Family Gangstars: ಶೂಟಿಂಗ್ ಬಿಟ್ಟು ಗೋವಾದಲ್ಲಿ ಬೀಡು ಬಿಟ್ಟ ಕಲರ್ಸ್ ಕನ್ನಡ ಮುದ್ದುಮಣಿಗಳು..!
ಕಲಾವಿದರೆಲ್ಲರನ್ನು ಒಟ್ಟುಗೂಡಿಸುವುದೇ ಒಂದು ದೊಡ್ಡ ಸಾಹಸ. ಒಬ್ಬರಿಗೆ ಒಂದು ದಿನ ಫ್ರೀ ಇದ್ರೆ ಇನ್ನೊಬ್ಬರಿಗೆ ರಜೆಯೇ ಸಿಗುವುದಿಲ್ಲ. ಒಬ್ಬರು ಅಥವಾ ಇಬ್ಬರು ಹೇಗಾದರೂ ಬ್ಯಾಲೆನ್ಸ್ ಮಾಡಬಹುದು. ಆದರೆ ಒಂದಿಡಿ ಗ್ರೂಪ್ ಸಮಯ ಮಾಡಿಕೊಂಡು ಟ್ರಿಪ್ ಹೋಗೋದು ಅಂದ್ರೆ ಸುಮ್ನೆನಾ. ಅದನ್ನ ಇದೀಗ ಕಲರ್ಸ್ ಕನ್ನಡದ ತಾರೆಯರು ಮಾಡಿದ್ದಾರೆ. ಸಕ್ಸಸ್ ಫುಲಿ ಒಂದೊಳ್ಳೆ ಮನರಂಜನೆಯನ್ನು ಪಡೆದಿದ್ದಾರೆ.
ಐಶ್ವರ್ಯಾ, ನಿಶಾ, ನಿವೇದಿತಾ ಗೌಡ, ಗ್ರೀಷ್ಮಾ ಎಲ್ಲರೂ ಕುಟುಂಬಸ್ಥರೊಂದಿಗೆ ಗೋವಾದಲ್ಲಿ ಮಿಂಚಿದ್ದಾರೆ. ಗ್ರೀಷ್ಮಾ ಮಕ್ಕಳೊಂದಿಗೆ ಬಂದಿದ್ದರೆ, ಐಶ್ವರ್ಯಾ, ನಿಶಾ ಪಾಟ್ನರ್ ಜೊತೆ ಬಂದಿದ್ದಾರೆ. ಇನ್ನು ಹಲವು ಸ್ನೇಹಿತೆಯರು ಈ ಟ್ರಿಪ್‌ನಲ್ಲಿ ಸೇರಿಕೊಂಡಿದ್ದಾರೆ.

ಗೋವಾದಲ್ಲಿ ನಿವೇದಿತಾ ಮಿಂಚಿಂಗ್
ಶೂಟಿಂಗ್ ಶೂಟಿಂಗ್ ಅಂತ ಬ್ಯುಸಿ ಇರುವ ನಟಿ ಮಣಿಯರೆಲ್ಲಾ ಫ್ರೆಂಡ್ಸ್ ಮತ್ತು ಪಾಟ್ನರ್ಸ್ ಜೊತೆಗೆ ಟ್ರಿಪ್ ಹೋಗಿದ್ದಾರೆ. ಗ್ರೀಷ್ಮಾ ತನ್ನ ಮಕ್ಕಳ ಜೊತೆಗೆ ಟ್ರಿಪ್ ಹೊರಟರೆ, ನಿವೇದಿತಾ ಪಾಟ್ನರ್ ಅನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಹೋಗ್ತಾ ಇದ್ದೀವಿ ಅಂತ ಎರಡು ದಿನಗಳ ಹಿಂದೆಯೆ ಎಲ್ಲರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ನೀಡಿದ್ದರು. ಶೂಟಿಂಗ್ ನಡುವೆ ಇಂಥದ್ದೊಂದು ಬ್ರೇಕ್ ಸಿಗುವುದೇ ಹೆಚ್ಚು. ಸಿಕ್ಕಾಗ ಅದನ್ನು ಒಂದೊಳ್ಳೆ ಮನರಂಜನೆಗಾಗಿ ಉಪಯೋಗಿಸಿಕೊಳ್ಳುವುದು ಇನ್ನು ಉತ್ತಮವಾದಂತದ್ದು.
ಸೃಜನ್ ಪ್ರೊಡಕ್ಷನ್‌ನಲ್ಲಿದ್ದವರಿಗೆ ರಜೆ ಸಿಕ್ತಾ
ಸದ್ಯ ಕಲರ್ಸ್ ಕನ್ನಡದಲ್ಲಿ ಸೃಜನ್ ಪ್ರೊಡಕ್ಷನ್‌ನಿಂದ ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್ ರಿಯಾಲಿಟಿ ಶೋ ನಡೀತಾ ಇದೆ. ಆ ಶೋನಲ್ಲಿ 'ರಾಜಾರಾಣಿ', 'ಗಿಚ್ಚಿಗಿಲಿ', 'ರಾಮಾಚಾರಿ', 'ಲಕ್ಷ್ಮೀಬಾರಮ್ಮ', 'ಭಾಗ್ಯಲಕ್ಷ್ಮೀ' ಹೀಗೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ತಂಡ ಭಾಗವಹಿಸುತ್ತದೆ. ಒಂದೊಂದು ವಾರ ನಾಲ್ಕು ತಂಡಗಳ ಗೇಮ್ ಶೋ ಇರುತ್ತದೆ. ಈ ಶೋನಲ್ಲಿ ನಿವೇದಿತಾ, ಐಶ್ವರ್ಯಾ, ನಿಶಾ ಕೂಡ ಸ್ಪರ್ಧಿಗಳೇ. ಆದರೂ ಶೋನಿಂದ ಕೊಂಚ ಬ್ರೇಕ್ ಪಡೆದು ಗೋವಾಗೆ ಹಾರಿದ್ದಾರೆ. ಅಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ.

ರೀಲ್ಸ್‌ನಲ್ಲಿ ಫುಲ್ ಬ್ಯುಸಿ
ರೀಲ್ಸ್ ಟ್ರೆಂಡಿಂಗ್ ಆದ್ಮೇಲಂತು ನಮ್ಮ ನಟಿಮಣಿಯರ ಯಾರದ್ದೇ ಇನ್‌ಸ್ಟಾಗ್ರಾಂ ನೋಡಿದ್ರೆ ರೀಲ್ಸ್ ಹಾವಳಿ ಇದ್ದೆ ಇರುತ್ತದೆ. ಜೊತೆಗೆ ನಟಿಯರು ಬ್ಲಾಗರ್ಸ್ ಕೂಡ ಆಗ್ಬಿಟ್ಟಿದ್ದಾರೆ. ಎಲ್ಲಾದ್ರೂ ಹೋಗುವ, ಬರುವ, ತಿನ್ನುವ, ಕಾಲ ಕಳೆಯುವ ಎಲ್ಲಾ ವಿಷಯಗಳನ್ನು ರೀಲ್ಸ್ ರೀತಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಾರೆ. ಇನ್ನು ಗೋವಾಗೆ, ಅದರಲ್ಲೂ ತಂಡೋಪತಂಡವಾಗಿ ಹೋದಾಗ ಸುಮ್ಮನೇ ಇರುತ್ತಾರೆಯೇ ಒಳ್ಳೊಳ್ಳೆ ಜಾಗದಲ್ಲಿ ನಿಂತು ರೀಲ್ಸ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ.
ನಿವೇದಿತಾ ಸಿಂಗಲ್ ಪೋಸ್
ಇನ್ನು ನಿವೇದಿತಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಅದರ ಜೊತೆಗೆ ಚಂದನ್ ಶೆಟ್ಟಿ ಜೊತೆಗೇನೆ ಫನ್ ಮಾಡೋದು, ಎಕ್ಸ್‌ಪೆರಿಮೆಂಟ್ ಮಾಡೋದು, ಡ್ಯಾನ್ಸ್ ಮಾಡೋದು ಎಲ್ಲಾ. ನಿವೇದಿತಾ ಹಂಚಿಕೊಂಡಿರುವ ಹೆಚ್ಚಿನ ವಿಡಿಯೋಗಳನ್ನು ಚಂದನ್ ಶೆಟ್ಟಿಯ ಜೊತೆಗಿರುವ ವಿಡಿಯೋಗಳೇ ಹೆಚ್ಚು. ಆದರೆ, ಗೋವಾದ ವಿಡಿಯೋಗಳಲ್ಲಿ ಚಂದನ್ ಶೆಟ್ಟಿ ಮಿಸ್ ಆಗಿದ್ದಾರೆ. ಒಬ್ಬರೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅದರ ಜೊತೆಗೆ ಮಧ್ಯೆ ಮಧ್ಯೆ ಚಂದನ್ ಶೆಟ್ಟಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗೋವಾದಲ್ಲೂ ಚಂದನ್ ಶೆಟ್ಟಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಗೊತ್ತಾಗುತ್ತಿದೆ.


Click it and Unblock the Notifications











