»   » Exclusive: ಆಸ್ಟ್ರೇಲಿಯಾದಲ್ಲಿ ಅಶ್ವಿನಿ ನಕ್ಷತ್ರ ಜೋಡಿ

Exclusive: ಆಸ್ಟ್ರೇಲಿಯಾದಲ್ಲಿ ಅಶ್ವಿನಿ ನಕ್ಷತ್ರ ಜೋಡಿ

Posted By: ಮಹೇಶ್ ಮಲ್ನಾಡ್
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಈಟಿವಿ ಕನ್ನಡದ ಜನಪ್ರಿಯ ಧಾರಾವಾಹಿ 'ಅಶ್ವಿನಿ ನಕ್ಷತ್ರ' ದ ಮುಖ್ಯ ಪಾತ್ರಧಾರಿ ಜಯಕೃಷ್ಣ ಅಲಿಯಾಸ್ ಜೆಕೆ ಅವರು ತಮ್ಮ ಆನ್ ಸ್ಕ್ರೀನ್ ಪತ್ನಿ ಅಶ್ವಿನಿಯನ್ನು ಕರೆದುಕೊಂಡು ಹಾಲಿಡೇ ಟೂರ್ ಹೊಡೆಯಲು ಸಜ್ಜಾಗಿರುವುದು ವೀಕ್ಷಕರಿಗೆ ಗೊತ್ತೇ ಇದೆ. ಟಿವಿ ಜಗತ್ತಿನ ಸೂಪರ್ ಸ್ಟಾರ್ ಜೆಕೆ ದಂಪತಿ ಆಸ್ಟ್ರೇಲಿಯಾ ಟೂರ್ ಚಿತ್ರಗಳ ಒಂದು ಸಣ್ಣ ಝಲಕ್ ನಿಮಗೆ ಇಲ್ಲಿ ಸಿಗಲಿದೆ.

  ಕಾರ್ತಿಕ್ ಜಯರಾಮ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಸುದೀಪ್ ಅವರ ಕೆಂಪೇಗೌಡ, ವರದನಾಯಕ ಹಾಗೂ ದುನಿಯಾ ವಿಜಯ್ ಅವರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರಗಳಲ್ಲಿ ನೆಗಟಿವ್ ಶೇಡ್ ಪಾತ್ರಗಳಲ್ಲಿ ಕಾರ್ತಿಕ್ ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಗಲ್ಲಿ ಕ್ರಿಕೆಟ್ ಕಥೆಯುಳ್ಳ ಬೆಂಗಳೂರು 560023 ಚಿತ್ರ ತೆರೆ ಕಾಣಬೇಕಿದೆ.

  ಆದರೆ, ಕಾರ್ತಿಕ್ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಜೆಕೆಯಾಗಿ ಮೆರೆಯುತ್ತಿದ್ದಾರೆ. ಇನ್ನು ಹುಬ್ಬಳ್ಳಿ ಹುಡುಗಿ ಮಯೂರಿ ಈಗ ಅಶ್ವಿನಿಯಾಗಿ ಮನೆ ಮಾತಾಗಿದ್ದಾರೆ. ಶಶಾಂಕ್ ನಿರ್ದೇಶನದ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. [ಹೊಸ ಇತಿಹಾಸ ಸೃಷ್ಟಿಸಿದ 'ಅಗ್ನಿಸಾಕ್ಷಿ']

  ಈ ಜನಪ್ರಿಯ ಜೋಡಿ ನಡುವಿನ ದಾಂಪತ್ಯ ಟಿವಿ ವೀಕ್ಷಕರಿಗೆ ಅಚ್ಚುಮೆಚ್ಚು. ಏಕತಾನತೆಯಿಂದ ಕೂಡಿದ್ದ ಧಾರಾವಾಹಿ ಲೋಕದಲ್ಲಿ ಅಶ್ವಿನಿ ನಕ್ಷತ್ರ ಮಿನುಗುವ ತಾರೆಯಾಗಿ ಬೆಳಗುತ್ತಿದೆ. ಹೊಸ ಸಾಹಸಕ್ಕೆ ಕೈ ಹಾಕಿರುವ ಈ ತಂಡ ಒಂದು ವಾರಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದಿದೆ. ಸೂಪರ್ ಸ್ಟಾರ್ ಜೆಕೆಗಾಗಿ ಖಡಕ್ ಸಂಭಾಷಣೆ ಬರೆದಿರುವ ಯುವ ಬರಹಗಾರ ಶ್ರೀನಿಧಿ ಡಿಎಸ್ ಅವರು ಪ್ರವಾಸದ ವೇಳೆ ಜನಪ್ರಿಯ ಜೋಡಿಯ ಚಿತ್ರಗಳನ್ನು ಕ್ಲಿಕ್ಕಿಸಿ ನಮಗೆ ಕಳಿಸಿದ್ದಾರೆ.. ಅಸ್ಟ್ರೇಲಿಯಾದಲ್ಲಿ ಅಶ್ವಿನಿ ನಕ್ಷತ್ರ ತಂಡ ಚಿತ್ರಗಳು ನಿಮ್ಮ ಮುಂದೆ...

