ಭಾರತದಲ್ಲಿ ಮಕ್ಕಳ ಕಾರ್ಟೂನ್ ಲೈವ್ ಶೋ 'ಮಾಶಾ ಆಂಡ್ ದಿ ಬೇರ್': ಬೆಂಗಳೂರಿಗೆ ಬರೋದ್ಯಾವಾಗ?
ಕಾರ್ಟೂನ್ ಶೋಗಳು ಅಂದರೆ ಮಕ್ಕಳಿಗೆ ಎಲ್ಲಿಲ್ಲ ಪ್ರೀತಿ. ಟಿವಿಯಲ್ಲಿ, ಮೊಬೈಲ್‌ನಲ್ಲಿ ಕಾರ್ಟೂನ್ ಬಂದರೆ ಸಾಕು ಅವರ ಗಮನವನ್ನು ಬೇರೆ ಕಡೆ ಸೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಕಾರ್ಟೂನ್ ಶೋಗಳಲ್ಲಿ 'ಮಾಶಾ ಅಂಡ್ ದಿ ಬೇರ್' ಕೂಡ ಒಂದು. ಈ ಶೋಗಳಲ್ಲಿ ಬರುವ ಪಾತ್ರಗಳನ್ನು ಮಕ್ಕಳಿಗೆ ಲೈವ್ ಆಗಿ ಸಿಕ್ಕರೆ ಹೇಗೆ?
'ಮಾಶಾ ಅಂಡ್ ದಿ ಬೇರ್' ಕಾರ್ಟೂನ್ ಶೋ ಲೈವ್ ಆಗಿ ನೋಡುವ ಅವಕಾಶವಿದೆ. ಮನರಂಜನಾ ಕ್ಷೇತ್ರದಲ್ಲಿ ವಿಶಿಷ್ಟವಾದ ಕಾರ್ಯಕ್ರಮಗಳನ್ನು ನೀಡುತ್ತಿರುವ ವಯಕಾಮ್ 18 ಲೈವ್, ಮಕ್ಕಳಿಗಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. 'ನಿಕ್ ಜ್ಯೂನಿಯರ್' ಕಾರ್ಟೂನ್ ಚಾನೆಲ್‌ನಲ್ಲಿ ಜನಪ್ರಿಯ ಕಾರ್ಟೂನ್ ಸಿರೀಸ್ 'ಮಾಶಾ ಅಂಡ್ ದಿ ಬೇರ್' ಪ್ರಸಾರ ಆಗುತ್ತಿದೆ.

ಮಕ್ಕಳ ನೆಚ್ಚಿನ ಕ್ಯಾರೆಕ್ಟರ್‌ಗಳಾದ ಮಾಶಾ ಮತ್ತು ಬೇರ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಈ ಲೈವ್ ಶೋ ಟೂರ್, ಡಿಸೆಂಬರ್ 23ರಿಂದ ಮುಂಬೈನಿಂದ ಪ್ರಾರಂಭಗೊಂಡು, ನಂತರ ಭಾರತದ ಮಹಾನಗರಗಳಾದ ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿಯೂ ಪ್ರದರ್ಶನ ನೀಡಲಾಗುತ್ತಿದೆ.
ನೀವು ಪತ್ತೇದಾರಿಗಳಾಗಬಹುದು
ಮಾಶಾ ಮತ್ತು ಬೇರ್ ಕಾರ್ಟೂನ್ ಶೋಗೆ 'ಎ ವೆರಿ ಡಿಟೆಕ್ಟೀವ್ ಸ್ಟೋರಿ' ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ಲೈವ್ ಶೋನಲ್ಲಿ ಮಾಶಾ ಮತ್ತು ಬೇರ್ ಸೇರಿಕೊಂಡು ಮನೆಯಲ್ಲಿ ಕಳೆದುಹೋಗಿರುವ ವಸ್ತುವೊಂದನ್ನು ಹುಡುಕಲು ಪತ್ತೇದಾರಿಗಳಾಗಿ ಕೆಲಸ ಮಾಡಲಿದ್ದಾರೆ. ಡಿಟೆಕ್ಟಿವ್ ಸ್ಟೋರಿ ಅಂದರೆ ಹಾಗೇ ಅಲ್ಲಿ ರೋಚಕತೆ, ಕುತೂಹಲ, ತಮಾಷೆ ಎಲ್ಲವೂ ಇರುತ್ತೆ.
