ನಿನ್ನ ವಿಡಿಯೋ ಇದೆ ನನ್ನ ಹತ್ರ ಎಂದ ವ್ಯಕ್ತಿಗೆ ಬೆಂಕಿ ಉತ್ತರ ನೀಡಿದ ಸೋನು ಗೌಡ ; ರೀಲ್ಸ್ ರಾಣಿಯ ರಿಪ್ಲೈ ವೈರಲ್

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನು ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಪ್ರಸ್ತುತ ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆಯಿಂದ ಚಿತ್ರರಂಗದಲ್ಲಿನ ಮಹಿಳೆಯರಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ. ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಹಾಗಂಥ ಅಂದಿದ್ದನ್ನೆಲ್ಲ ಸಹಿಸಿಕೊಳ್ಳಬೇಕು ಅಂತೇನು ಇಲ್ಲವಲ್ಲ. ಹೀಗಾಗಿಯೇ ಹಲವು ನಾಯಕಿಯರು ಅಲ್ಲಲ್ಲೇ ಗ್ರಹಚಾರ ಬಿಡಿಸುತ್ತಾರೆ. ಉದಾಹರಣೆಗೆ ಸೋನು ಶ್ರೀನಿವಾಸ್ ಗೌಡ.

Etkond Pooje Madu Sonu Srinivas Gowda Gives a Savage Reply to a Troll

ಹೌದು, ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು, ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದ ಸೋನು ಗೌಡ ಅವರ ಖಾಸಗಿ ವಿಡಿಯೋವೊಂದು ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು. ಕರುನಾಡಿನೆಲ್ಲೆಡೆ ಚರ್ಚೆಗೀಡಾಗಿತ್ತು.

ಇನ್ನೂ ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಹಲವರು ಆ ವಿಡಿಯೋ ನನ್ನದಲ್ಲ ಎಂಬ ವಾದ ಮಾಡುತ್ತಾರೆ. ತಂತ್ರಜ್ಞಾನದ ದುರ್ಬಳಕೆ ಎನ್ನುತ್ತಾರೆ. ಆದರೆ.. ಸೋನು ಗೌಡ ಆ ವಿಡಿಯೋ ತನ್ನದೇ ಎಂದು ಹಿಂದೆ ಒಪ್ಪಿಕೊಂಡಿದ್ದರು. ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಆ ವಿಡಿಯೋ ಹೊರ ಬಂದಿದ್ಹೇಗೆ ಎಂದು ಹೇಳಿ ಕಣ್ಣೀರನ್ನು ಕೂಡ ಹಾಕಿದ್ದರು.

ಇದೆಲ್ಲವೂ ಆಗಿ ವರ್ಷಗಳೇ ಆಗಿವೆ. ಆದರೂ ಕೂಡ ಹಲವರು ಇವತ್ತು ಸೋನು ಗೌಡ ಅವರನ್ನು ಆ ವೈರಲ್ ವಿಡಿಯೋ ನೆಪದಲ್ಲಿ ಟ್ರೋಲ್ ಮಾಡುತ್ತಾರೆ. ಹೀನಾಮಾನವಾಗಿ ಕಾಮೆಂಟ್ ಮಾಡುತ್ತಾರೆ. ಅಸಭ್ಯವಾಗಿ ಅಶ್ಲೀಲವಾಗಿ ತೆಗಳುತ್ತಾರೆ. ಹೀಗೆ ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬನಿಗೆ ಸೋನು ಗೌಡ ಸದ್ಯ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಹೌದು, ಅಸಲಿಗೆ ಸೋನು ಗೌಡ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಮೋಜು ಮಸ್ತಿ ಮಾಡುತ್ತಿದ್ದಾರೆ. ಅಲ್ಲಿನ ತಮ್ಮ ದಿನಚರಿಯನ್ನು ತಮ್ಮನ್ನು ಇಷ್ಟ ಪಡುವ ತಮ್ಮ ಹಿಂಬಾಲಕರಿಗಾಗಿ ಚಾಚು ತಪ್ಪದೇ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ತಮ್ಮ ಈ ಪ್ರವಾಸದಲ್ಲಿ ಕ್ಲಿಕಿಸಲಾದ ಕೆಲ ಸುಂದರ ಫೋಟೊಗಳನ್ನು ಸೋನು ಗೌಡ ಒಂದೆರಡು ವಾರದ ಹಿಂದೆ ಅಂದರೆ ಮೇ 7ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

etkond-pooje-madu-sonu-srinivas-gowda-gives-a-savage-reply-to-a-troll

ಇದಕ್ಕೆ ಹ ಕಾರ ಮತ್ತು ಅ ಕಾರದ ವ್ಯತ್ಯಾಸ ಗೊತ್ತಿರದ, ಸತೀಶ್ ಜಗ್ಗು ಎಂಬ ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದ. ''ಸೋನು ನಿನ್ನದು ವಿಡಿಯೋ ಇದೆ ನನ್ನ ಅತ್ರ'' ಎಂಬ ಕಾಮೆಂಟ್ ಅದು. ಸಾಮಾನ್ಯವಾಗಿ ಹಲವರು ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನೋಡಿಯೂ ನೋಡದಂತೆ ಸುಮ್ಮನಾಗುತ್ತಾರೆ.

ಆದರೆ, ಇಂತಹ ಮಾತುಗಳನ್ನು ಎದುರಿಸುವುಲ್ಲಿ, ಟ್ರೋಲ್‌ಗಳಿಗೆ ಉತ್ತರ ನೀಡುವುದರಲ್ಲಿ ಸೋನು ಗೌಡ ಅದಾಗಲೇ ಡಿಗ್ರಿ ಮಾಡಿದ್ದಾರೆ. ಆನ್‌ಲೈನ್ ಕಿಡಿಗೇಡಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಕಲೆ ಸೋನು ಗೌಡಗೆ ಚೆನ್ನಾಗಿಯೇ ಕರಗತವಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಇಂತಹ ಬೆದರಿಕೆಗಳಿಗೆ ಸೊಪ್ಪು ಹಾಕದ ಸೋನು ಗೌಡ ಖಡಕ್ ರಿಪ್ಲೈ ಮಾಡಿದ್ದಾರೆ.

ಸತೀಶ್ ಜಗ್ಗು ಮಾಡಿದ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಸೋನು ಗೌಡ ''ಇಟ್ಕೊಂಡು ಪೂಜೆ ಮಾಡು'' ಎಂದು ಹೇಳಿದ್ದಾರೆ. ಸದ್ಯ ಸೋನು ಗೌಡ ನೀಡಿದ ಈ ಉತ್ತರ ಹಲವರ ಮನ ಗೆದ್ದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸೋನು ಗೌಡ ಅವರ ಈ ದಿಟ್ಟ ನಡೆಯನ್ನು ಹಲವರು ಪ್ರಶಂಸಿದ್ದಾರೆ. ಸೋನು ಗೌಡ ನೀಡಿದ ಉತ್ತರಕ್ಕೆ ಭೇಷ್ ಎಂದಿದ್ದಾರೆ.

etkond-pooje-madu-sonu-srinivas-gowda-gives-a-savage-reply-to-a-troll

English summary
Sonu Srinivas Gowda shuts down a troll claiming to have her video with a savage, hilarious comeback. See her epic "Etkond Pooje Madu" reply inside!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X