BBK 12 ; ಈ ಬಾರಿ ಬಿಗ್ ಬಾಸ್ ಗೆಲ್ಲೋರು ಯಾರು..? ಚೈತ್ರಾ ಕೋಟೂರ್ ಪ್ರಕಾರ ಟಾಪ್ 5 ಫೈನಲಿಸ್ಟ್ ಇವರೇ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ. ವಿವಾದಾತ್ಮಕ ವ್ಯಕ್ತಿಗಳನ್ನು ...
ವಿಚಿತ್ರ ವ್ಯಕ್ತಿಗಳನ್ನು... ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿಯ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಆದರೆ.. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲಿ ''ಕಿರಿಕ್ ಪಾರ್ಟಿ''ಗಳ ಸಂಖ್ಯೆ ಕಡಿಮೆ ಇದೆ. ಹಾಗಂಥ ಮನೆಯಲ್ಲಿ ಮನರಂಜನೆಯ ಕೊರತೆ ಇದೆ ಅಂತೇನು ಇಲ್ಲ.

ಯಾಕೆಂದರೆ .. ಗಿಲ್ಲಿ ತಮ್ಮ ನಡೆ ಮತ್ತು ನುಡಿಯಿಂದ ಈಗಾಗಲೇ ಹಲವರ ಹೃದಯ ಗೆದ್ದಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಕೂಡ ತಮ್ಮ ಗೇಮ್ ಪ್ಲ್ಯಾನ್‌ನಿಂದ ಗಮನ ಸೆಳೆಯುತ್ತಿದ್ದಾರೆ.
ಇನ್ನು ಧ್ರುವಂತ್ ಮತ್ತು ರಘು ಕೂಡ ತೀವೃ ಪೈಪೋಟಿಯನ್ನು ನೀಡುತ್ತಿದ್ದಾರೆ. ಸ್ಪಂದನಾ.. ರಾಶಿಕಾ.. ಮತ್ತು ಕಾವ್ಯ ಶೈವ ಅವರ ಹವಾ ಕೂಡ ಮನೆಯ ಒಳಗಡೆಯೂ ಇದೆ. ಹೊರಗಡೆಯೂ ಇದೆ.
ಈ ಹಿನ್ನೆಲೆ ಈ ಬಾರಿ ''ಬಿಗ್ ಬಾಸ್'' ವಿನ್ನರ್ ಯಾರಾಗ್ತಾರೆ..? ಎಂಬ ಕುತೂಹಲ ಹಲವರಲ್ಲಿದೆ. ಕೊನೆಯ ಹಂತಕ್ಕೆ ಬರುವ 5 ಸ್ಫರ್ಧಿಗಳು ಯಾರು ಎನ್ನುವ ಪ್ರಶ್ನೆ ಇದೆ. ಇದೇ ಪ್ರಶ್ನೆಗೆ ''ಬಿಗ್ ಬಾಸ್ 7''ರ ಸ್ಫರ್ಧಿ ಚೈತ್ರಾ ಕೋಟೂರ್ ನಿಮ್ಮ'' ಫಿಲ್ಮಿಬೀಟ್ ಕನ್ನಡ'' ಮೂಲಕ ಉತ್ತರವನ್ನು ನೀಡಿದ್ದಾರೆ.
ಹೌದು, ಚೈತ್ರಾ ಕೋಟೂರ್.. ಕನ್ನಡ ಚಿತ್ರರಂಗದ ಬರಹಗಾರ್ತಿ.. ಸಹಾಯಕ ನಿರ್ದೇಶಕಿ.. ರಂಗಭೂಮಿಯಲ್ಲಿ ಅರಳಿದ ಪ್ರತಿಭೆ..ನಟಿ. ಸರಳವಾಗಿ ಹೇಳಬೇಕೆಂದರೆ ಬಹುಮುಖ ಪ್ರತಿಭೆ. ''ಕುಡುಕ ನನ್ಮಕ್ಳು'' ಚಿತ್ರದ ಮೂಲಕ ನಾಯಕಿಯಾಗಿ ಕೂಡ ಚೈತ್ರಾ ಬಡ್ತಿ ಪಡೆದಿದ್ದಾರೆ. ಇನ್ನೂ ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ಧಾರೆ. ''ಹುಡುಗರು ತುಂಬಾ ಒಳ್ಳೆಯವರು'' ಆಲ್ಬಂ ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಕೂಡ ಹಾಕಿದ್ದಾರೆ. ಇಷ್ಟೇ ಅಲ್ಲ ''ಬಿಗ್ ಬಾಸ್'' ಕನ್ನಡದ 7ನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಚೈತ್ರಾ ಹೆಚ್ಚು ಕಡಿಮೆ ಮನೆಯಲ್ಲಿ ಆರು ವಾರ ಇದ್ದರು.

