ಬಿಗ್ ಬಾಸ್ ಮನೆಯಲ್ಲಿ ರೋಹನ್ vs ಜಯಾ ಪಾರ್ಟಿ

By Mahesh

ಈಟಿವಿ ಕನ್ನಡ ವಾಹಿನಿ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಶೋನಲ್ಲಿ ಈಗ ಎಲ್ಲರ ಎದೆಯಲ್ಲೂ ನಡುಕ ಶುರುವಾಗಿದೆ. ಪ್ರತಿ ವಾರ ಇಬ್ಬರು ಅಥವಾ ಮೂವರು ಮನೆಯಿಂದ ಹೊರಬೀಳಲು ನಾಮಿನೇಟ್ ಆಗುತ್ತಿದ್ದರು. ಆದರೆ ಈ ವಾರ ಮನೆಯ ಎಲ್ಲ ಸದಸ್ಯರನ್ನೂ 'ಬಿಗ್ ಬಾಸ್' ನಾಮಿನೇಟ್ ಮಾಡಿದ್ದಾರೆ. ಇಬ್ಬರು ಸದಸ್ಯರಿಗೆ ಗೇಟ್ ಪಾಸ್ ನೀಡುವುದು ಖಾತ್ರಿಯಾಗಿದೆ.

ಆದರೆ, ಈ ವಿಷಯ ಗೊತ್ತಿರುವುದು ತಿಲಕ್ ಹಾಗೂ ವಿಜಯ್ ರಾಘವೇಂದ್ರ ಇಬ್ಬರಿಗೆ ಮಾತ್ರ. ಹೀಗಾಗಿ ಇತರೆ ಸ್ಪರ್ಧಿಗಳಿಗೆ ನಾಮಿನೇಷನ್ ಬಗ್ಗೆ ಸಹಜ ಕುತೂಹಲ ಮೂಡಿಸಿದೆ.

ಮನೆಯಲ್ಲಿ ಒಬ್ಬರ ಮೇಲೆ ಒಬ್ಬರ ಆಪಾದನೆ ಕಿತ್ತಾಟಗಳನ್ನು ಬೇರೆ ರೀತಿಯಲ್ಲಿ ಬಿಗ್ ಬಾಸ್ ತಿರುಗಿಸಿದ್ದಾರೆ. ರಿಯಾಲಿಟಿ ಶೋ ವಿಜೇತ ರೋಹನ್ ಗೌಡ ಎಂಟ್ರಿ ಪ್ರೇಕ್ಷಕರಿಗೂ ಅನಿರೀಕ್ಷಿತವಾಗಿತ್ತು. 37ನೇ ದಿನ ಬಿಗ್ ಬಾಸ್ ಮನೆಯಲ್ಲಿ ರೋಹನ್ ಗೌಡ vs ಜಯಲಕ್ಷ್ಮಿ ಕದನದಲ್ಲಿ ಏನೇನಾಯ್ತು? ರಾಜಕೀಯ ಅಖಾಡವಾಗಿ ಬದಲಾದ ಬಿಗ್ ಬಾಸ್ ಮನೆಯಲ್ಲಿ ನಡೆದ ತಂತ್ರ ಪ್ರತಿತಂತ್ರಗಳನ್ನು ಇಲ್ಲಿ ಓದಿ...

ರೋಹನ್ ಎಂಟ್ರಿ

ರೋಹನ್ ಎಂಟ್ರಿ

ಕಾಡಿನಲ್ಲಿದ್ದು ಕಷ್ಟಪಟ್ಟು ರಿಯಾಲಿಟಿ ಶೋ ಗೆದ್ದ ಬಾಡಿ ಬಿಲ್ಡರ್ ರೋಹನ್ ಗೌಡ ಅನಿರೀಕ್ಷಿತ ಎಂಟ್ರಿ ಮನೆಯಲ್ಲಿರುವ ಇತರೆ ಸ್ಪರ್ಧಿಗಳಿಗೆ ಒಂದು ರೀತಿ ಆಘಾತ, ಕುತೂಹಲ ಹುಟ್ಟಿಸಿದೆ.