  ಅಶ್ವಿನಿ ಇಚ್ಛೆಯಂತೆ ಆಸ್ಟ್ರೇಲಿಯಾ ಪ್ರವಾಸ
    

  ಅಶ್ವಿನಿ ಇಚ್ಛೆಯಂತೆ ಆಸ್ಟ್ರೇಲಿಯಾ ಪ್ರವಾಸ

  ಕಥೆಗೆ ಪೂರಕವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಾಗುತ್ತಿದ್ದು, ಈಗಷ್ಟೇ ನಮ್ಮ ಕಥಾ ನಾಯಕ ನಾಯಕಿ ಸಂಕಷ್ಟದಿಂದ ಹೊರಬಂದಿರುತ್ತಾರೆ. ಈ ಸಮಯದಲ್ಲಿ ಹೆಂಡತಿಯನ್ನು ಪ್ರವಾಸಕ್ಕೆ ಕರೆದೊಯ್ಯಲು ಇಚ್ಛಿಸುತ್ತಾನೆ. ಈ ಬಗ್ಗೆ ಪತ್ನಿ ಅಶ್ವಿನಿಯನ್ನು ಪ್ರಶ್ನಿಸಿ ಅವಳ ಮುಂದೆ ಭೂಪಟವನ್ನು ಹರಡುತ್ತಾನೆ. ಅಶ್ವಿನಿ ನನಗೆ ಚಿಕ್ಕಂದಿನಿಂದಲೂ ಆಸ್ಟ್ರೇಲಿಯಾ ಇಷ್ಟ ಎನ್ನುತ್ತಾಳೆ. ಅದರಂತೆ ಜೆಕೆ ಆಸ್ಟ್ರೇಲಿಯಾಕ್ಕೆ ಟಿಕೆಟ್ ಬುಕ್ ಮಾಡುವಂತೆ ಜೆನ್ನಿಗೆ ಹೇಳುತ್ತಾನೆ.

  ಕನ್ನಡ ಕಿರುತೆರೆಯಲ್ಲಿ ಇದೇ ಮೊದಲು
    

  ಕನ್ನಡ ಕಿರುತೆರೆಯಲ್ಲಿ ಇದೇ ಮೊದಲು

  ವಿದೇಶದಲ್ಲಿ ಕನ್ನಡ ಧಾರಾವಾಹಿ ತಂಡವೊಂದು ಒಂದು ವಾರಗಳ ಕಾಲ ಶೂಟಿಂಗ್ ಮಾಡಿ ಬಂದಿರುವುದು ಇದೇ ಮೊದಲು. ಈ ಮುಂಚೆ ಧಾರಾವಾಹಿಯೊಂದರ ಮುಖ್ಯಪಾತ್ರಧಾರಿಗಳು ಮಾತ್ರ ವಿದೇಶಿ ಪ್ರವಾಸ ಮಾಡಿದ್ದವು.ಆದರೆ, ಅಶ್ವಿನಿ ನಕ್ಷತ್ರದ ನಾಯಕ ನಾಯಕಿ ಜೊತೆಗೆ ತಾಂತ್ರಿಕ ವರ್ಗವಲ್ಲದೆ, ಕಥಾ ವಿಭಾಗದ ಸಂಭಾಷಣೆಗಾರರು, ಸ್ಕ್ರಿಪ್ಟ್ ವಿಭಾಗದವರೆಲ್ಲರನ್ನು ಕರೆದೊಯ್ದು ಹೊಸ ದಾಖಲೆ ಬರೆದಿದ್ದಾರೆ.

