ನೀವು ಇಬ್ಬರೂ ನನಗೆ ಬೇಕು ; ಬಿಗ್ ಬಾಸ್ ಸ್ಫರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಕಿರಾತಕ - ಬೆಚ್ಚಿ ಬಿದ್ದ ಚೆಲುವೆಯರು
ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ.. ಅಥವಾ ರಿಯಾಲಿಟಿ ಶೋ ಸ್ಟಾರ್ ಗಳೇ ಇರಲಿ.. ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ.
ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳನ್ನು ತಮ್ಮ 'ಸ್ವತ್ತು' ಎಂದು ಅಂದುಕೊಳ್ಳುತ್ತಾರೆ. ಅಭಿಮಾನದ ಹೆಸರಿನಲ್ಲಿ ಪೀಡಿಸಲು ಶುರು ಮಾಡಿತ್ತಾರೆ. ಅವರ ಖಾಸಗಿ ಬದುಕಿನಲ್ಲಿಯೂ ಕೂಡ ಪ್ರವೇಶ ಮಾಡುತ್ತಾರೆ. ಇದಕ್ಕೆ ಅಧೀಲಾ ನಸ್ರೀನ್ ಮತ್ತು ಫಾತಿಮಾ ನೂರಾ ಜೊತೆ ನಡೆದ ಘಟನೆ ಮತ್ತೊಂದು ಉದಾಹರಣೆ.

ಹೌದು, ಅಧೀಲಾ ಮತ್ತು ನೂರಾ.. ಕೇರಳದ ಸಲಿಂಗಿ ಜೋಡಿ. ಕಾಲೇಜ್ ದಿನಗಳಲ್ಲಿ ಪರಸ್ಪರ ಆಕರ್ಷಿತರಾಗಿದ್ದ ಇಬ್ಬರು ಮನೆಯವರ ತೀವೃ ವಿರೋಧದ ನಡುವೆಯೂ ಕೂಡ ಒಂದಾದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡಿದರೂ, ಮದುವೆ ಮಾಡಲು ಗಂಡನ್ನು ಹುಡುಕಿದರೂ, ಅಧೀಲಾ ಮತ್ತು ಫಾತಿಮಾ ನೂರಾ ಅವರನ್ನು ದೂರ ಮಾಡಲು ಸಾಧ್ಯವಾಗಲಿಲ್ಲ.
ಮನೆಯವರ ವಿರೋಧದ ನಡುವೆ ಕೂಡ ಚೆನ್ನೈನಲ್ಲಿ ಕೆಲಸ ಹುಡುಕುವಲ್ಲಿ ಯಶಸ್ವಿಯಾದ ಇಬ್ಬರು ಮೇ 19-2022ರಲ್ಲಿ ಮನೆಯಿಂದ ಓಡಿ ಹೋದರು. LGBTQIA+ ಸಮುದಾಯದ ಕಲ್ಯಾಣಕ್ಕಾಗಿ ನಡೆಸಲಾಗುತ್ತಿದ್ದ ಕೇಂದ್ರದಲ್ಲಿ ಆಶ್ರಯ ಪಡೆದರು.
ಇಷ್ಟೇ ಅಲ್ಲ ಇಬ್ಬರು ಕೇರಳ ಹೈಕೋರ್ಟ್‌ನ ಮೊರೆ ಹೋದರು. ಮೇ 30-2002ರಂದು 'ಹೇಬಿಯಸ್ ಕಾರ್ಪಸ್' ಅರ್ಜಿಯನ್ನು ಸಲ್ಲಿಸಿದರು. ಇಚ್ಛೆಗೆ ವಿರುದ್ಧವಾಗಿ ಕುಟುಂಬದವರು ಗೃಹ ಬಂಧನ ಮಾಡಿದ್ದಾರೆ ಎಂದು ಆರೋಪಿಸಿದರು. ಮೇ 31-2022ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಇಬ್ಬರೊಂದಿಗೂ ಮಾತು ಕತೆಯನ್ನು ನಡೆಸಿತು. ಆ ನಂತರ ಇಬ್ಬರ ಪರವಾಗಿ ಐತಿಹಾಸಿಕ ತೀರ್ಪನ್ನು ನೀಡಿತು. ಒಟ್ಟಿಗೆ ವಾಸಿಸಲು, ಬದುಕಲು ಅವಕಾಶವನ್ನು ನೀಡಿತು.