ರೋಹನ್ ಎಂಟ್ರಿಯನ್ನು ಹೇಗೆ ಸ್ವಾಗತಿಸಬೇಕು ಎಂಬುದು ತಿಳಿಯದೆ ದೂರ ದೂರ ಉಳಿದರು. ಗುರುಗಳ ಬಳಿ ಬೆಡ್ ಆಯ್ಕೆ ಮಾಡಿಕೊಂಡ ರೋಹನ್
ತಿಲಕ್ ಬಾಯ್ಬಿಡಲು ಯತ್ನ

ತಿಲಕ್ ಬಾಯ್ಬಿಡಲು ಯತ್ನ

ಈ ನಡುವೆ ಬಿಗ್ ಬಾಸ್ ತಿಲಕ್ ಗೆ ಏನೋ ಗುಟ್ಟು ಹೇಳಿದ್ದಾರೆ ಎಂಬುದನ್ನು ಅರಿತ ಗುರೂಜಿ ಬಾಯ್ಬಿಡಿಸಲು ಯತ್ನಿಸಿದರು. ಪರ್ವಾಗಿಲ್ಲ ಹೇಳು ಮಗು ಎಂದರು. ಆದರೆ, ಜಟ್ಟಿ ತಿಲಕ್ ಬಾಯ್ಬಿಟ್ಟಿಲ್ಲ.

ನಾನು ಹಲ್ ಸೆಟ್ ಹೊಸದು ಹಾಕಿಕೊಳ್ಳಬೇಕು. ಮೆಹಂದಿ ಹಾಕಿಕೊಳ್ಳಬೇಕು. ಈ ವಾರ ಇರ್ತೀನಾ ಇಲ್ವಾ ಹೇಳು ಎಂದು ಅಪರ್ಣ ಕೂಡಾ ಪ್ರಶ್ನಿಸಿದರು.

ಜಯಾ ಅಕ್ಕಗೆ ಅಡ್ಡಗಾಲು

ಜಯಾ ಅಕ್ಕಗೆ ಅಡ್ಡಗಾಲು

ಬೆಳ್ಳಂಬೆಳ್ಳಗೆ ಜಯಲಕ್ಷ್ಮಿ ಅವರನ್ನು ಕಿಚಾಯಿಸಲು ಅರುಣ್ ಸಾಗರ್, ಅಪರ್ಣ ಹಾಗೂ ಅನುಶ್ರೀ ಯತ್ನಿಸಿದರು. ಟಾಯ್ಲೆಟ್ ನಿಂದ ಆಚೆ ಬಂದ ಜಯಾ ಮುಂದೆ ರಾಶಿಗಟ್ಟಲೆ ಬಾಟಲ್ ಇಟ್ಟು ಅಡ್ಡ ಕಟ್ಟಿದ್ದರು. ಜಯಾ ಅವರು ಅರುಣ್ ಅವರನ್ನು ಹೊಡೆಯಲು ಓಡಿದರು

