For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಪುನೀತ್ 'ನಿನ್ನಿಂದಲೇ' ನಟಿ: ಜನಪ್ರಿಯ ಧಾರಾವಾಹಿಯಲ್ಲಿ ನಟನೆ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಎರಿಕಾ ಫರ್ನಾಂಡಿಸ್ ಎಲ್ಲರಿಗೂ ಚಿರಪರಿಚಿತರು. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಎರಿಕಾ ಬಳಿಕ ಮತ್ತೆ ಕಾಣಿಸಿಕೊಂಡಿಲ್ಲ. ನಿನ್ನಿಂದನೇ ಸಿನಿಮಾ ನಂತರ ಎರಿಕಾ ಗಣೇಶ್ ಜೊತೆ ಬುಗುರಿ ಸಿನಿಮಾದಲ್ಲಿ ಮಿಂಚಿದ್ದರು.

  2015ರಲ್ಲಿ ರಿಲೀಸ್ ಆಗಿದ್ದ ಬುಗುರಿ ಸಿನಿಮಾ ಬಳಿಕ ಎರಿಕಾ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರಲಿಲ್ಲ. ಇದೀಗ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವಿಶೇಷ ಎಂದರೆ ಈ ಬಾರಿ ಎರಿಕಾ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ ಎನ್ನಲಾಗುತ್ತಿದೆ. ಯಾವ ಧಾರಾವಾಹಿ, ಯಾವ ಪಾತ್ರ ಇಲ್ಲಿದೆ ಮಾಹಿತಿ..

  ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಎರಿಕಾ

  ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಎರಿಕಾ

  ಹೌದು, ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ 'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ ನಟಿ ಎರಿಕಾ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಎರಿಕಾ ರಾಜನಂದಿನಿ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ರಾಜನಂದಿನಿ ಧಾರಾವಾಹಿಯ ನಾಯಕ ಆರ್ಯವರ್ಧನ್ ಮೊದಲ ಪತ್ನಿಯ ಪಾತ್ರ. ಆರ್ಯವರ್ಧನ್ ಪತ್ನಿಯಾಗಿ ಎರಿಕಾ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ರೆಟ್ರೋ ಶೈಲಿಯಲ್ಲಿ ಫೋಟೋಶೂಟ್

  ರೆಟ್ರೋ ಶೈಲಿಯಲ್ಲಿ ಫೋಟೋಶೂಟ್

  ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎರಿಕಾ, ನಟ ಅನಿರುದ್ಧ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾರೆ ಎನ್ನಲಾಗಿದೆ. ರೆಟ್ರೋ ಶೈಲಿಯಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಫೋಟೋಶೂಟ್ ಆಗಿದ್ದು, ಸದ್ಯದಲ್ಲೇ ಧಾರಾವಾಹಿ ಚಿತ್ರೀಕರಣದಲ್ಲಿ ಎರಿಕಾ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಎರಿಕಾ ಭಾಗದ ಎಪಿಸೋಡ್ ಸದ್ಯದಲ್ಲೇ ಪ್ರಸಾರವಾಗಲಿದೆ.

  ಮತ್ತಷ್ಟು ರೋಚಕವಾಗಿರಲಿದೆ ಧಾರಾವಾಹಿ

  ಮತ್ತಷ್ಟು ರೋಚಕವಾಗಿರಲಿದೆ ಧಾರಾವಾಹಿ

  ಎರಿಕಾ ಎಂಟ್ರಿ ಧಾರಾವಾಹಿಯಲ್ಲಿ ದೊಡ್ಡ ತಿರುವು ಪಡೆದುಕೊಳ್ಳಲಿದೆ. ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಧಾರಾವಾಹಿ ಜೊತೆ ಜೊತೆಯಲ್ಲಿ, ಎರಿಕಾ ಎಂಟ್ರಿಯಿಂದ ಮತ್ತಷ್ಟು ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಹಿಂದಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದ ಎರಿಕಾ

  ಹಿಂದಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದ ಎರಿಕಾ

  ನಟಿ ಎರಿಕಾ ಫರ್ನಾಂಡಿಸ್ ಕನ್ನಡ ಸಿನಿಮಾಗಳ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ಮಿಂಚಿದ್ದಾರೆ. ಸಿನಿಮಾ ಬಳಿಕ ಎರಿಕಾ ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಹಿಂದಿಯಲ್ಲಿ ಎರಿಕಾ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಹಿಂದಿ ಧಾರಾವಾಹಿ ಪ್ರಸಾರ ಮುಕ್ತಾಯವಾಗಿದೆ. ಇದೀಗ ಕನ್ನಡ ಕಿರುತೆರೆ ಕಡೆ ಮುಖಮಾಡಿದ್ದಾರೆ. ರಾಜನಂದಿನಿಯಾಗಿ ಎರಿಕಾ ಎಲ್ಲರ ಮನಗೆಲ್ಲುತ್ತಾರಾ ಎಂದು ಕಾದುನೋಡಬೇಕು.

  English summary
  Ninnindale fame actress Erica Fernandes likely to play Rajnandini role in Jote Joteyali Kannada serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X