ಹೀಗೆ ಒಂದಾದ ಇಬ್ಬರು ಕಳೆದ ಬಾರಿಯ ಮಲಯಾಳಂನ ''ಬಿಗ್ ಬಾಸ್'' ಮನೆಯನ್ನು ಜೊತೆಯಲ್ಲಿಯೇ ಪ್ರವೇಶ ಮಾಡಿದರು. ಕೇರಳಿಗರ ಹೃದಯವನ್ನೂ ಗೆದ್ದರು. ಹತ್ ಹತ್ರ 100 ದಿನ ಮನೆಯಲ್ಲಿ ಇದ್ದರು. ಅಧೀಲಾ 95ನೇ ದಿನ ಮನೆಯಿಂದ ಹೊರ ಬಂದರೆ ನೂರಾ 97ನೇ ದಿನಕ್ಕೆ ಹೊರ ಬಂದರು. ಇಂಥಾ ಅಧೀಲಾ ಮತ್ತು ನೂರಾ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಹೌದು, ಅಸಲಿಗೆ 2024ರಿಂದ ಅಧೀಲಾ ಮತ್ತು ನೂರಾಗೆ ವ್ಯಕ್ತಿಯೊಬ್ಬ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದ. ಇಬ್ಬರನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆರಂಭದಲ್ಲಿ ವ್ಯಕ್ತಿಯ ಈ ಹುಚ್ಚುತನವನ್ನು ಅಧೀಲಾ ಮತ್ತು ನೂರಾ ನಿರ್ಲಕ್ಷ್ಯ ಮಾಡಿದ್ದರು. ಯಾಕೆಂದರೆ ಈ ತರಹದ ಸಂದೇಶಗಳು ಇಬ್ಬರಿಗೂ ಹೊಸದಾಗಿರಲಿಲ್ಲ. ಆದರೆ.. ಹಿಂದೆ ಬಿದ್ದ ವ್ಯಕ್ತಿ ಕೂಡ ಸಾಮಾನ್ಯವಾಗಿರಲಿಲ್ಲ. ಬದಲಿಗೆ ಸೈಕೋ ಕಾ*ಮುಕನಾಗಿದ್ದ.
''ಬಿಗ್ ಬಾಸ್'' ಮನೆಗೆ ಇಬ್ಬರು ಹೋಗುವ ಮುನ್ನ ಇಬ್ಬರು ಜೊತೆಯಲ್ಲಿ ಒಂದು ಕಡೆ ಕೆಲಸದ ವಿಚಾರ ಮಾತನಾಡಲು ಹೋದಾಗ ಅಲ್ಲಿಯೂ ಬಂದು ಇವರಿಬ್ಬರ ಬಗ್ಗೆ ವಿಚಾರಿಸಿದ್ದ. ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ಅಧೀಲಾ ಮತ್ತು ನೂರಾ ತಮ್ಮನ್ನು ಬೆಂಬಲಿಸಿದವರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಲ್ಲಿಯೂ ಅಭಿಮಾನಿಯ ಸೋಗಿನಲ್ಲಿ ಈ ಕಾ*ಮಾಂಧ ಬಂದಿದ್ದ.
ಇದು ಸಾಲದು ಎಂಬಂತೆ ಮೊನ್ನೆ ಮೊನ್ನೆ ಇಬ್ಬರು ಕೆಲಸದ ಪ್ರಯುಕ್ತ ರೆಸಾರ್ಟ್‌ವೊಂದಕ್ಕೆ ಹೋದಾಗ ಅಲ್ಲಿಯೂ ಕೂಡ ಈ ಸೈಕೋ ಅಭಿಮಾನಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನೀವು ಇಬ್ಬರು ನನಗೆ ಬೇಕು, ನಿಮ್ಮನ್ನು ನಾನು ಮದುವೆಯಾಗಬೇಕು ಎಂದು ಹೇಳಿದ್ದಾನೆ. ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆ ಗಾಬರಿಯಾಗಿರುವ ಅಧೀಲಾ ಮತ್ತು ನೂರಾ ಸದ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಧೀಲಾ ಮತ್ತು ನೂರಾ ನಮ್ಮ ದೇಶದ ಕಾನೂನು ಈಗ ತುಂಬಾ ಪ್ರಬಲವಾಗಿದೆ. ಸೈಬರ್ ಬುಲ್ಲಿಂಗ್, ಅಥವಾ ಹೆಣ್ಣುಮಕ್ಕಳಿಗೆ ಈ ರೀತಿ ಕಿರುಕುಳ ನೀಡುವವರು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ. ನಾವು ಸುಮ್ಮನೆ ಇರುವುದಿಲ್ಲ , ಕಾನೂನು ಪ್ರಕಾರವೇ ಮುಂದೆ ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಪರಸ್ಪರ ಗೌರವ ನೀಡಿ ಉತ್ತಮ ರೀತಿಯಲ್ಲಿ ಬದುಕಿ ಬದುಕಲು ಬಿಡಿ ಎಂದು ಹೇಳಿದ್ದಾರೆ. ಸದ್ಯ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


Click it and Unblock the Notifications











