BBK10: ವೋಟಿಂಗ್ ಪೋಲ್ ತೋರಿಸಿ ಎಂದಿದ್ದ ರಕ್ಷಕ್: ದಿಢೀರ್ ಲೀಕ್ ಆಯ್ತಾ ಲಿಸ್ಟ್?

ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. 4 ವಾರಕ್ಕೆ ಆಟ ಮುಗಿಸಿ ಎಲಿಮಿನೇಟ್ ಆಗಿದ್ದಾರೆ. ತಮ್ಮ ಬಿಲ್ಡಪ್ ಮಾತುಗಳಿಂದ ಸದ್ದು ಮಾಡಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ರಕ್ಷಕ್ ಮನೆಯೊಳಗೆ ಸೈಲೆಂಟ್ ಆಗಿದ್ದರು.

ಬಿಗ್‌ಬಾಸ್ ಮನೆಯಿಂದ ಹೊರ ಬಂದ ರಕ್ಷಕ್ ಬುಲೆಟ್ ತಮ್ಮನ್ನು ಎಲಿಮಿನೇಟ್ ಮಾಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನಾನು ಇನ್ನು ಬಿಗ್‌ಬಾಸ್ ಮನೆಯಲ್ಲಿ ಇರಬೇಕಿತ್ತು. "ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್‌. ಮೋಸ್ಟ್ಲಿ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ" ಎಂದು ಜಿಯೋ ಸಿನಿಮಾ ಸಂದರ್ಶನವೊಂದರಲ್ಲಿ ಹೇಳಿದ್ದರು.

Fact Check: rakshak bullet, Did Bigg boss kannada season 10 voting list leaked? screenshot goes viral

"ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸುತ್ತೆ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. 'ಉತ್ತಮ' ತಗೊಂಡೆ. ಆ ಬಗ್ಗೆ ಖುಷಿಯಿದೆ" ಎಂದಿದ್ದರು.

ತಮ್ಮ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ರಕ್ಷಕ್, ದೊಡ್ಮನೆ ಒಳಗೆ ಅಷ್ಟಾಗಿ ಸದ್ದು ಮಾಡಲಿಲ್ಲ. ನ್ಯೂಸ್‌ ಫಸ್ಟ್ ವಾಹಿಸಿ ಸಂದರ್ಶನದಲ್ಲಿ ನಿಮಗೆ ಯಾಕೆ ವೀಕ್ಷಕರ ವೋಟ್ ಹೆಚ್ಚು ಸಿಕ್ಕಿಲ್ಲ ಎಂದ ಕೇಳಿದ್ದಕ್ಕೆ "ನನಗೆ ವೋಟಿಂಗ್ ಪೋಲ್ ತೋರಿಸಿ. ನಿಮಗೆ ವೋಟಿಂಗ್ ಪೋಲ್ ಎಷ್ಟು ಆಗಿದೆ ಗೊತ್ತಾ? ಆ ಫ್ರೂಪ್ ನನಗೆ ಸಿಕ್ಕರೆ ನಾನು ಹೇಳ್ತೀನಿ. ನನಗೆ ಎಷ್ಟು ವೋಟ್ ಬಿದ್ದಿದೆ ಎನ್ನುವುದು ನನಗೂ ಯಕ್ಷ ಪ್ರಶ್ನೆಯಾಗಿದೆ. ಸ್ಪರ್ಧಿಗಳ ಹೆಸರು ನಾನು ಹೇಳಲ್ಲ. ಅಲ್ಲಿರುವವರಿಗಿಂತ ನಾನು ಕಳಪೆನಾ? ನಾನು ಒಳಗೆ ಹೋಗಿ ಜನರನ್ನು ಸಂಪಾದಿಸಿದವನಲ್ಲ. ಹೊರಗಡೆ ಇದ್ದಾಗಲೇ ಜನರನ್ನು ಸಂಪಾದಿಸಿ ಒಳಗೆ ಹೋಗಿದ್ದು" ಎಂದಿದ್ದರು.

ರಕ್ಷಕ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಿಗ್‌ಬಾಸ್ ಸೀಸನ್ 10 ವೋಟಿಂಗ್ ಲಿಸ್ಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ವೈರಲ್ ಆಗ್ತಿದೆ. ಈ ವೋಟಿಂಗ್ ಪೋಲ್ ಲಿಸ್ಟ್ ರಕ್ಷಕ್‌ಗೆ ತೋರಿಸಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಆ ಫೋಟೊದರಲ್ಲಿ ಯಾರಿಗೆ ಎಷ್ಟು ವೋಟ್ ಬಂದಿದೆ ಎನ್ನುವುದನ್ನು ನಮೂದಿಸಲಾಗಿದೆ.

