For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡ 'ಅಕ್ಕ' ವಿರುದ್ಧ ಕಥೆ ಕದ್ದ ಆರೋಪ

  By Rajendra
  |

  ಈಟಿವಿ ಕನ್ನಡ ವಾಹಿನಿಯ ಹೊಸ ಧಾರಾವಾಹಿ 'ಅಕ್ಕ' ಆರಂಭವಾಗುವುದಕ್ಕೂ ಮುನ್ನವೇ ಕಥೆ ಕದ್ದ ಆರೋಪಕ್ಕೆ ಗುರಿಯಾಗಿದೆ. ಈ ಧಾರಾವಾಹಿ ಡಿಸೆಂಬರ್ 2ರಿಂದ ರಾತ್ರಿ 8 ರಿಂದ 9ರ ನಡುವೆ ಪ್ರಸಾರವಾಗಲಿದೆ. ಈ ಸಂಬಂಧ ಪ್ರಕಟಣೆಯೂ ಹೊರಬಿದ್ದಿದೆ. ಏತನ್ಮಧ್ಯೆ ಧಾರಾವಾಹಿಯ ಚಿತ್ರೀಕರಣ ಭರದಿಂದ ಸಾಗಿದೆ.

  ತಮ್ಮ "ಕಣ್ಮಣಿ" ಎಂಬ ಅವಳಿ ಜವಳಿ ಹೆಣ್ಣು ಮಕ್ಕಳ ಕಥೆಯೊಂದು ಈಟಿವಿ ಕನ್ನಡದಲ್ಲಿ "ಅಕ್ಕ" ಎಂಬ ಹೆಸರಿನಲ್ಲಿ ಬೇರೆ ಯಾರದೋ ನಿರ್ಮಾಣದಲ್ಲಿ ಬರುತ್ತಿದೆ. ಅದು ನನ್ನದೇ ಕಥೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ ಎಂದು ಆರೋಪಿಸುತ್ತಿರುವವರು ಲೇಖಕಿ, ನಿರ್ಮಾಪಕಿ ರೇಖಾ ರಾಣಿ. ಅವರ ಆರೋಪಗಳನ್ನು ಅವರದೇ ಮಾತುಗಳಲ್ಲಿ ಓದಿ...

  "ಪರಮೇಶ್ವರ್ ಗುಂಡಕಲ್ ಅವರು ಜೀ ಕನ್ನಡದಲ್ಲಿರುವಾಗ ನಾನು ಅವರಿಗೆ ಅವಳಿ ಜವಳಿ ಕಥೆ "ಕಣ್ಮಣಿ" ಕೊಟ್ಟಿದ್ದೆ. ಇದು 4 ವರ್ಷಗಳ ಹಿಂದಿನ ಮಾತು. ಈ ಕಥೆಗೆ ಪರಮೇಶ್ವರ್ ಮೆಚ್ಚಿ ಒಪ್ಪಿಗೆ ಕೊಟ್ಟಿದ್ದರೂ ಕೂಡ. ಆದರೆ ಪರಮೇಶ್ವರ್ ಕಾರ್ಯರೂಪಕ್ಕೆ ತರಲು ತಡಮಾಡಿದರು. ಅಷ್ಟರಲ್ಲಿ ನನಗೆ ಸುವರ್ಣ ಚಾನಲ್ ನಿಂದ ಕರೆಬಂತು. ಅವರೂ ಕೂಡ ಇದೇ " ಕಣ್ಮಣಿ" ಕಥೆಯನ್ನು ಒಪ್ಪಿ ನಂತರ "ಪ್ರೀತಿಯಿಂದ " ಧಾರಾವಾಹಿಯನ್ನು ಮಾಡಿ ಎಂದು ಸೂಚಿಸಿದರು.

