»   » ಪುನೀತ್ ನಿರೂಪಣೆಯ 'ಫ್ಯಾಮಿಲಿ ಪವರ್' ಕಾರ್ಯಕ್ರಮಕ್ಕೆ ಇದೇ ವಾರ ಶುಭಂ.!

ಪುನೀತ್ ನಿರೂಪಣೆಯ 'ಫ್ಯಾಮಿಲಿ ಪವರ್' ಕಾರ್ಯಕ್ರಮಕ್ಕೆ ಇದೇ ವಾರ ಶುಭಂ.!

Posted By:
Subscribe to Filmibeat Kannada
ಪುನೀತ್ ನಿರೂಪಣೆಯ 'ಫ್ಯಾಮಿಲಿ ಪವರ್' ಕಾರ್ಯಕ್ರಮಕ್ಕೆ ಇದೇ ವಾರ ಶುಭಂ | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಮುಕ್ತಾಯದ ಹಂತ ತಲುಪಿದೆ.

ವೀಕ್ಷಕರಿಂದ ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ನಿಂದ ಭಾರಿ ಮೆಚ್ಚುಗೆ ಗಳಿಸಿದ ರಿಯಾಲಿಟಿ ಶೋಗಳ ಪೈಕಿ 'ಫ್ಯಾಮಿಲಿ ಪವರ್' ಕೂಡ ಒಂದು. ಕ್ವಿಜ್, ಗೇಮ್ಸ್ ಬಾಂಡ್ ಹಾಗೂ ಲಕ್ಷ ಪ್ರಶ್ನೆ ರೌಂಡ್ ಗಳನ್ನು ಹೊಂದಿದ್ದ 'ಫ್ಯಾಮಿಲಿ ಪವರ್' ಕಾರ್ಯಕ್ರಮದ ಕೊನೆಯ ಸಂಚಿಕೆಯ (ಗ್ರ್ಯಾಂಡ್ ಫಿನಾಲೆ) ಚಿತ್ರೀಕರಣ ಇದೇ ವಾರಾಂತ್ಯ (ಶನಿವಾರ) ಸಂಜೆ 5 ಗಂಟೆಯಿಂದ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ.

ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದು, ಆಸಕ್ತರು ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಭೇಟಿ ನೀಡಬಹುದು. ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ಆದ್ರೆ, ಮೊದಲು ಬಂದವರಿಗೆ ಆದ್ಯತೆ ಇರಲಿದೆ.

Family Power grand finale shooting on march 31st

'ಬಿಗ್ ಬಾಸ್' ವಿನ್ನರ್ ಪ್ರಥಮ್, ರನ್ನರ್ ಅಪ್ ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ, ಸಮೀರಾಚಾರ್ಯ, ನಟಿ ಸುಜಾತಾ, ಗಾಯಕಿ ಇಂದು ನಾಗರಾಜ್ ಸೇರಿದಂತೆ ಕೆಲ ಸೆಲೆಬ್ರಿಟಿಗಳ ಕುಟುಂಬದವರೂ ಕೂಡ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಯಾವ ಶೋ ಪ್ರಸಾರ ಆಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

'ಕನ್ನಡದ ಕೋಟ್ಯಾಧಿಪತಿ' ಬಳಿಕ ಕಿರುತೆರೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತ್ಯಕ್ಷವಾಗಿದ್ದು 'ಫ್ಯಾಮಿಲಿ ಪವರ್' ಮೂಲಕವೇ. ಈಗ ಇದೇ ಶೋಗೆ ಶುಭಂ ಹಾಡುವ ಸಮಯ ಬಂದಿದೆ.

English summary
Family Power, reality show hosted by Power Star Puneeth Rajkumar grand finale shooting to be held on March 31st at Innovative Film City, Bidadi, from 5 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X