»   » 'ಶನಿ' ನಿರ್ದೇಶನ ಮಾಡಲು ರಾಘವೇಂದ್ರ ಒಪ್ಪಿದ್ದರ ಹಿಂದಿದೆ ಕುತೂಹಲಕಾರಿ ಸಂಗತಿ

'ಶನಿ' ನಿರ್ದೇಶನ ಮಾಡಲು ರಾಘವೇಂದ್ರ ಒಪ್ಪಿದ್ದರ ಹಿಂದಿದೆ ಕುತೂಹಲಕಾರಿ ಸಂಗತಿ

Posted By:
Subscribe to Filmibeat Kannada
'ಶನಿ' ನಿರ್ದೇಶನ ಮಾಡಲು ರಾಘವೇಂದ್ರ ಒಪ್ಪಿದ್ದರ ಹಿಂದಿದೆ ಕುತೂಹಲಕಾರಿ ಸಂಗತಿ | Filmibeat Kannada

'ಶನಿ'... ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಧಾರಾವಾಹಿ ಬಂದರೆ ಸಾಕು ಚಾನೆಲ್ ಬದಲಾವಣೆ ಮಾಡುತ್ತಿದ್ದವರು ಈಗ 'ಶನಿ' ಸೀರಿಯಲ್ ಗಾಗಿ ಕಾದು ಕುಳಿತಿರುತ್ತಾರೆ. ಸರಿಯಾದ ಸಮಯಕ್ಕೆ ನೋಡಲು ಸಾಧ್ಯವಾಗದೆ ಇದ್ದ ಪ್ರೇಕ್ಷಕರು ವೀಕೆಂಡ್ ಗಾಗಿ ಕಾದಿದ್ದು ಒಂದೇ ಬಾರಿ ಎಲ್ಲಾ ಎಪಿಸೋಡ್ ಗಳನ್ನ ನೋಡುವುದಕ್ಕೆ ಶುರು ಮಾಡಿದ್ದಾರೆ. ಯಾವುದೇ ಧಾರಾವಾಹಿ ಮಾಡಿರದಂತಹ ಮೋಡಿ 'ಶನಿ' ಸೀರಿಯಲ್ ಮಾಡುತ್ತಿದೆ.

ಕಳೆದ ವಾರ ಇದೇ 'ಫಿಲ್ಮಿಬೀಟ್' ನಲ್ಲಿ 'ಶನಿ' ಫಾತ್ರಧಾರಿಯ ಬಗ್ಗೆ ಹಾಗೂ ಕಲರ್ಸ್ ಕನ್ನಡ ವಾಹಿನಿ ಸುನೀಲ್ ರನ್ನ ಹೇಗೆ ಆಯ್ಕೆ ಮಾಡಿತ್ತು ಎಂಬುದರ ಕುರಿತ ಎಕ್ಸ್‌ ಕ್ಲೂಸಿವ್ ಮಾಹಿತಿಯನ್ನ ನೀಡಿದ್ವಿ.

ಈಗ ಅದೇ ಧಾರಾವಾಹಿಯ ಬಗ್ಗೆ ಮತ್ತಷ್ಟು ಕುತೂಹಲಕಾರಿ ಅಂಶಗಳನ್ನ ನಿಮಗಾಗಿ ತಂದಿದ್ದೇವೆ. 'ಶನಿ' ಅದ್ದೂರಿ ವೆಚ್ಚದ ಜನಮನ್ನಣೆ ಗಳಿಸಿರುವ ಸೀರಿಯಲ್. ಈ ಧಾರಾವಾಹಿಯನ್ನ ಕನ್ನಡ ಸಿನಿಮಾರಂಗಕ್ಕೆ ಹಿಟ್ ಕಮರ್ಷಿಯಲ್ ಸಿನಿಮಾ ನೀಡಿದ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಡೈರೆಕ್ಷನ್ ಮಾತ್ರವಲ್ಲದೆ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ತಾವೇ ಮುಂದೆ ನಿಂತು ಎಲ್ಲಾ ಕೆಲಸಗಳನ್ನ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ ಧಾರಾವಾಹಿ ಡೈರೆಕ್ಷನ್ ಮಾಡಲು ಒಪ್ಪಿದ್ದೇಕೆ? ಮುಂದೆ ಓದಿ...

ಸಿನಿಮಾ ಮಾಡುವ ಮುಂಚೆ ಧಾರಾವಾಹಿ ಒಪ್ಪಿದ್ದೇಕೆ.?

'ಜಗ್ಗುದಾದಾ' ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡುಕೊಂಡ ನಂತರ 'ರಾಘವೇಂದ್ರ' ತಮ್ಮದೇ ನಿರ್ಮಾಣದಲ್ಲಿ ಸಿನಿಮಾ ಪ್ರಾರಂಭ ಮಾಡಲು ಸಿದ್ದತೆ ನಡೆಸಿದ್ದರು. ಅದಷ್ಟೇ ಅಲ್ಲದೆ ಬೇರೆ ನಿರ್ಮಾಣ ಸಂಸ್ಥೆಯಿಂದ ಅವಕಾಶಗಳು ಬಂದಿತ್ತು. ಅದೇ ಸಮಯದಲ್ಲಿ ಶನಿ ಧಾರಾವಾಹಿಗೂ ಅವಕಾಶ ಹುಡುಕಿಕೊಂಡು ಬಂತು. ಆಗ ರಾಘವೇಂದ್ರ ಹೆಗಡೆ ಆಯ್ಕೆ ಮಾಡಿಕೊಂಡಿದ್ದು ಶನಿ ಧಾರಾವಾಹಿಯ ಸಂಪೂರ್ಣ ಜವಾಬ್ದಾರಿ.