Fact Check: rakshak bullet, Did Bigg boss kannada season 10 voting list leaked? screenshot goes viral

ವರ್ತೂರು ಸಂತೋಷ್‌ಗೆ 11398, ವಿನಯ್‌ಗೆ 3761, ಮೈಕೆಲ್ 2439, ಸಿರಿ 2012, ತುಕಾಲಿ ಸಂತು 1126, ತನಿಷಾ 3820, ಸ್ನೇಹಿತ್ 1459, ಕಾರ್ತಿಕ್ 16620, ರಕ್ಷಕ್ 1157 ವೋಟ್ ಸಿಕ್ಕಿದೆ ಎಂದು ಹೇಳಲಾಗಿದೆ. ಆದರೆ ಇದು ನಿಜವಾಗಿಯೂ ಬಿಗ್‌ಬಾಸ್ ಕನ್ನಡ ಸೀಸನ್ -10ಕ್ಕೆ ವೀಕ್ಷಕರು ಕೊಟ್ಟ ವೋಟಿಂಗ್ ಲೆಕ್ಕನಾ? ಅನ್ನೋದರ ಬಗ್ಗೆ ಖಚಿತ ಮಾಹಿತಿ ಇಲ್ಲ. ವೋಟಿಂಗ್ ವಿಚಾರವನ್ನು ಯಾವಾಗಲೂ ವಾಹಿನಿ ಸೀಕ್ರೆಟ್ ಆಗಿಯೇ ಇಟ್ಟಿರುತ್ತದೆ. ಆದರೆ ಈ ಲಿಸ್ಟ್ ಮಾತ್ರ ವೈರಲ್ ಆಗಿ ಸಖತ್ ಸದ್ದು ಮಾಡ್ತಿದೆ.

ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 10 ಈಗ 27ನೇ ದಿನಕ್ಕೆ ಕಾಲಿಟ್ಟಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಶೋ ನೇರ ಪ್ರಸಾರವಾಗುತ್ತಿದೆ. ವೀಕೆಂಡ್‌ನಲ್ಲಿ ಕಿಚ್ಚ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ವೀಕೆಂಡ್‌ನಲ್ಲಿ ವೀಕ್ಷಕರ ರೆಸ್ಪಾನ್ಸ್ ಜೋರಾಗಿದೆ. ಕಳೆದ ವಾರ ಮನೆಯಲ್ಲಿ ಬಳೆ ವಿಚಾರದ ಬಗ್ಗೆ ನಡೆದ ಚರ್ಚೆಗೆ ಸುದೀಪ್ ಸರಿಯಾದ ರೀತಿಯಲ್ಲಿ ತೆರೆ ಎಳೆದಿದ್ದರು. ವಿನಯ್ ಗೌಡಗೆ ತಕ್ಕ ಪಾಠ ಕಲಿಸಿದ್ದರು. ಈ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಕ್ಷಕ್ ಬಿಗ್‌ಬಾಸ್ ಮನೆಯೊಳಗೆ ಅಷ್ಟೇನು ಅಗ್ರೆಸಿವ್ ಆಗಿರಲಿಲ್ಲ. ಹೊರಗಡೆ ಇದ್ದಾಗ ರಕ್ಷಕ್ ಮಾತುಗಳು ಕೇಳಿದವರು, ಮನೆಯೊಳಗೆ ಆಟ ಜೋರಾಗಿರುತ್ತದೆ ಎಂದುಕೊಂಡಿದ್ದರು. ಆದರೆ ಉಳಿದವರಿಗೆ ಹೋಲಿಸಿದರೆ ರಕ್ಷಕ್ ಸಪ್ಪೆ ಎನಿಸಿಬಿಟ್ಟರು. ಈ ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿಯ ಆಟ ಮಜವಾಗಿದೆ. ಕೆಲವರು ಕೃತಕವಾಗಿಯಾದರೂ ಅದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ ರಕ್ಷಕ್ ಈ ವಿಚಾರದಲ್ಲಿ ಹಿಂದೆ ಬಿದ್ದರು. ಈ ಎಲ್ಲಾ ಕಾರಣಗಳಿಂದ ಎಲಿಮಿನೇಟ್ ಆದರು.

More from Filmibeat

English summary
BBK10: netizens troll rakshak bullet, with voting list screenshot,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X