»   » 'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ನಡೆಯುತ್ತಿರುವುದು ಈ ಪುಟಾಣಿಗಾಗಿ.!

'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ನಡೆಯುತ್ತಿರುವುದು ಈ ಪುಟಾಣಿಗಾಗಿ.!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಮುಕ್ತಾಯದ ಹಂತ ತಲುಪಿದೆ.

ಇಪ್ಪತ್ತು ವಾರಗಳ ಹಿಂದೆ ಶುರುವಾಗಿದ್ದ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ನಲವತ್ತು ಸಂಚಿಕೆಗಳು ಪ್ರಸಾರ ಆಗಿದ್ದು ಎಂಬತ್ತು ಕುಟುಂಬ, ನಾರೂರು ಜನ ಭಾಗವಹಿಸಿದ್ದಾರೆ.

ಕುಟುಂಬದ ಸಂಬಂಧಗಳನ್ನು ಬಲಪಡಿಸುವ 'ಫ್ಯಾಮಿಲಿ ಪವರ್' ಶೋನಲ್ಲಿ ಇದೀಗ ಪ್ರಚೇತ್ ಎಂಬ ಪುಟಾಣಿಗಾಗಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಕಲರ್ಸ್ ಕುಟುಂಬದ ನಾಲ್ಕು ತಂಡಗಳು ಪ್ರಚೇತ್ ಎಂಬ ಪುಟ್ಟ ಕಂದಮ್ಮನಿಗಾಗಿ ಸೆಣಸಾಡುತ್ತಿದೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಯಾರು ಈ ಪ್ರಚೇತ್.?

ದಾವಣಗೆರೆಯ ಅರ್ಚಕರ ಕುಟುಂಬದ ಮೂರು ವರ್ಷದ ಮುದ್ದು ಹುಡುಗ ಈ ಪ್ರಚೇತ್. ಮುದ್ದು ಮುದ್ದಾಗಿ ಕಾಣುವ ಪ್ರಚೇತ್ ಗೆ ಕಿವಿ ಕೇಳಲ್ಲ. ಮಾತು ಬರಲ್ಲ. ಈಗಾಗಲೇ ಪ್ರಚೇತ್ ಗಾಗಿ ಒಂದು ಆಪರೇಶನ್ ಆಗಿ, ಒಂದು ಕಿವಿಗೆ ಕಾಕ್ಲಿಯರ್ ಇಂಪ್ಲಾಂಟ್ ಆಗಿದೆ.

'ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ನಡೆಯುತ್ತಿರುವುದು ಈ ಪುಟಾಣಿಗಾಗಿ.!

ಇನ್ನೊಂದು ಆಪರೇಶನ್ ಆಗಬೇಕು.!

ಎಲ್ಲರಂತೆ ಪ್ರಚೇತ್ ಗೆ ಕಿವಿ ಕೇಳಬೇಕು, ಮಾತು ಬರಬೇಕು ಅಂದ್ರೆ ಇನ್ನೊಂದು ಆಪರೇಶನ್ ಆಗಬೇಕು. ಇನ್ನೊಂದು ಕಿವಿಗೂ ಕಾಕ್ಲಿಯರ್ ಇಂಪ್ಲಾಂಟ್ ಮಾಡಿಸಬೇಕು. ಇಷ್ಟೆಲ್ಲ ಆಗಬೇಕು ಅಂದ್ರೆ, ಹದಿನಾಲ್ಕು ಲಕ್ಷ ರೂಪಾಯಿ ಬೇಕು.

ಫ್ಯಾಮಿಲಿ ಪವರ್ ನಿಂದ ಬೆಳಗಿತು ಹಲವರ ಬಾಳು

ಪ್ರಚೇತ್ ತಾಯಿಯ ಆಸೆ ಏನು?

''ಒಂದು ದಿನ ನಾನು ಪ್ರಚೇತ್ ಅಂತ ಕೂಗಿದರೆ, ಅಮ್ಮ ಅಂತ ಕೂಗಿ ತಿರುಗಿ ನೋಡಬೇಕು ಅದಕ್ಕೋಸ್ಕರ ನಾನು ಕಾಯುತ್ತಿದ್ದೇನೆ'' ಅಂತಾರೆ ಪ್ರಚೇತ್ ತಾಯಿ.

ಪುನೀತ್ ನಿರೂಪಣೆಯ 'ಫ್ಯಾಮಿಲಿ ಪವರ್' ಕಾರ್ಯಕ್ರಮಕ್ಕೆ ಇದೇ ವಾರ ಶುಭಂ.!

ಪ್ರಚೇತ್ ಚಿಕಿತ್ಸೆಗಾಗಿ 'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ

ಮೂರು ವರ್ಷದ ಪ್ರಚೇತ್ ಚಿಕಿತ್ಸೆ ವೆಚ್ಚಕ್ಕಾಗಿ 'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫೈನಲ್ ನಲ್ಲಿ ಗೆಲುವು ಸಾಧಿಸುವ ತಂಡದ ಬಹುಮಾನ ಹಣ ಪ್ರಚೇತ್ ಚಿಕಿತ್ಸೆ ವೆಚ್ಚಕ್ಕೆ ನೀಡಲಾಗುವುದು.

ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ

ಪ್ರೇಚತ್ ಕುಟುಂಬ 'ಫ್ಯಾಮಿಲಿ ಪವರ್'ನಲ್ಲಿ

ಈಗಾಗಲೇ ಪ್ರಚೇತ್ ಕುಟುಂಬ 'ಫ್ಯಾಮಿಲಿ ಪವರ್'ಗೆ ಬಂದು ಆಟ ಆಡಿದೆ. ಆದ್ರೆ, ಅವರು ಹೆಚ್ಚು ದುಡ್ಡು ಗೆಲ್ಲಲು ಸಾಧ್ಯ ಆಗಲಿಲ್ಲ. ಅವರ ಪರವಾಗಿ ಕಲರ್ಸ್ ಕನ್ನಡದ ಕುಟುಂಬ ಗ್ರ್ಯಾಂಡ್ ಫಿನಾಲೆಯಲ್ಲಿ ಸೆಣಸಾಡುತ್ತಿದೆ.

ಫ್ಯಾಮಿಲಿ ಪವರ್ ನಲ್ಲಿ ಸೀರಿಯಲ್ ಸ್ಟಾರ್ ಗಳ ಹಣಾಹಣಿ

ನಾಲ್ಕು ತಂಡಗಳು

'ಬಿಗ್ ಬಾಸ್', 'ಶನಿ', 'ಅಗ್ನಿಸಾಕ್ಷಿ', 'ರಾಧಾ ರಮಣ' ಧಾರಾವಾಹಿಯ ತಂಡಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಂಡಿವೆ. ಎರಡು ರೌಂಡ್ ಪೂರ್ಣವಾದ ಬಳಿಕ ಗೆಲ್ಲುವ ರೇಸ್ ನಿಂದ 'ಅಗ್ನಿಸಾಕ್ಷಿ' ಹೊರಬಿದ್ದಿದೆ. ಯಾವ ತಂಡ ಗೆಲುವನ್ನು ಮುಡಿಗೇರಿಸಿಕೊಳ್ಳುತ್ತದೆಯೋ ನೋಡಬೇಕು

English summary
Family Power, reality show hosted by Power Star Puneeth Rajkumar grand finale is conducted mainly to give Financial Assistance for 3 year old Prachet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X