ಪೌರಾಣಿಕ ಧಾರಾವಾಹಿಗಳ ಶಕ್ತಿ

'ಶನಿ' ಧಾರಾವಾಹಿಯ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿಕೊಳ್ಳುವಂತೆ ರಾಘವೇಂದ್ರ ಅವರಿಗೆ ವಯೋಕಾಂ 18 ನಿಂದ ಅವಕಾಶ ಬಂತು. ರಾಘವೇಂದ್ರ ಹೆಗಡೆ ಎರಡು ಕಾರಣಗಳಿಂದ ಈ ಧಾರಾವಾಹಿ ನಿರ್ದೇಶನ ಮಾಡಲು ಒಪ್ಪಿಗೆ ಸೂಚಿಸಿದರು. ಮೊದಲನೆಯದು ಶನಿ ದೇವರ ಮೇಲಿರುವ ಅಪಾರ ನಂಬಿಕೆ ಮತ್ತೊಂದು ಹಿಂದಿ ಕಲರ್ಸ್ ವಾಹಿನಿಯ ಎಲ್ಲಾ ಕಾರ್ಯಕ್ರಮಗಳ ಪ್ರೊಡಕ್ಷನ್ಸ್ ಕೆಲಸ ನಡೆಯುವುದು ರಾಘವೇಂದ್ರ ಅವ್ರ ಸಂಸ್ಥೆಯಲ್ಲಿ.

'ಜಗ್ಗುದಾದಾ' ಟೀಂನಿಂದ ಕೆಲಸ

ನಿರ್ದೇಶಕ ರಾಘವೇಂದ್ರ ಹೆಗಡೆ 'ಆರ್.ಹೆಚ್.ಎಂಟರ್ ಟೇನ್ಮೆಂಟ್' ಅನ್ನೋ ಕಂಪನಿಯನ್ನ ಹೊಂದಿದ್ದಾರೆ. ಇದರ ಮೂಲಕ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಪ್ರೊಡಕ್ಷನ್ಸ್ ಕೆಲಸಗಳನ್ನ ಮಾಡುತ್ತಾರೆ. ಸಾಕಷ್ಟು ವರ್ಷಗಳಿಂದಲೂ ಒಳ್ಳೆ ಔಟ್ ಪುಟ್ ನೀಡ್ತಿರೋದ್ರಿಂದ ಕಲರ್ಸ್ ಕನ್ನಡದ ಶನಿ ಧಾರಾವಾಹಿಯನ್ನೂ ಇವರಿಗೆ ನಿರ್ವಹಿಸಲು ನೀಡಲಾಗಿದೆ.

ಕನ್ನಡದ ಕಲಾವಿದರಿಗೆ ಆದ್ಯತೆ

'ಶನಿ' ಧಾರಾವಾಹಿಯಲ್ಲಿ ಕನ್ನಡದ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಆಡಿಷನ್ ಮೂಲಕ ಕಲಾವಿದರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡದ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ. ಆದರೆ ಅವರುಗಳಿಗೆ ಅವಕಾಶಗಳ ಕೊರತೆ ಇದೆ ಅನ್ನೋದು ರಾಘವೇಂದ್ರರ ಅಭಿಪ್ರಾಯ.

ಯಾರಿಗೂ ವರ್ಕ್ ಶಾಪ್ ಮಾಡಿಲ್ಲ

ಕಲಾವಿದರನ್ನ ಆಯ್ಕೆ ಮಾಡಿದ ನಂತರ ಯಾವುದೇ ಕಲಾವಿದರಿಗೂ ವರ್ಕ್ ಶಾಪ್ ಅಂತ ಮಾಡಿಲ್ಲ. ಐದು ದಿನಗಳಲ್ಲಿ ಎಲ್ಲಾ ಕಲಾವಿದರು ಅವರವರ ಪಾತ್ರಗಳಿಗೆ ಹೊಂದುಕೊಂಡಿದ್ದಾರೆ. ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದವರು ಈಗ ಪೌರಾಣಿಕ ಪಾತ್ರಧಾರಿಗಳಾಗಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಕಣ್ಣೀರು ತರಿಸಲಿದ್ದಾರೆ ಛಾಯಾ-ಶನಿ

'ಶನಿ' ಛಾಯೆಯ ಪ್ರೀತಿಯ ಪುತ್ರ, ಈಗಾಗಲೇ ತಾಯಿ ಮಗನ ಅನ್ಯೋನ್ಯತೆ ಇರುವ ಸೀನ್ ಗಳನ್ನ ನೋಡಿ ಪ್ರೇಕ್ಷಕರು ಮಾರು ಹೋಗಿದ್ದಾರೆ. ಇದೇ ವಾರಾಂತ್ಯದಲ್ಲಿ ಧಾರಾವಾಹಿ ನೋಡುವ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವ ಸೀನ್ ಗಳು ಪ್ರಸಾರವಾಗಲಿದೆ.

English summary
Exclusive Information about Kannada Serial Shani. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯವಾಗಿರೋ ಶನಿ ಧಾರಾವಾಹಿಯ ಇಂಟ್ರೆಸ್ಟಿಂಗ್ ವಿಚಾರಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada