'ಫ್ಯಾಮಿಲಿ ಪವರ್'ನಿಂದ ಪ್ರಚೇತ್ ಚಿಕಿತ್ಸೆಗೆ ಸಿಕ್ತು ಒಂಬತ್ತು ಲಕ್ಷ ರೂಪಾಯಿ.!

By Harshitha

Recommended Video

ಎಲ್ಲರ ಹೃದಯ ಗೆದ್ದ ಪ್ರಚೇತ್ | family power's Pracheth won hearts | Filmibeat Kannada

ವಿವಿಧ ಕಾರ್ಯಕ್ರಮಗಳ ಮೂಲಕ ಮನರಂಜನೆ ಜೊತೆಗೆ ಅವಶ್ಯಕತೆ ಇರುವವರಿಗೆ ಕಲರ್ಸ್ ಕನ್ನಡ ವಾಹಿನಿ ಆರ್ಥಿಕ ನೆರವು ನೀಡುತ್ತಲೇ ಬಂದಿದೆ. 'ಸೂಪರ್ ಮಿನಿಟ್' ಮೂಲಕ ಪುಟ್ಟ ಹುಡುಗಿ ಅಮೂಲ್ಯ ಹಾಗೂ ಬ್ಲಡ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಐದುವರೆ ವರ್ಷದ ಪೀಯುಷ್ ಚಿಕಿತ್ಸೆಗೆ ಕಲರ್ಸ್ ಕನ್ನಡ ವಾಹಿನಿ ಆರ್ಥಿಕ ಸಹಾಯ ಮಾಡಿತ್ತು.

ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋನಲ್ಲಿ ಕಿವಿ ಕೇಳದ, ಮಾತು ಬಾರದ ಪ್ರಚೇತ್ ಚಿಕಿತ್ಸೆಗಾಗಿ ಕಲರ್ಸ್ ಕನ್ನಡ ವಾಹಿನಿ ಸಹಾಯ ಹಸ್ತ ಚಾಚಿದೆ.

'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಚೇತ್ ಪರವಾಗಿ ಕಲರ್ಸ್ ಕನ್ನಡ ಕುಟುಂಬದವರು ಸೆಣಸಾಡಿ ಒಂಬತ್ತು ಲಕ್ಷ ರೂಪಾಯಿ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಗೆದ್ದ ಒಂಬತ್ತು ಲಕ್ಷ ರೂಪಾಯಿ ಬಹುಮಾನ ಹಣ ಪ್ರಚೇತ್ ಚಿಕಿತ್ಸೆಗೆ ನೀಡಲಾಗುತ್ತದೆ. ಮುಂದೆ ಓದಿರಿ...

ಗೆಲುವಿನ ನಗೆ ಬೀರಿದ 'ರಾಧಾ ರಮಣ' ತಂಡ

ಗೆಲುವಿನ ನಗೆ ಬೀರಿದ 'ರಾಧಾ ರಮಣ' ತಂಡ

'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಕಲರ್ಸ್ ಕುಟುಂಬದಿಂದ 'ಬಿಗ್ ಬಾಸ್', 'ಶನಿ', 'ಅಗ್ನಿಸಾಕ್ಷಿ' ಹಾಗೂ 'ರಾಧಾ ರಮಣ' ಧಾರಾವಾಹಿ ತಂಡಗಳು ಭಾಗವಹಿಸಿದ್ವು. ಲಕ್ಷ್ಮಿ ಪಟಾಕಿ, ಗೇಮ್ಸ್ ಬಾಂಡ್ ಸೇರಿದಂತೆ ವಿವಿಧ ರೌಂಡ್ ಗಳಲ್ಲಿ ಜಯಭೇರಿ ಬಾರಿಸಿ, ಇತರೆ ತಂಡಗಳನ್ನ ಹಿಂದಿಕ್ಕಿ 'ಲಕ್ಷ ಪ್ರಶ್ನೆ' ರೌಂಡ್ ಗೆ ಕಾಲಿಟ್ಟಿದ್ದು 'ರಾಧಾ ರಮಣ' ಟೀಮ್. 'ಲಕ್ಷ ಪ್ರಶ್ನೆ' ರೌಂಡ್ ನಲ್ಲಿ ಪುಟಾಣಿ ಪ್ರಚೇತ್ ಗಾಗಿ ಒಂಬತ್ತು ಲಕ್ಷ ಗೆದ್ದು ಗೆಲುವಿನ ನಗೆ ಬೀರಿತು 'ರಾಧಾ ರಮಣ' ತಂಡ.

ಯಾರು ಈ ಪ್ರಚೇತ್?

ಯಾರು ಈ ಪ್ರಚೇತ್?

