ಜಾಹ್ನವಿ ಮಾತು ಸುಳ್ಳು, ಅವರಿಬ್ರು ದೂರಾಗಿದ್ದು ಯಾಕೆ ನಂಗೆ ಗೊತ್ತು; ಕಾರ್ತಿಕ್ 2ನೇ ಪತ್ನಿ ತಿರುಗೇಟು
ಬಿಗ್‌ಬಾಸ್ ಸ್ಪರ್ಧಿ ಜಾಹ್ನವಿ ತಮ್ಮ ವೈಯಕ್ತಿಯ ವಿಚಾರಗಳ ಬಗ್ಗೆ ದೊಡ್ಮನೆ ಒಳಗೆ ಮಾತನಾಡುತ್ತಿದ್ದಾರೆ. ತಮ್ಮ ಡಿವೋರ್ಸ್ ಹಾಗೂ ಮಾಜಿ ಪತಿ ಕಾರ್ತಿಕ್ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ನಮಗೆ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿವಾಹಿನಿ ಮಾಜಿ ನಿರೂಪಕಿ, ನಟಿ ಜಾಹ್ನವಿ ಮದುವೆಯಾಗಿ 12 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು. ತಮ್ಮ ಡಿವೋರ್ಸ್ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದಾರೆ. ಈಗ ಬಿಗ್‌ಬಾಸ್ ಮನೆಯಲ್ಲಿ ಕೂಡ ಅದೇ ವಿಚಾರ ಕೆದಕುತ್ತಿದ್ದಾರೆ. ಡಿವೋರ್ಸ್‌ಗೂ ಮುನ್ನ ನನ್ನ ಪತಿ 2ನೇ ಮದುವೆ ಆಗಿದ್ದರು. ಆಕೆ ಕೂಡ ನನ್ನ ಸ್ನೇಹಿತೆ ಎಂದು ಹೇಳಿದ್ದಾರೆ. ಇದಕ್ಕೆ ಕಾರ್ತಿಕ್ ಹಾಗೂ 2ನೇ ಪತ್ನಿ ಪ್ರತಿಕ್ರಿಯಿಸಿದ್ದಾರೆ. ಅಶ್ವವೇಗ ಸುದ್ದಿವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಜಾಹ್ನವಿ ಪರಪುರುಷನ ಜೊತೆ ಆತ್ಮೀಯವಾಗಿದ್ಲು. ತನ್ನ ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ಲು ಎಂದು ಕಾರ್ತಿಕ್ ಗಂಭೀರ ಆರೋಪ ಮಾಡಿದ್ದಾರೆ. ಡಿವೋರ್ಸ್ ಬಳಿಕವೇ ತಾನು 2ನೇ ಮದುವೆ ಆಗಿದ್ದಾಗಿ ಹೇಳಿದ್ದಾರೆ. ಇದೇ ಚರ್ಚಾ ಕಾರ್ಯಕ್ರಮಕ್ಕೆ ಕಾರ್ತಿಕ್ ಅವರ 2ನೇ ಪತ್ನಿ ಫೋನ್ ಕಾಲ್‌ನಲ್ಲಿ ಮಾತನಾಡಿದ್ದಾರೆ. ಅವರಿಬ್ಬರ ಡಿವೋರ್ಸ್ ಬಳಿಕ ನಮ್ಮ ಮದುವೆ ಆಗಿದ್ದು. ಕಾರ್ತಿಕ್ ಬಗ್ಗೆ ಎಲ್ಲಾ ಗೊತ್ತಿದ್ದೂ ಮದುವೆ ಆಗಿದ್ದೀನಿ. ನನ್ನ ಕಣ್ಣುಕಟ್ಟಿ ಮದುವೆ ಆಗ್ಲಿಲ್ಲ, ಜಾಹ್ನವಿ ಹೀಗೆ ಮಾತನಾಡುತ್ತಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
"ನನಗೂ ಕಾರ್ತಿಕ್‌ಗೂ 2 ವರ್ಷಗಳಿಂದ ಪರಿಚಯ. ಜಾಹ್ನವಿ- ಕಾರ್ತಿಕ್ ನಡುವೆ ಮತ್ತೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆ ನಮ್ಮ ಪರಿಚಯ. ನಾವಿಬ್ಬರೂ ಚೆನ್ನಾಗಿ ಇದ್ದಾಗಲೇ 2ನೇ ಮದುವೆ ಆಯ್ತು, ಮಗು ಇದೆ ಎಂದು ಜಾಹ್ನವಿ ಹೇಳುತ್ತಿದ್ದಾರೆ. ಅದು ಶುದ್ಧ ಸುಳ್ಳು. ನಮ್ಮ ಮದುವೆ ಆಗಿದ್ದು ಇತ್ತೀಚೆಗೆ. ಅವರಿಬ್ಬರ ಡಿವೋರ್ಸ್ ಆಗಿ ತಿಂಗಳಿಗೆ ನಮ್ಮ ಮದುವೆ ಆಗಿದ್ದು. ನನಗೆ 9 ತಿಂಗಳು ಮಗಳು ಇದ್ದಾಳೆ. ಇದರಿಂದ ನಮಗೆ ಮಾನಸಿಕ ಕಿರುಕುಳ ಎದುರಾಗುತ್ತಿದೆ" ಎಂದು ಕಾರ್ತಿಕ್ 2ನೇ ಪತ್ನಿ ಹೇಳಿದ್ದಾರೆ.

