ವೀಕೆಂಡ್‌ನಲ್ಲಿ ಮಜಾ ಕೊಡಲು ಬರ್ತಿವೆ ರಿಯಾಲಿಟಿ ಶೋಗಳು, ಹೊಸ ಸಿನಿಮಾಗಳು: ಯಾವ್ಯಾವು ತಿಳಿಯಿರಿ

By ಶೃತಿ ಹರೀಶ್ ಗೌಡ

ವೀಕೆಂಡ್‌ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ರಸದೌತಣವನ್ನು ಉಣಬಡಿಸಲು ಶನಿವಾರ ಮತ್ತು ಭಾನುವಾರ ಎರಡು ರಿಯಾಲಿಟಿ ಶೋಗಳು ಆರಂಭವಾಗುತ್ತಿದೆ. ಇದರ ಜೊತೆಗೆ ಜೀ ಕನ್ನಡದಲ್ಲಿ 'ಕೌಸಲ್ಯ ಸುಪ್ರಜಾ ರಾಮ' ಪ್ರಸಾರ ಕಾಣುತ್ತಿದೆ. ಸರಿಗಮಪ ಸೀಸನ್ 20 ಸಹ ಇಂದು ಸಂಜೆ 7.30ರಿಂದ ಪ್ರಸಾರವನ್ನು ಕಾಣಲಿದ್ದು ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಲಿದ್ದಾರೆ ಹಾಡುಗಾರರು. ಈ ವೀಕೆಂಡ್ ಅನ್ನು ಬಹಳಷ್ಟು ವಿಶೇಷವಾಗಿ ಮಾಡಲು ಭಾನುವಾರ ಸಂಜೆಯಿಂದ ಬಿಗ್ ಬಾಸ್ ಸೀಸನ್ 10 ಪ್ರಸಾರವನ್ನು ಕಾಣಲಿದ್ದು ಪ್ರೇಕ್ಷಕರು ಕಾಯುತ್ತಾ ಇದ್ದಾರೆ.

ಕೌಸಲ್ಯ ಸುಪ್ರಜಾ ರಾಮಾ ಒಂದೊಳ್ಳೆ ಕೌಟುಂಬಿಕ ಚಲನಚಿತ್ರವಾಗಿದ್ದು, ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಜೊತೆಗೆ ದೊಡ್ಡ ತಾರಾಗಣವೇ ಅಭಿನಯಿಸಿದ್ದಾರೆ.‌ ಸಿಕ್ಕಾಪಟ್ಟೆ ಕಾಮಿಡಿಯೊಂದಿಗೆ ಪ್ರೇಕ್ಷಕರಿಗೆ ಮನರಂಜನೆ‌ ನೀಡಲು ಶನಿವಾರ ಸಂಜೆ 4.30ಕ್ಕೆ ಪ್ರಸಾರ ಕಾಣಲಿದೆ. ಈ ವರ್ಷವೇ ತೆರೆಗೆ ಬಂದಿದ್ದು, ಇದರಲ್ಲಿ ಬರುವ ನೈಂಟಿ‌ ಹಾಕು ಕಿಟ್ಟಪ್ಪ ಹಾಡು ಸಹ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದಿತ್ತು.‌ ಈ ಹಾಡನ್ನು ರಿಲೀಸ್ ಮಾಡಿದಾಗ ಬಹಳಷ್ಟು ಜನರು ರೀಲ್ಸ್ ಮಾಡುವ ಮೂಲಕ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‌ಮಿಲನ ನಾಗರಾಜ್ ಸಹ ವೇದಿಕೆ ಮೇಲೆ‌ ಈ ಹಾಡಿಗೆ ರೀಲ್ಸ್ ಮಾಡಿದವರ ಜೊತೆಗೆ ಹೆಜ್ಜೆ ಹಾಕಿದ್ದರು.

Entertainment Weekend Reality Show, Singing Show, Dance Karnataka Dance, Bigg Boss

ಬಿಗ್ ಬಾಸ್ ಸೀಸನ್ 10 ಯಾವಾಗ ಪ್ರಸಾರ ಕಾಣುತ್ತದೆ ಎಂದು ಕಾತುರದಿಂದ ಕಾಯುತ್ತಾ ಇದ್ದರು.‌ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರ್ತಾರೆ ಅದರಲ್ಲಿ‌ ಸೆಲೆಬ್ರೆಟಿಷ್ ಎಷ್ಟು ಜನ, ಜನ ಸಾಮಾನ್ಯರು ಎಷ್ಟು ಜನ ,‌ ಸಮಾಜಮುಖಿ ಕಾರ್ಯ ಮಾಡಿದವರು ಯಾರು ಬರ್ತಾರೆ, ರೀಲ್ಸ್ ಮಾಡಿ ಫೇಮಸ್ ಆಗಿರುವವರಲ್ಲಿ ಹಲವರು ಸಹ ಬಿಗ್ ಬಾಸ್‌ಗೆ ಹೋಗುವ ತವಕದಲ್ಲಿದ್ದರು.‌ ಈಗ ಯಾರಿಗೆಲ್ಲಾ ಚಾನ್ಸ್ ಸಿಕ್ಕಿದೆ ಎಂಬುದನ್ನು ನೋಡಬೇಕು.‌ ಇನ್ನೂ ಸಹ ಯಾರು ಯಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂಬುದು ಸಪ್ರೈಸ್ ಆಗಿದೆ.

