Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಪುಟ್ಟಗೌರಿ' ಖ್ಯಾತಿಯ ಮಹೇಶ್
ಕಿರುತೆರೆಯಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಈ ವರ್ಷದಲ್ಲಿ ಅನೇಕ ಕಿರುತೆರೆ ನಟ-ನಟಿಯರು ಹಸೆಮಣೆ ಏರಿದ್ದಾರೆ. ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಸ್ಟಾರ್ಸ್ ಈಗ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಮದುವೆಯಲ್ಲಿ ಈಗ 'ಪುಟ್ಟಗೌರಿ' ಖ್ಯಾತಿಯ ನಟ ಮಹೇಶ್ ಮದುವೆ ಕೂಡ ಸೇರ್ಪಡೆಯಾಗುತ್ತಿದ್ದಾರೆ.
ಇತ್ತೀಚಿಗಷ್ಟೆ 'ಕುಲವದು' ಖ್ಯಾತಿಯ ನಟಿ ಧನ್ಯಾ, 'ಸರ್ವಮಂಗಳ ಮಾಂಗಲ್ಯೇ' ಯ ನಟಿ ಐಶ್ವರ್ಯ, 'ಸೀತಾ ವಲ್ಲಬ' ಖ್ಯಾತಿಯ ನಟ ಜಗನ್, 'ಕುಲವದು' ಖ್ಯಾತಿಯ ಅಮೃತಾ ಮತ್ತು 'ನಮ್ಮನೆ ಯುವರಾಣಿ' ಖ್ಯಾತಿಯ ರಘು ಅವರು ಈ ವರ್ಷ ಮದುವೆ ಸಂಭ್ರಮದಲ್ಲಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಕುಲವಧು' ಧನ್ಯಾ: ಹುಡುಗ ಇವರೇ
ಕಿರುತೆರೆಯಂತೆ ಸ್ಯಾಂಡಲ್ ವುಡ್ ನಲ್ಲೂ ಮದುವೆಯ ಹಬ್ಬ ಜೋರಾಗಿದೆ. ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್ ಮಗಳು ಮದುವೆಗೆ ಅದ್ಧೂರಿ ಸಿದ್ದತೆ ನಡೆಯುತ್ತಿದ್ರೆ ಮತ್ತೊಂದೆಡೆ ಡಾ.ರಾಜ್ ಮೊಮ್ಮಗನ ಮದುವೆ ಕೂಡ ಜೋರಾಗಿಯೆ ನಡೆಯುತ್ತಿದೆ. ಕಿರುತೆರೆಯಲ್ಲಿ ಈ ವರ್ಷ ಅನೇಕ ಸ್ಟಾರ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಓದಿ..

'ಪುಟ್ಟಗೌರಿ' ಖ್ಯಾತಿಯ ಮಹೇಶ್ ಮದುವೆ
'ಪುಟ್ಟಗೌರಿ' ಧಾರಾವಾಹಿಯ ಮೂಲಕವೆ ಮನೆಮಾತಾಗಿದ್ದ ಮಹೇಶ್ ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಮಹೇಶ್ ನಿಜವಾದ ಹೆಸರು ರಕ್ಷ್. ಆದ್ರೆ ಇಡೀ ಕರ್ನಾಟಕಕ್ಕೆ ಮಹೇಶ್ ಅಂತಾನೆ ಖ್ಯಾತಿ ಗಳಿಸಿರುವ ರಕ್ಷ್ ಬಹುಕಾಲದ ಗೆಳತಿ ಅನುಷಾ ಜೊತೆ ಹಸೆಮಣೆ ಏರುತ್ತಿದ್ದಾರೆ. ರಕ್ಷ್ ಹೆಸರು ಈ ಮೊದಲು ರಕ್ಷಿತ್ ಅಂತ ಇತ್ತು ಆದ್ರೀಗ ರಕ್ಷ್ ಅಂತ ಬದಲಾಸಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ನಟ ಜಗನ್