ಜಾಹ್ನವಿ ನನ್ನ ಸ್ನೇಹಿತೆ ಎನ್ನುವುದನ್ನು ಕಾರ್ತಿಕ್ 2ನೇ ಪತ್ನಿ ಒಪ್ಪಿಕೊಂಡಿದ್ದಾರೆ. "ವೈಯಕ್ತಿಕವಾಗಿ ಜಾಹ್ನವಿ ನನಗೆ ಗೊತ್ತಿದ್ಲು. ನನಗೆ ಮದುವೆ ಮೊದ್ಲು ಇಷ್ಟ ಇರ್ಲಿಲ್ಲ. ಪೋಷಕರು ಆರಂಭದಲ್ಲಿ ಬೇಡ ಅಂದ್ರು. ಬಳಿಕ ಕಾರ್ತಿಕ್ ಮನೆತನ ಹಾಗೂ ಹಿನ್ನೆಲೆ ಬಗ್ಗೆ ವಿಚಾರಿಸಿದ್ರು. ಒಳ್ಳೆಯವ್ರು ಎಂದು ಗೊತ್ತಾದ ಬಳಿಕ ಒಪ್ಪಿದ್ರು. ಹಾಗಾಗಿ ನಮ್ಮದು ಅರೇಂಜ್ಡ್ ಮ್ಯಾರೇಜ್. ಬಿಗ್‌ಬಾಸ್ ಶೋ ನಾನು ನೋಡಲ್ಲ, ಆದರೆ ಕೆಲವರು ವೀಡಿಯೋ ಕಳಿಸಿದ್ದು ನೋಡಿ ಬೇಸರವಾಯಿತು" ಎಂದು ಕಾರ್ತಿಕ್ 2ನೇ ಪತ್ನಿ ತಿಳಿಸಿದ್ದಾರೆ.
ಕಾರ್ತಿಕ್ ಹಾಗೂ ಜಾಹ್ನವಿ ದೂರಾಗಲು ನನ್ನ ಪಾತ್ರ ಇಲ್ಲ. ನನ್ನ ವಿಚಾರಕ್ಕೆ ಅವರಿಬ್ಬರು ಬೇರೆ ಆಗ್ಲಿಲ್ಲ. "ಬಿಗ್‌ಬಾಸ್ ಶೋನಲ್ಲಿ ಜಾಹ್ನವಿ ಹೇಳುವುದು ಶುದ್ಧಸುಳ್ಳು. ಬೇರೆ ವಿಚಾರಕ್ಕೆ ಅವರಿಬ್ಬರು ದೂರಾಗಿದ್ದಾರೆ. ಅದು ಏನು ಎಂದು ಕಾರ್ತಿಕ್ ಹೇಳಿದ್ದಾರೆ. "ಎಲ್ಲಾ ಮುಚ್ಚಿಟ್ಟು, ನನ್ನ ಕಣ್ಣು ಕಟ್ಟಿ ಕಾರ್ತಿಕ್ ಮದುವೆ ಆಗ್ಲಿಲ್ಲ. ಕಾರ್ತಿಕ್ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಿದ್ರು ಜಾಹ್ನವಿ ಒಪ್ಪಲಿಲ್ಲ. ಈಗ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ" ಎಂದು ಕಾರ್ತಿಕ್ 2ನೇ ಪತ್ನಿ ವಿವರಿಸಿದ್ದಾರೆ.
ನನ್ನ ಜೊತೆ ಕಾರ್ತಿಕ್ ಚೆನ್ನಾಗಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕುಡಿತ ತಪ್ಪು ಎಂದು ಹೇಳಿದ್ದಕ್ಕೆ ಕಾರ್ತಿಕ್ ಅದನ್ನು ಈಗ ಬಿಟ್ಟುಬಿಟ್ಟಿದ್ದಾರೆ. "ಒಬ್ಬ ವ್ಯಕ್ತಿ ಕುಡಿತ್ತಾನೆ, ಹೊಡಿತ್ತಾನೆ ಅಂದ್ರೆ, ಏನಾದರೂ ತಪ್ಪು ಮಾಡಿರಬೇಕು, ಸುಮ್ಮನೆ ಯಾಕೆ ಹೊಡಿತ್ತಾನೆ. ನಾವು ಫ್ಯಾಮಿಲಿ ಚೆನ್ನಾಗಿ ಇದ್ದೀವಿ. ಅದಕ್ಕೆ ಬಿಗ್‌ಬಾಸ್ ಶೋ ನೋಡಲ್ಲ. ಮುಗಿದ ಕಥೆಯನ್ನು ಜಾಹ್ನವಿ ಪದೇ ಪದೆ ಕೆದಕುತ್ತಿದ್ದಾರೆ. ನಮ್ಮ ಪೋಷಕರಿಗೆ ಇದು ನೋವು ತಂದಿದೆ. ಕಾರ್ತಿಕ್ ಹಾಗೂ ಅವರ ಪೋಷಕರು ಮಾತನಾಡಲ್ಲ ಎಂದು ಜಾಹ್ನವಿ ಹಿಂಗೆಲ್ಲಾ ಹೇಳಿಕೆ ಕೊಡುತ್ತಿದ್ದಾರೆ. ಕಾರ್ತಿಕ್ ಹಿಂದೆ ಈಗ ನಾನು ಇದ್ದೀನಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದು ಜಾಹ್ನವಿಗೆ ಕಾರ್ತಿಕ್ 2ನೇ ಪತ್ನಿ ಎಚ್ಚರಿಕೆ ಕೊಟ್ಟಿದ್ದಾರೆ.


Click it and Unblock the Notifications











