For Quick Alerts
  ALLOW NOTIFICATIONS  
  For Daily Alerts

  ದಿ ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮನ್; ಎಲ್ಲರನ್ನೂ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ 'ನಿನ್ನಿಂದಲೇ' ನಟಿ ಎರಿಕಾ

  |

  2020ನೇ ಸಾಲಿನ ದಿ ಟೈಮ್ಸ್ ಮೋಸ್ಟ್ ಡಿಸೈರೆಬಲ್ ವುಮನ್ ಟಿವಿ ವಿಭಾಗದ 20 ಜನರ ಪಟ್ಟಿ ಬಿಡುಗಡೆಯಾಗಿದ್ದು, ನಟಿ ಎರಿಕಾ ಫರ್ನಾಂಡಿಸ್ ಅಗ್ರಸ್ಥಾನ ಪಡೆದಿದ್ದಾರೆ. ಇತ್ತೀಚಿಗಷ್ಟೆ ಟಿವಿ ವಿಭಾಗದ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿ ಬಿಡುಗಡೆಯಾಗಿದ್ದು ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲ ಮೊದಲ ಸ್ಥಾನ ಪಡೆದಿದ್ದರು. ಇದೀಗ ಮಹಿಳಾ ವಿಭಾಗದಲ್ಲಿ ಎರಿಕಾ ಮೊದಲ ಸ್ಥಾನಕ್ಕೇರಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾ ಮೂಲಕ ಕನ್ನಡದಲ್ಲಿ ಮಿಂಚಿದ್ದ ನಟಿ ಎರಿಕಾ ಫರ್ನಾಂಡಿಸ್ ಹಿಂದಿ ಕಿರುತೆರೆ ಲೋಕದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಧಾರಾವಾಹಿ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದ ಎರಿಕಾ ಕಿರುತೆರೆಯ ಎಲ್ಲಾ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

  ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್

  ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಾದ ನಿಯಾ ಶರ್ಮಾ, ಜಾಸ್ಮಿನ್ ಭಾಸಿನ್, ಜನ್ನಿಫರ್ ವಿಂಗೆಟ್, ಸರಭಿ ಚಂದ್ನಾ ಸೇರಿದಂತೆ ಅನೇಕ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಪಡೆದಿದ್ದಾರೆ. ಈ ಬಗ್ಗೆ ಎರಿಕಾ ಸಾಮಾಜಿಕ ಜಾಲತಾಣದ ಮೂಲಕ ಸಂತಸ ವ್ಯಕ್ತಪಡಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

  ಇತ್ತೀಚಿಗಷ್ಟೆ ಎರಿಕಾ ಕನ್ನಡದ ಕಿರುತೆರೆಗೆ ಬರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಇದು ವದಂತಿ ಅಷ್ಟೆ ಎನ್ನುವ ಸತ್ಯ ಬಹಿರಂಗವಾದ ಬಳಿಕ ವೀಕ್ಷಕರಿಗೆ ನಿರಾಸೆಯಾಗಿತ್ತು.

  English summary
  Actress Erica Fernandes tops the most desirable women on Tv list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X