  ಆಸ್ಟ್ರೇಲಿಯಾ ವಿವಿಧ ಸ್ಥಳಗಳಲ್ಲಿ ಶೂಟಿಂಗ್
    

  ಆಸ್ಟ್ರೇಲಿಯಾ ವಿವಿಧ ಸ್ಥಳಗಳಲ್ಲಿ ಶೂಟಿಂಗ್

  ಆಸ್ಟ್ರೇಲಿಯಾ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದ್ದು, 10-12 ಜನರ ತಂಡ ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

  ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದಾರೆ?
    

  ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದಾರೆ?

  ಆಸ್ಟ್ರೇಲಿಯಾದ ಬ್ರಿಸ್ಬೇನ್, ಕ್ವೀನ್ಸ್ ಲ್ಯಾಂಡ್ ಸುತ್ತ ಮುತ್ತಾ, ಗಬ್ಬಾ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಲಾಗಿದೆ.

  ಮಧುಚಂದ್ರಕ್ಕೆ ತೆರಳಿದ ಜನಪ್ರಿಯ ಜೋಡಿ
    

  ಮಧುಚಂದ್ರಕ್ಕೆ ತೆರಳಿದ ಜನಪ್ರಿಯ ಜೋಡಿ

  ಮಧುಚಂದ್ರಕ್ಕೆ ತೆರಳಿದ ಜನಪ್ರಿಯ ಜೋಡಿ ಜೆಕೆಹಾಗೂ ಅಶ್ವಿನಿ ಅವರನ್ನು ಸ್ವಾಗತಿಸಲು ಆಸ್ಟ್ರೇಲಿಯಾದಲ್ಲಿ ಜೆಕೆ ಗೆಳತಿಯೊಬ್ಬರು ಇದ್ದಾರೆ ಎಂಬುದು ಈಗಾಗಲೇ ವೀಕ್ಷಕರಿಗೆ ಗೊತ್ತಾಗಿದೆ. ಅದರೆ, ಯಾರು ಈ ಪಾತ್ರ ನಿರ್ವಹಿಸಿದ್ದಾರೆ ಎಂಬುದನ್ನು ಅಶ್ವಿನಿ ನಕ್ಷತ್ರ ತಂಡ ಗುಟ್ಟಾಗಿ ಇಡುವ ಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ.

  ಆಸ್ಟ್ರೇಲಿಯಾದ ಸುಂದರ ಚಿತ್ರಗಳು
    

  ಆಸ್ಟ್ರೇಲಿಯಾದ ಸುಂದರ ಚಿತ್ರಗಳು

  ದ್ವೀಪರಾಷ್ಟ್ರ ಆಸ್ಟ್ರೇಲಿಯಾದ ಸುಂದರ ಚಿತ್ರಗಳನ್ನು ಕಳಿಸಿರುವ ಶ್ರೀನಿಧಿ ಡಿ.ಎಸ್

  ಫೇಸ್ ಬುಕ್ ನಲ್ಲೂ ಜೆಕೆ ಜನಪ್ರಿಯ
    

  ಫೇಸ್ ಬುಕ್ ನಲ್ಲೂ ಜೆಕೆ ಜನಪ್ರಿಯ

  ಜೆಕೆ ಹಾಗೂ ಅಶ್ವಿನಿ ಜೋಡಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲೂ ಜನಪ್ರಿಯವಾಗಿದೆ. ಫೇಸ್ ಬುಕ್ ಪುಟದಲ್ಲಿ ಜೆಕೆ ಸರ್ಫಿಂಗ್ ಮಾಡುವ ಚಿತ್ರ, ಕ್ವೀನ್ಸ್ ಲ್ಯಾಂಡ್ ನಲ್ಲಿ ಜೆಕೆ-ಅಶ್ವಿನಿ ಇರುವ ವಿಡಿಯೋ ತುಣುಕು ಹಾಕುವ ಮೂಲಕ ಜನರ ಕುತೂಹಲ ಹೆಚ್ಚಿಸಲಾಗಿದೆ.

  English summary
  Actor Karthik Jayaram aka JK, who has become household name in Karnataka with his appearance in ETV Kannada Serial Ashwini Nakshatra is taking his on screen wife Ashwini to Australia tour. Here the exclusive pictures and details
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more