ಇಂಥಾ ಚೈತ್ರಾ ಕೋಟೂರ್ ಸದ್ಯ ಮನೆಯಲ್ಲಿ ಕೊನೆಯವರೆಗೆ ಉಳಿಯುವ ಮೂರು ಸ್ಫರ್ಧಿಗಳು ಯಾರಿರಬಹುದು ಎಂದು ಊಹೆ ಮಾಡಿದ್ದಾರೆ. ಈ ಕುರಿತು ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚೈತ್ರಾ ಕೋಟೂರ್ ''ನಿಜಾ ಹೇಳಬೇಕು ಅಂದರೆ ನಾನು ಈ ಬಾರಿ ದಿನಂ ಪ್ರತಿ ''ಬಿಗ್ ಬಾಸ್'' ಕಾರ್ಯಕ್ರಮ ನೋಡ್ತಿಲ್ಲ. ಆದರೆ .. ಸಮಯ ಸಿಕ್ಕಾಗ ಕಣ್ಣಾಯಿಸುತ್ತೇನೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಸಂಚಿಕೆಯ ರೀಲ್ಸ್‌ಗಳನ್ನು ನೋಡುತ್ತಿರುತ್ತೇನೆ. ನನ್ನ ಪ್ರಕಾರ ಗಿಲ್ಲಿ ಗ್ರ್ಯಾಂಡ್ ಫಿನಾಲೆಯವರೆಗೆ ಬರುತ್ತಾರೆ. ಆ ಎಲ್ಲಾ ಸಾಧ್ಯತೆಗಳಿವೆ'' ಎಂದು ಹೇಳಿದ್ದಾರೆ.
ಗಿಲ್ಲಿ ಹೊರತು ಪಡಿಸಿದರೆ ಬೇರೆ ಯಾರು ಟಾಪ್ 5ನಲ್ಲಿ ಇರಬಹುದು ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಚೈತ್ರಾ ''ಟಾಪ್ 5ಗಿಂತ ಟಾಪ್ 3ಯಲ್ಲಿ ಯಾರಿರಬಹುದು ಅಥವಾ ಯಾರು ಬರಬಹುದು ಎಂದು ಹೇಳಬಹುದು. ಗಿಲ್ಲಿ ಹೊರತು ಪಡಿಸಿದರೆ ಅಶ್ವಿನಿ ಗೌಡ ಮತ್ತು ರಕ್ಷಿತಾ ತುಂಬಾ ಸೊಗಸಾಗಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಹೀಗಾಗಿ ನನ್ನ ಲೆಕ್ಕಾಚಾರ ಸರಿಯಾದರೆ ಗಿಲ್ಲಿ ಜೊತೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಅವರನ್ನು ನಾವು ಟಾಪ್ 3ನಲ್ಲಿ ನೋಡಬಹುದು. ಆದರೆ ಈ ಮೂವರಲ್ಲಿ ಗೆಲ್ಲೋದು ಯಾರು..? ಎಂದು ಹೇಳುವುದು ಕಷ್ಟ'' ಎಂದು ಹೇಳಿದ್ಧಾರೆ.

ಇನ್ನು ಮನೆಯಲ್ಲಿ ಉಳಿದುಕೊಂಡಿರುವ ಬಾಕಿ ಸದಸ್ಯರು ಕುರಿತು ಕೂಡ ಮೆಚ್ಚುಗೆಯ ಮಾತುಗಳನ್ನಾಡಿರುವ ಚೈತ್ರಾ, ''ಎಲ್ಲರೂ ಟ್ರೋಫಿ ಮುಡಿಗೇರಿಸಿಕೊಳ್ಳಬೇಕೆಂಬ ಆಸೆಯಲ್ಲಿ ತಮ್ಮ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ಎಲ್ಲೋ ಒಂದು ಕಡೆ ಗಿಲ್ಲಿ.. ಅಶ್ವಿನಿ ಗೌಡ ಮತ್ತು ರಕ್ಷಿತಾ ಹೊರಗಡೆ ಹೈಲೆಟ್ ಆದಂತೆ, ಮಿಂಚುತ್ತಿರುವಂತೆ, ಬೇರೆಯವರಿಂದ ಸಾಧ್ಯವಾಗಲಿಲ್ಲವೇನೋ ಎನ್ನುವುದು ನನ್ನ ವ್ಯೆಯಕ್ತಿಕ ಭಾವನೆ. ನಾನು ನೋಡಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಮೂವರ ಹವಾ ಸದ್ಯ ಜೋರಾಗಿದೆ'' ಎಂದು ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ಕನ್ನಡದ ''ಬಿಗ್ ಬಾಸ್'' ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಸದ್ಯ ಮನೆಯಿಂದ ವೈಲ್ಡ್ ಕಾರ್ಡ್ ಮೂಲಕ ಒಳ ಹೋಗಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಹೊರ ಬಂದಿದ್ದಾರೆ. ಈ ವಾರ ಮನೆಯಿಂದ ಯಾರು ಹೊರಗಡೆ ಬರುತ್ತಾರೆ...? ಕೊನೆಯವರೆಗೆ ಯಾರು ಉಳಿದುಕೊಳ್ಳುತ್ತಾರೆ..? ಚೈತ್ರಾ ಕೋಟೂರ್ ಅವರು ಹೇಳಿದಂತೆ ಟಾಪ್ 5ರಲ್ಲಿ ಗಿಲ್ಲಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಇರುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