ಟಾಸ್ಕ್ ಟೈಂ : ಚುನಾವಣೆ ರಂಗು

ಟಾಸ್ಕ್ ಟೈಂ : ಚುನಾವಣೆ ರಂಗು

ರೋಹನ್ ಪಾರ್ಟಿ vs ಜಯಲಕ್ಷ್ಮಿ ಪಾರ್ಟಿ ಸ್ಥಾಪನೆಗೆ ಬಿಗ್ ಬಾಸ್ ಕರೆ. ಹಳದಿ ಪಾರ್ಟಿ ಹಾಗೂ ಕೆಂಪು ಪಾರ್ಟಿ ಹಾಗೂ ಜೈಲು. ಪ್ರಚಾರ ಭಾಷಣ ಜೊತೆಗೆ ಪಕ್ಷದಿಂದ ಪಕ್ಷಕ್ಕೆ ಹಾರಲು ಅವಕಾಶ. ರೋಹನ್ ಬಲಗೈ ಬಂಟ ಆಗಿ ಅರುಣ್ ಆಯ್ಕೆ. ಜಯಲಕ್ಷ್ಮಿ ಅವರ ಬಲಗೈ ಬಂಟನಾಗಿ ಬ್ರಹ್ಮಾಂಡ ಆಯ್ಕೆ

ಬಿಗ್ ಬಾಸ್ ನಲ್ಲಿ ರೋಹನ್ vs ಜಯಾ ಪಾರ್ಟಿ

ಪಾರ್ಟಿ ಸ್ಥಾಪನೆ ನಂತರ ಬ್ರಹ್ಮಾಂಡ ಗುರೂಜಿ ಹಾಗೂ ಜಯಲಕ್ಷ್ಮಿ ಬೆಡ್ ರೂಮ್ ನಲ್ಲಿ ಪಿಸು ಮಾತು . ನಮ್ಮ ಪಕ್ಷದ ರೂಲ್ಸ್ ಹಾಕಿಕೊಳ್ಳೋಣ.. ಹೆಸರು ಬಿಗ್ ಬಾಸ್ ಪಕ್ಷ
ಊಟ ತಿಂಡಿ ನಾವೇ ಮಾಡೋಣ ಇಲ್ಲಿ ವೆಜ್ ಎಂದು ತಮ್ಮನ್ನು ತೋರಿಸಿಕೊಂಡರು. ಅಲ್ಲಿ ನಾನ್ ವೆಜ್ ಎಂದು ಜಯಲಕ್ಷ್ಮಿ ಅವರನ್ನು ಗುರೂಜಿ ತೋರಿಸಿದರು.

ಜಯಾ ಪ್ರಚಾರ

ಜಯಾ ಪ್ರಚಾರ

ಜಯಲಕ್ಷ್ಮಿ ಅವರು ಪ್ರಚಾರಕ್ಕೆ ಬರುತ್ತಿದ್ದಂತೆ ಜಯಾ ಜಯಾ ಜಾಕೆಟು ಹಾಡಿನ ಮೂಲಕ ಎಲ್ಲರೂ ರೇಗಿಸಿದರು.

ತಮ್ಮ ಚಿನ್ಹೆ ಭೂಮಿ. ಅಂದರೆ ಬ್ರಹ್ಮಾಂಡ ಎಂದು ಸೊಗಸಾದ ಭಾಷಣ ಬಿಗಿದ ಜಯಲಕ್ಷ್ಮಿ ಅವರು ಥೇಟ್ ರಾಜಕಾರಣಿ ಗೆಟ್ ಅಪ್ ನಲ್ಲಿದ್ದರು.

ರೋಹನ್ ಪಾರ್ಟಿ

ರೋಹನ್ ಪಾರ್ಟಿ

ಪೊರಕೆ ಚಿನ್ಹೆ ಇಟ್ಟುಕೊಂಡು ಗೆಲ್ಲುತ್ತೀವೋ ಬಿಡ್ತಿವೋ ನಮ್ಮ 100% ಕೊಟ್ಟು ಎಂಜಾಯ್ ಮಾಡೋಣ, ಯೂಥ್ ಅಜೆಂಡಾ ಇಟ್ಟುಕೊಳ್ಳೋಣ ಎಂದ ಅರುಣ್