ಅರಮನೆ ಮೈದಾನದಲ್ಲಿ ನಡೆಯಲಿದೆ ಮದುವೆ
ರಕ್ಷ್ ಹಾಗೂ ಅನುಷಾ ಮದುವೆ ಬೆಂಗಳೂರಿನ ಅರಮನೆ ಮೈದಾನದ ಶೇಶ್ ಮಹಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅನುಷಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷ್ ಇದೆ ತಿಂಗಳು 26ರಂದು ಸಪ್ತಪದಿ ತುಳಿಯಲಿದ್ದಾರೆ. ರಕ್ಷ್ ಇನ್ಸ್ಟಾಗ್ರಾಮ್ ನಲ್ಲಿ ಆಮಂತ್ರಣ ಪತ್ರಿಕೆ ಶೇರ್ ಮಾಡುವ ಮೂಲಕ "ಇದು ನನ್ನ ಪ್ರೀತಿಯ ಜನರಿಗೆ ಮದುವೆ ಆಮಂತ್ರಣ ಪತ್ರಿಕೆಯಾಗಿದೆ. ಇದೆ ತಿಂಗಳು 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು" ಎಂದು ಬರೆದುಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಗನ್
ಕಿರುತೆರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗನ್ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗನ್ ಮತ್ತು ರಕ್ಷಿತಾ ಇಬ್ಬರು ಸುಮಾರು ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಪ್ರೀತಿ ಈಗ ಇಬ್ಬರನ್ನು ಪತಿ ಪತ್ನಿಯರನ್ನಾಗಿ ಮಾಡಿದೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕನ್ವೆಂಷನ್ ಹಾಲ್ ನಲ್ಲಿ ಈ ಜೋಡಿ ಹಸೆಮಣೆ ಏರಿದೆ.

ಸಪ್ತಪದಿ ತುಳಿದ 'ಕುಲವದು' ವಚನಾ
'ಕುಲವದು' ಧಾರಾವಾಹಿ ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ಇತ್ತೀಚಿಗಷ್ಟೆ ಹಸೆಮಣೆ ಏರಿದ್ದಾರೆ. 'ನಮ್ಮನೆ ಯುವರಾಣಿ' ಖ್ಯಾತಿಯ ನಟ ರಘು ಅವರ ಜೊತೆ ವಚನಾ ಸಪ್ತಪದಿ ತುಳಿದಿದ್ದಾರೆ. ಈ ಜೋಡಿ ಮೊದಲು 'ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಗ ರಿಯಲ್ ಲೈಫ್ ನಲ್ಲೂ ಒಂದಾಗಿದ್ದಾರೆ.

ಹೊಸಬಾಳಿನ ಹೊಸಿಲಲ್ಲಿ ಕುಲವದು ಧನ್ಯಾ
ಇತ್ತೀಚಿಗಷ್ಟೆ 'ಕುಲವದು' ಖ್ಯಾತಿಯ ನಟಿ ದೀಪಿಕಾ ಕೂಡ ಮದುವೆಯಾಗುವ ಬಗ್ಗೆ ಮಾಹಿತಿ ನೀಡಿದ್ರು. ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗುತ್ತಿರುವ ಹುಡುಗನ ಫೋಟೋವನ್ನು ಶೇರ್ ಮಾಡುವ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ್ರು. ನಟ ಆಕರ್ಷ್ ಜೊತೆ ದೀಪಿಕಾ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ''ನನ್ನ ಗೆಳೆಯನ ಜೊತೆ ಇದು ನಮ್ಮ ಮೊದಲ ಪೋಸ್ಟ್. ಏಳೇಳು ಜನ್ಮದಲ್ಲೂ ಏಳು ಹೆಜ್ಜೆ ಹಾಕುವುದು ಇವರ ಜೊತೆಯೇ'' ಎಂದು ಕುಲವಧು ಧನ್ಯಾ ಅಲಿಯಾಸ್ ದೀಪಿಕಾ ತಮ್ಮ ಹುಡುಗನನ್ನ ಪರಿಚಯ ಮಾಡಿದ್ದಾರೆ.ಆದ್ರೆ ಮದುವೆ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.

ನಿಶ್ಚಿತಾರ್ಥ ಮಾಡಿಕೊಂಡ ಐಶ್ವರ್ಯಾ
'ಸರ್ವಮಂಗಳ ಮಾಂಗಲ್ಯೆ' ಕೂಡ ಒಂದು. ಈ ಧಾರಾವಾಹಿಯ ನಾಯಕಿ ಐಶ್ವರ್ಯಾ ಕೂಡ ಮದುವೆ ತಯಾರಿಯಲ್ಲಿದ್ದಾರೆ. ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಐಶ್ವರ್ಯಾ ಇತ್ತೀಚಿಗಷ್ಟೆ ಗೆಳೆಯ ಹರಿ ವಿನಯ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ತೀರಾ ಖಾಸಗಿಯಾಗಿ ನಡೆದ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಹರಿ ವಿನಯ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಅಧಿಕೃತವಾಗಿ ಎಂಗೇಜ್ ಆದ ಐಶ್ವರ್ಯಾ ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ.