಸರಣಿಯ ಅತ್ಯುತ್ತಮ ಪೋಷಕ ನಟಿ: ಜೂಲಿಯಸ್ ನಿಕೋಲ್‌ಸನ್ (ಮೇರ್ ಆಫ್ ಈಸ್ಟನ್)
ಲಿಮಿಟೆಡ್ ಸರಣಿಯ ಅತ್ಯುತ್ತಮ ಪೋಷಕ ನಟ: ಎವಾನ್ ಪೀಟರ್ಸ್ (ಮೇರ್ ಆಫ್ ಈಸ್ಟನ್)
ಅತ್ಯುತ್ತಮ ಕಾಮಿಡಿ ಸರಣಿ: ಟೆಡ್-ಲಾಸ್ಸೊ (ಎಬಿಸಿ)
ಕಾಮಿಡಿ ಸರಣಿ ಅತ್ಯುತ್ತಮ ನಟಿ: ಜೀನ್ ಸ್ಮಾರ್ಟ್ (ಹ್ಯಾಕ್ಸ್)
ಕಾಮಿಡಿ ಸರಣಿ ಅತ್ಯುತ್ತಮ ನಟ: ಜೇಸನ್ ಸುಡುಕೀಸ್ (ಟೆಡ್ ಲಾಸ್ಸೊ)
ಕಾಮಿಡಿ ಸರಣಿ ಅತ್ಯುತ್ತಮ ಪೋಷಕ ನಟಿ: ಹನ್ನಾ ವಡಿಂಗ್ಹ್ಯಾಮ್ (ಟೆಡ್ ಲಾಸ್ಸೊ)
ಕಾಮಿಡಿ ಸರಣಿ ಅತ್ಯುತ್ತಮ ಪೋಷಕ ನಟ: ಬ್ರೆಟ್ ಗೋಲ್ಡ್‌ಸ್ಟಿನ್ (ಟೆಡ್ ಲಾಸ್ಸೊ)
ಅತ್ಯುತ್ತಮ ಟಾಕ್ ಸೀರೀಸ್: ಲಾಸ್ಟ್ ವೀಕ್ ಟುನೈಟ್ ವಿಥ್ ಜಾನ್ ಒಲಿವಿರ್


Click it and Unblock the Notifications