ನಂತರ ತೆಂಗಿನ ಗುರಿ ಪೊರೆಕೆ ಬಗ್ಗೆ ವಿವರಿಸುವಾಗ ಅಪರ್ಣಾ ಅವರಿಂದ ಪ್ರತಿಭಟನೆ

ಜನರಿಗೆ ಗಾಳ

ಜನರಿಗೆ ಗಾಳ

ಮೊದಲಿಗೆ ತಿಲಕ್ ಬುಟ್ಟಿಗೆ ಹಾಕಿಕೊಂಡ ಜಯಾ
ವಿಜಯ್ ರಾಘವೇಂದ್ರ ಅವರಿಗೆ ಗಾಳ ಹಾಕಿ ವಿಫಲರಾದ ಅರುಣ್, ರೋಹನ್
ಪೊರಕೆ ಉಪಯೋಗದ ಬಗ್ಗೆ ವಿವರಣೆ, ಸ್ವಚ್ಛತೆ, ಸುರಕ್ಷತೆ ಒದಗಿಸುವ ಭರವಸೆ
ಬಟ್ಟೆ ಕಳಚಿ ಕುಣಿತ ನಿಖಿತಾ ಖುಷ್ ರೋಹನ್ ಪಾರ್ಟಿಗೆ ಜೈ ಅಸಹ್ಯ ಅಸಭ್ಯ ಎಂದು ಹೇಳಿ ಜಯಾ ಅಲ್ಲಿಂದ ಜಾಗ ಖಾಲಿ

ತಂತ್ರ ಪ್ರತಿ ತಂತ್ರ

ತಂತ್ರ ಪ್ರತಿ ತಂತ್ರ

ತಿಲಕ್ ಜೈಲಿಗೆ ತಳ್ಳಿ ಚಂದ್ರಿಕಾ ಅಪರ್ಣಾ ಸೆಳೆಯಲು ಯತ್ನ ಜಯಾ ತಂತ್ರ ಆದರೆ ವಿಫಲ

ಅಷ್ಟರಲ್ಲಿ ಮನೆ ಮನಸ್ಸು ಸ್ವಚ್ಛತೆಯನ್ನು ಕಾಪಾಡುತ್ತೇವೆ ಎಂದು ನಿಖಿತಾ ಪ್ರಮಾಣ ವಚನ
ರೋಹನ್ ಪಕ್ಷಕ್ಕೆ : ಅನುಶ್ರೀ, ಚಂದ್ರಿಕಾ, ನಿಖಿತಾ
ಜಯಾ ಪಕ್ಷಕ್ಕೆ: ಅಪರ್ಣಾ, ವಿಜಯ್, ತಿಲಕ್

ಭಲೇ ಬ್ರಹ್ಮಾಂಡ

ಭಲೇ ಬ್ರಹ್ಮಾಂಡ

ವಿರೋಧ ಪಕ್ಷದ ಪೊರಕೆ ಹಿಡಿದ ಜಯಲಕ್ಷ್ಮಿ, ಗುರೂಜಿ ಐಡಿಯಾ ಉಲ್ಟಾ
ರಾಘು ಬಗ್ಗೆ ಎಚ್ಚರಿಸಿದ ಬ್ರಹ್ಮಾಂಡ, ನಂಬ ಬೇಡ್ವೆ ಜಯಾ ಎಂದ ಗುರೂಜಿ
ಮುಂದುವರೆದ ರಾಜಕೀಯ ಪಕ್ಷಗಳ ನಾಟಕ., ಕೊನೆ ಗಳಿಗೆಯಲ್ಲಿ ಜಯಾ ಪಾರ್ಟಿ ವೀಕ್ ಆದಂತೆ ಕಂಡು ಬಂದರೂ ಅರುಣ್ ವಿರುದ್ಧ ಎಲ್ಲರೂ ತಿರುಗಿ ಬೀಳುವ ಸೂಚನೆ ಸಿಕ್ಕಿತು

More from Filmibeat

English summary
Etv Kannada's reality show 'Bigg Boss' day 37th highlights. This week all members are nominated for elimination. This week Two members will evicted from the house. Entry of reality show winner Rohan Gowda creates confusion in the minds of all contestants
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X