ಈ ಲೈವ್ ಶೋನಲ್ಲೊಂದು ವಿಶೇಷತೆ ಇರುತ್ತೆ. ತಮ್ಮ ಪತ್ತೇದಾರಿ ಕೆಲಸದಲ್ಲಿ ಮಾಶಾ ಮತ್ತು ಬೇರ್ ಪ್ರೇಕ್ಷಕರ ಸಹಾಯವನ್ನೂ ಪಡೆಲಿದ್ದಾರೆ. ಶೋಗೆ ಬಂದಿದ್ದ ಪ್ರೇಕ್ಷರ ಬಳಿ ಬಂದು, ಅವರ ಜೊತೆ ಮಾತಾಡುತ್ತಾ ಅವರನ್ನು ನಗಿಸುತ್ತ, ಅವರಲ್ಲಿ ಕುತೂಹಲ ಕೆರಳಿಸುತ್ತ, ಅವರನ್ನೂ ಪತ್ತೇದಾರಿಗಳನ್ನಾಗಿ ಮಾಡುವ ಕಥೆಯೇ ಮಾಶಾ ಅಂಡ್ ದಿ ಬೇರ್ ಲೈವ್ ಶೋನ ಥೀಮ್. ವಿಶಾಲ್ ಅಸ್ರಾಣಿ ಈ ಶೋವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಯಾವ್ಯಾವ ಪಾತ್ರಗಳನ್ನು ನೋಡ್ಬಹುದು?
ಮಾಶಾ ಮತ್ತು ಬೇರ್ ಬಗ್ಗೆ ಮಕ್ಕಳಿಗೆ ಹೇಳುವ ಅಗತ್ಯವೇ ಇಲ್ಲ. ಈ ವಿಷಯ ಎಲ್ಲ ಮಕ್ಕಳಿಗೂ ಗೊತ್ತೇ ಇರುತ್ತೆ. ಹಾಗಂತ ಈ ಶೋನಲ್ಲಿ ಕೇವಲ ಆ ಎರಡು ಪಾತ್ರಗಳು ಮಾತ್ರ ಬರೋದಿಲ್ಲ. ಈ ಸೀರೀಸ್‌ನಲ್ಲಿ ಬರುವ ಪ್ರೊಫೆಸರ್ ನಾನ್‌ಬೆಲೆವಿಯಸ್, ರೋಸಿ, ಪಾಂಡಾ, ಸ್ಲೈ ಫಾಕ್ಸ್ ಮತ್ತು ಸಿಲ್ಲಿ ಫಾಕ್ಸ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಮನರಂಜಿಸಲಿವೆ.
ಯಾವಾಗ ಎಲ್ಲಿ? ಹೋಗೋದು ಹೇಗೆ?
'ಮಾಶಾ ಅಂಡ್ ದಿ ಬೇರ್' ಲೈವ್ ಶೋ ತಂಡ, 2024 ಫೆಬ್ರುವರಿ 10-11ರಂದು ಬೆಂಗಳೂರಿಗೆ ಬರಲಿದೆ. ಬೆಂಗಳೂರಿನ ಮಾಶಾ, ಬೇರ್ ಅಭಿಮಾನಿಗಳಿಗಾಗಿ ಎರಡು ದಿನ ಹಲವು ಪ್ರದರ್ಶನಗಳು ನಡೆಸಲು ಪ್ಲ್ಯಾನಿಂಗ್ ಮಾಡಲಾಗಿದೆ.
'ಮಾಶಾ ಆಂಡ್ ದಿ ಬೇರ್' ಶೋದಲ್ಲಿ ನೀವೂ ಪಾಲ್ಗೊಳ್ಳಲು ಅವಕಾಶವಿದೆ. ನಿಮ್ಮ ಟಿಕೆಟ್‌ಗಳನ್ನು www.kidsdayout.co ದಲ್ಲಿ ಈಗಲೇ ಬುಕ್ ಮಾಡಬಹುದು. ಎಚ್‌ಎಸ್‌ಬಿಸಿ ಕಾರ್ಡ್ ಇರುವವರಿಗೆ ಶೋ ಪ್ರಾರಂಭವಾಗುವ 72 ಗಂಟೆಗಳಿಗೂ ಮುನ್ನ ತಮ್ಮ ಇಷ್ಟದ ಸೀಟ್ ಬುಕ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ಶೋಗೆ ಬಂದ ಪಾತ್ರಗಳನ್ನು ಭೇಟಿ ಮಾಡಿ ಶುಭಾಶಯ ಕೋರುವ ಅವಕಾಶವನ್ನೂ ನೀಡಲಾಗುತ್ತಿದೆ. ಟಿಕೆಟ್ ದರದಲ್ಲಿಯೂ ವಿಶೇಷ ರಿಯಾಯ್ತಿ ಇದೆ.


Click it and Unblock the Notifications











