For Quick Alerts
  ALLOW NOTIFICATIONS  
  For Daily Alerts

  'ನಿನ್ನಿಂದಲೇ' ಎಂದು ಪುನೀತ್ ಜೊತೆ ರೊಮ್ಯಾನ್ಸ್ ಮಾಡಿದ್ದ ಎರಿಕಾ ಈಗೆಲ್ಲಿ.?

  By Harshitha
  |
  ಎಲ್ಲಿದ್ದಾಳೆ ನಿನ್ನಿಂದಲೇ ನಟಿ..! | Filmibeat Kannada

  2014 ರಲ್ಲಿ ಬಿಡುಗಡೆ ಆದ 'ನಿನ್ನಿಂದಲೇ' ಸಿನಿಮಾ ನಿಮಗೆ ನೆನಪಿದೆ ತಾನೆ.? ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಎರಿಕಾ ಫರ್ನಾಂಡಿಸ್ ಅಭಿನಯದ ಈ ಚಿತ್ರ ಬಹುತೇಕ ಅಮೇರಿಕಾದಲ್ಲಿಯೇ ಚಿತ್ರೀಕರಣಗೊಂಡಿತ್ತು.

  'ನಿನ್ನಿಂದಲೇ' ಸಿನಿಮಾ ಬಹು ನಿರೀಕ್ಷೆ ಹುಟ್ಟಿಸಿದ್ದರೂ, ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಅಂತಹ ಕಮಾಲ್ ಮಾಡಲಿಲ್ಲ. 'ನಿನ್ನಿಂದಲೇ' ಬಳಿಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಎರಿಕಾ ಫರ್ನಾಂಡಿಸ್ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಬುಗುರಿ' ಸಿನಿಮಾದಲ್ಲಿ ಅಭಿನಯಿಸಿದರು.

  ತೆಲುಗು ಹಾಗೂ ತಮಿಳಿನಲ್ಲೂ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡ ಎರಿಕಾ ಫರ್ನಾಂಡಿಸ್ ಈಗೆಲ್ಲಿದ್ದಾರೆ.? ಏನ್ ಮಾಡ್ತಿದ್ದಾರೆ ಅನ್ನೋದು ನಿಮಗೆ ಗೊತ್ತಾ.?

  ಮಂಗಳೂರು ಮೂಲದ ಎರಿಕಾ ಫರ್ನಾಂಡಿಸ್ ಸದ್ಯ ಹಿಂದಿ ಕಿರುತೆರೆಯಲ್ಲಿ ಬಿಜಿ ನಟಿಯಾಗಿದ್ದಾರೆ. ಈಗಾಗಲೇ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದ ಎರಿಕಾ ಇದೀಗ ಏಕ್ತಾ ಕಪೂರ್ ನಿರ್ಮಾಣದ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಹಿಂದಿ ಕಿರುತೆರೆ ಪ್ರವೇಶಿಸಿದ ಎರಿಕಾ

  ಹಿಂದಿ ಕಿರುತೆರೆ ಪ್ರವೇಶಿಸಿದ ಎರಿಕಾ

  ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ನಟಿ ಎರಿಕಾ ಫರ್ನಾಂಡಿಸ್ ಹಿಂದಿ ಕಿರುತೆರೆ ಪ್ರವೇಶಿಸಿದರು. 'ಕುಚ್ ರಂಗ್ ಪ್ಯಾರ್ ಕೆ ಏಸೇ ಭಿ' ಎಂಬ ಧಾರಾವಾಹಿಯಲ್ಲಿ ಡಾ.ಸೋನಾಕ್ಷಿ ಬೋಸ್ ಆಗಿ ಎರಿಕಾ ಫರ್ನಾಂಡಿಸ್ ನಟಿಸಿದರು.

  ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್

  ಪ್ರಶಸ್ತಿ ಪಡೆದ ಎರಿಕಾ ಫರ್ನಾಂಡಿಸ್

  ಪ್ರಶಸ್ತಿ ಪಡೆದ ಎರಿಕಾ ಫರ್ನಾಂಡಿಸ್

  'ಕುಚ್ ರಂಗ್ ಪ್ಯಾರ್ ಕೆ ಏಸೇ ಭಿ' ಧಾರಾವಾಹಿಯಲ್ಲಿನ ನಟನೆಗೆ ನಟಿ ಎರಿಕಾ ಫರ್ನಾಂಡಿಸ್ ಗೆ ಝೀ ಗೋಲ್ಡನ್ ಅವಾರ್ಡ್ಸ್ ಹಾಗೂ ಏಷಿಯನ್ ವ್ಯೂವರ್ಸ್ ಟೆಲಿವಿಷನ್ ಅವಾರ್ಡ್ಸ್ ಪ್ರಶಸ್ತಿಗಳು ಲಭಿಸಿದವು.

  ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ

  ಬಾಕ್ಸ್ ಕ್ರಿಕೆಟ್ ಲೀಗ್ ನಲ್ಲಿ ಎರಿಕಾ

  ಬಾಕ್ಸ್ ಕ್ರಿಕೆಟ್ ಲೀಗ್ ನಲ್ಲಿ ಎರಿಕಾ

  ಕಲರ್ಸ್ ವಾಹಿನಿ ಹಾಗೂ ಎಂಟಿವಿಯಲ್ಲಿ ಪ್ರಸಾರವಾದ 'ಬಾಕ್ಸ್ ಕ್ರಿಕೆಟ್ ಲೀಗ್-2' ಮತ್ತು 'ಬಾಕ್ಸ್ ಕ್ರಿಕೆಟ್ ಲೀಗ್-3'ನಲ್ಲಿ ಸ್ಪರ್ಧಿಯಾಗಿ ಎರಿಕಾ ಫರ್ನಾಂಡಿಸ್ ಭಾಗವಹಿಸಿದರು.

  ಏಕ್ತಾ ಕಪೂರ್ ಸೀರಿಯಲ್ ನಲ್ಲಿ ಚಾನ್ಸ್ ಪಡೆದ ಎರಿಕಾ

  ಏಕ್ತಾ ಕಪೂರ್ ಸೀರಿಯಲ್ ನಲ್ಲಿ ಚಾನ್ಸ್ ಪಡೆದ ಎರಿಕಾ

  ಇದೀಗ ಏಕ್ತಾ ಕಪೂರ್ ನಿರ್ಮಾಣದ 'ಕಸೌತಿ ಝಿಂದಗಿ ಕಿ-2' ಧಾರಾವಾಹಿಯಲ್ಲಿ ಎರಿಕಾ ಫರ್ನಾಂಡಿಸ್ ಅಭಿನಯಿಸುತ್ತಿದ್ದಾರೆ. ಕೋಲ್ಕತ್ತದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ದೇವಿಯ ದರ್ಶನ ಪಡೆದ್ದಾರೆ ನಟಿ ಎರಿಕಾ ಫರ್ನಾಂಡಿಸ್. ಒಟ್ನಲ್ಲಿ ಬೆಳ್ಳಿತೆರೆ ಮೇಲೆ ಅಷ್ಟು ಬೇಡಿಕೆ ಕಂಡುಕೊಳ್ಳದ ಎರಿಕಾ, ಹಿಂದಿ ಕಿರುತೆರೆಯಲ್ಲಿ ಮಾತ್ರ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.

  English summary
  Kannada Actress Erica Fernandes to act in Ekta Kapoor's serial 'Kasauti Zindagi Kay 2'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X