ದಾವಣಗೆರೆಯ ಅರ್ಚಕರ ಕುಟುಂಬದ ಮೂರು ವರ್ಷದ ಮುದ್ದು ಹುಡುಗ ಪ್ರಚೇತ್. ಮುದ್ದು ಮುದ್ದಾಗಿ ಕಾಣುವ ಪ್ರಚೇತ್ ಗೆ ಕಿವಿ ಕೇಳಲ್ಲ. ಮಾತು ಬರಲ್ಲ. ಈಗಾಗಲೇ ಪ್ರಚೇತ್ ಗಾಗಿ ಒಂದು ಆಪರೇಶನ್ ಆಗಿ, ಒಂದು ಕಿವಿಗೆ ಕಾಕ್ಲಿಯರ್ ಇಂಪ್ಲಾಂಟ್ ಆಗಿದೆ. ಎಲ್ಲರಂತೆ ಪ್ರಚೇತ್ ಗೆ ಕಿವಿ ಕೇಳಬೇಕು, ಮಾತು ಬರಬೇಕು ಅಂದ್ರೆ ಇನ್ನೊಂದು ಆಪರೇಶನ್ ಆಗಬೇಕು. ಇನ್ನೊಂದು ಕಿವಿಗೂ ಕಾಕ್ಲಿಯರ್ ಇಂಪ್ಲಾಂಟ್ ಮಾಡಿಸಬೇಕು. ಇಷ್ಟೆಲ್ಲ ಆಗಬೇಕು ಅಂದ್ರೆ, ಹದಿನಾಲ್ಕು ಲಕ್ಷ ರೂಪಾಯಿ ಬೇಕು. ಪ್ರಚೇತ್ ಚಿಕಿತ್ಸೆ ವೆಚ್ಚಕ್ಕಾಗಿ 'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ನಡೆಯಿತು. ಕಲರ್ಸ್ ಕುಟುಂಬದ ಕಡೆಯಿಂದ ಪ್ರಚೇತ್ ಕುಟುಂಬಕ್ಕೆ ಒಂಬತ್ತು ಲಕ್ಷ ರೂಪಾಯಿ ಲಭಿಸಿತು.

ಭಾವುಕರಾದ ಪ್ರಚೇತ್ ತಾಯಿ

ಭಾವುಕರಾದ ಪ್ರಚೇತ್ ತಾಯಿ

''ಮೊದಲನೇ ಬಾರಿ ಬಂದಾಗ ನಾವು ಒಂದು ಲಕ್ಷ ಗೆದ್ದಿದ್ವಿ. ಈಗ ಅದೇ ಇಷ್ಟೊಂದು ದುಡ್ಡಾಗಿ ಬೆಳೆಯುತ್ತೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಕಲರ್ಸ್ ಕನ್ನಡ ಫ್ಯಾಮಿಲಿ ನಮಗೆ ತುಂಬಾ ಸಪೋರ್ಟ್ ಮಾಡಿ ಒಂಬತ್ತು ಲಕ್ಷ ಗೆದ್ದು ಕೊಟ್ಟಿದ್ದಾರೆ. ತುಂಬಾ ಖುಷಿ ಆಗುತ್ತಿದೆ. ನಿಮಗೆ ನಾವು ತುಂಬಾ ಋಣಿ ಆಗಿದ್ದೇವೆ'' ಎಂದು ಪ್ರಚೇತ್ ತಾಯಿ ಭಾವುಕರಾದರು.

ದೇವರೇ ಸಹಾಯ ಮಾಡಿದ್ದಾನೆ

ದೇವರೇ ಸಹಾಯ ಮಾಡಿದ್ದಾನೆ

''ದೇವರು ಯಾವುದೋ ರೂಪದ ಮೂಲಕ ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಇದೇ ಸಾಕ್ಷಿ'' ಎಂದರು ಪ್ರಚೇತ್ ತಂದೆ.

'ಫ್ಯಾಮಿಲಿ ಪವರ್' ಮುಕ್ತಾಯ

'ಫ್ಯಾಮಿಲಿ ಪವರ್' ಮುಕ್ತಾಯ

ಮನರಂಜನೆ ಜೊತೆಗೆ ಒಂದೊಳ್ಳೆ ಕಾರ್ಯಕ್ಕೆ 'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ಸಾಕ್ಷಿ ಆಯಿತು. ಇಪ್ಪತ್ತು ವಾರಗಳ ಕಾಲ ಪ್ರಸಾರವಾದ ಈ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿ ತಂದಿದೆ ಅಂದ್ರೆ ಖಂಡಿತ ತಪ್ಪಾಗಲಿಕ್ಕಿಲ್ಲ.

More from Filmibeat

English summary
Family Power, reality show hosted by Power Star Puneeth Rajkumar grand finale is conducted mainly to give Financial Assistance for 3 year old Prachet. 'Radha Ramana' team won Rs.9 Lakh in Family Power Grand Finale. Prachet received Rs.9 lakh financial assistance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X