ಶುರುವಾಗಲಿದೆ ಸರಿಗಮಪ ಸೀಸನ್-20

ಪ್ರತಿಭೆ ಪ್ರದರ್ಶನಕ್ಕಿಟ್ಟ ದೇಶ-ವಿದೇಶದ ಅಭ್ಯರ್ಥಿಗಳು

ಝೀ ಕನ್ನಡದಲ್ಲಿ ಸರಿಗಮಪ ಸೀಸನ್ 20 ಆರಂಭವಾಗಲಿದೆ. ಆಡಿಶನ್‌ನಲ್ಲಿ ಇಷ್ಟು ದಿನ ರಾಜ್ಯ-ಹೊರ ರಾಜ್ಯದ ಗಾಯಕರಷ್ಟೇ ಇರುತ್ತಿದ್ದರು. ಈಗ ದೇಶ-ವಿದೇಶಗಳಿಂದ ಬಂದಂತವರು ಕಂಟೆಸ್ಟೆಂಟ್‌ಗಳಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಈ ಬಾರಿ ವರ್ಲ್ಡ್ ವೈಡ್‌ನಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವ ಪ್ರಯತ್ನಕ್ಕೆ ಜೀ ಕನ್ನಡ ಕೈಹಾಕಿದೆ. ಈಗಾಗಲೇ 19 ಸೀಸನ್ಗಳನ್ನ ಮುಗಿಸಿರುವ ಸರಿಗಮಪ ಈಗ 20ನೇ ಸೀಸನ್‌ಗೆ ಕಾಲಿಟ್ಟಿದೆ.‌

Entertainment Weekend Reality Show, Singing Show, Dance Karnataka Dance, Bigg Boss

ಈ ಬಾರಿಯೂ ಜಡ್ಜ್ ಆಗಿ ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ರಾಜೇಶ್ ಕೃಷ್ಣನ್ ರವರು ಈ ಸೀಸನ್‌ಗೆ ಬರಬೇಕಾಗಿತ್ತು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಂದಿನಂತೆ ಅನುಶ್ರೀ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ಸಂಗೀತ ಪ್ರಿಯರಿಗೆ ಸರಿಗಮಪ ಸೀಸನ್-20 ಮನರಂಜನೆೆಯನ್ನು ನೀಡಲಿದೆ.

ಭಾನುವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೆಮಿ ಫೈನಲ್ ಇಂದು ಯಾರ ಮುಡಿಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಿರೀಟ ಏರಲಿದೆ ಎಂಬುದೇ ಕುತೂಹಲವಾಗಿದೆ. ಇದಕ್ಕಾಗಿ ಎಲ್ಲರೂ ಸಹ ಚೆನ್ನಾಗಿ ಕಸರತ್ತು ನಡೆಸಿದ್ದು ಟ್ರೋಫಿಯನ್ನು ಗೆಲ್ಲಬೇಕು ಎಂಬ ಗುರಿ ಹೊಂದಿದ್ದಾರೆ. ಸೆಮಿ ಫೈನಲ್‌ನಲ್ಲಿ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡ ಸಜ್ಜಾಗಿದೆ.

ಭಾನುವಾರ ಸಂಜೆಯಿಂದ ಬಿಗ್ ಬಾಸ್ ಫೀವರ್ ಶುರು

ಎಂದಿನಂತೆ ಕಿಚ್ಚ ಸುದೀಪ್‌ ಅವರ ನಿರೂಪಣೆಯಲ್ಲಿ ಬಿಗ್ ಬಾಸ್ 10 ಫೀವರ್ ಭಾನುವಾರ ಸಂಜೆಯಿಂದ ಶುರುವಾಗಲಿದೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಕಲರ್ಸ್ ಕನ್ನಡ ಮಾಡಿಕೊಂಡಿದ್ದು, ಈ ಬಾರಿ ಯಾರು ಕಂಟೆಸ್ಟೆಂಟ್‌ಗಳಾಗಿ ಬರುತ್ತಿದ್ದಾರೆ ಎಂಬುದೇ ಸಾಕಷ್ಟು ಕುತೂಹಲವನ್ನ ಕೆರಳಿಸಿದೆ. ಚಾರ್ಲಿ 777 ಪೆಟ್ ಕೂಡ ಈ ಬಾರಿ ಪ್ರಮುಖ ಆಕರ್ಷಣೆಯವಾಗಿದೆ. ಮನುಷ್ಯರ ಜೊತೆಯಲ್ಲಿ ಪೆಟ್ ಯಾವ ರೀತಿ ಸ್ಪರ್ಧೆ ಮಾಡಿ ಗೆಲ್ಲುತ್ತದೆ ಎಂಬುದೇ ಈಗಿರುವ ಕುತೂಹಲವಾಗಿದೆ.

More from Filmibeat

English summary
Entertainment weekends reality show, singing show, dance Karnataka dance, bigboss .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X