  "ಪ್ರೀತಿಯಿಂದ " ಧಾರಾವಾಹಿ ಮುಗಿಸುವ ಹೊತ್ತಿಗೆ ಪರಮೇಶ್ವರ್ ಈಟಿವಿ ಕನ್ನಡಕ್ಕೆ ಹಾರಿ ಹೋಗಿದ್ದರು. ಹೋಗಿದ್ದು ಪರಮೇಶ್ವರ್ ಗುಂಡಕಲ್ ಮಾತ್ರ ಆಗಿರಲಿಲ್ಲ. Zee TVಯ ಒಳ್ಳೆಯ ಕಥೆಗಳು, ಅಲ್ಲಿಯ ನಿರ್ದೇಶಕರನ್ನು ಕರೆದುಕೊಂದು ಹೋದರು. ನಂತರ ನನ್ನ "ಪ್ರೀತಿಯಿಂದ " ಧಾರಾವಾಹಿ ಮುಗಿದ 3 ತಿಂಗಳ ನಂತರ ಪರಮೇಶ್ವರ್ ಬಳಿ ಮಾತನಾಡಿ ಮತ್ತೆ May 14, 2013 ರಂದು ಅವರಿಗೆ ಮತ್ತು ಅವರ ಸಹಾಯಕಿ ಚಿತ್ರಶ್ರೀಗೆ ಇದೇ ಕಥೆ ಕಳುಹಿಸಿದ್ದೇನೆ. ಆಗಲೂ ಕಥೆ ಮೆಚ್ಚಿ, ಒಪ್ಪಿ ಮಾತನಾಡಿದ್ದರು. [ಕಣ್ಮಣಿ : ಅವಳಿ-ಜವಳಿಗಳ ಹೃದಯಂಗಮ ಕಥೆ]

  ಈಗ ಈ ಕಥೆ ನನ್ನದೇ ಎಂಬುದಕ್ಕೆ ನನ್ನ ಬಳಿ ಸಂಗ್ರಹಿಸಿದ ಮಾಹಿತಿಗಳಿವೆ. ಅವೆಲ್ಲವೂ ಟೆಲಿಪೋನ್ ಸಂಭಾಷಣೆಯ ರೂಪದಲ್ಲಿದೆ. ಮುಖ್ಯ ಮಾಹಿತಿಗಳು, ನಾನು ಕೊಟ್ಟ ಈ ಕಥೆ ಈಗಲೂ Zee TV, Suvarna TV ಮತ್ತು ETV ಬಳಿಯಲ್ಲಿ ಇದೆ. ನನ್ನ ಮತ್ತು ಪರಮೇಶ್ವರ್ ಗುಂಡಕಲ್ ಮಾತನಾಡಿದ ವಿವರಗಳು record ಆಗಿದೆ.

  ಅವರು ಜೀ ಕನ್ನಡದಲ್ಲಿದ್ದಾಗ ನಾನು ಕಥೆ ಕೊಟ್ಟ ಬಗ್ಗೆ, ಮೆಚ್ಚಿದ್ದ ಬಗ್ಗೆ, ಈಟಿವಿಯಲ್ಲಿ ನನ್ನ ಕಥೆ ಮೆಚ್ಚಿದ್ದ ಬಗ್ಗೆ ಮಾತನಾಡಿದ ದಾಖಲೆಗಳಿವೆ. ಮೊನ್ನೆ ಶುಕ್ರವಾರ 22-11-2013 ರಂದು ನಾನು ಮಾತಾಡಿ ಗಲಾಟೆ ಮಾಡಿದ್ದೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ರಾಮ್ ಜಿ ತಂಡದವರಿಂದ ಕಥೆ ಕೇಳಿಸಿ ದಾಖಲಿಸಿದ್ದೇನೆ." ಇದಿಷ್ಟು ರೇಖಾ ರಾಣಿ ಅವರು 'ಅಕ್ಕ' ಧಾರಾವಾಹಿ ತಮ್ಮದೇ ಕಥೆ ಎಂಬುದಕ್ಕೆ ಕೊಟ್ಟಿರುವ ಸಮರ್ಥನೆ. (ಒನ್ ಇಂಡಿಯಾ ಕನ್ನಡ)

  English summary
  Kannada writer, producer Rekha Rani alleged the story of the Etv Kannada daily serial 'Akka' was stolen from his story 'Kanmani'. The story revolves around two sisters who grow up together, but build up different personality, face twists and turns. What happens in their life and how they come out victorious?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X