ಮೊದಲ ಸಲ ಟಿವಿಯಲ್ಲಿ ಬರುತ್ತಿದೆ 'ಎರಡನೇ ಸಲ' ಸಿನಿಮಾ
ಮಠ ಖ್ಯಾತಿಯ ಗುರುಪ್ರಸಾದ್ ನಿರ್ದೇಶನ ಮಾಡಿದ್ದ 'ಎರಡನೇ ಸಲ' ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ. ಇದೇ ಮೊದಲ ಸಲ 'ಎರಡನೇ ಸಲ' ಸಿನಿಮಾ ಟಿವಿಯಲ್ಲಿ ಬರಲಿದೆ.
ನಟ ಧನಂಜಯ್ ಮತ್ತು ಸಂಗೀತ ಭಟ್ 'ಎರಡನೇ ಸಲ' ಚಿತ್ರದಲ್ಲಿ ನಟಿಸಿದ್ದರು. ಸಂಗೀತ ಭಟ್ ಸಿಕ್ಕಾಪಟ್ಟೆ ಹಾಟ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿರಿಯ ನಟಿ ಲಕ್ಷ್ಮಿ ಚಿತ್ರದಲ್ಲಿ ತಾಯಿ ಆಗಿ ಅಭಿನಯಿಸಿದ್ದರು. ಇನ್ನೂ ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದರು. ಸಿಂಪಲ್ ಕಥೆಯೊಂದಿಗೆ ಸಖತ್ ಮನರಂಜನೆ ಈ ಚಿತ್ರದಲ್ಲಿ ಇತ್ತು.

'ಎರಡನೇ ಸಲ' ಸಿನಿಮಾದ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೇ ಅಕ್ಟೋಬರ್ 28 ಅಂದರೆ ಮುಂದಿನ ಶನಿವಾರ ಸಂಜೆ 8 ಗಂಟೆಗೆ ಚಿತ್ರ ಪ್ರಸಾರ ಆಗಲಿದೆ. ಅಂದಹಾಗೆ, ಗುರುಪ್ರಸಾದ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದೆ.
More from Filmibeat
English summary
'Eradane Sala' kannada movie will telecast in Colors Kannada on October 28th.


Click it and Unblock the Notifications











